ಗ್ಲೇನ್ ಮ್ಯಾಕ್ಸ್ವೆಲ್ ಬಗ್ಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಇದಕ್ಕಾಗಿಯೇ ಐಪಿಎಲ್ 2021 ಹರಾಜಿನಲ್ಲಿ 10.75 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆದರೆ, ಇವರು ತುಂಬಾನೇ ಕಳಪೆ ಪ್ರದರ್ಶನ ನೀಡಿದ್ದರು. ಇವರ ಎವರೇಜ್ ರನ್ ರೇಟ್ ಕೇವಲ 15.35 ಇದ್ದರೆ, ಸ್ಟ್ರೈಕ್ ರೇಟ್, 101.88 ಇದೆ. ಸತತ ಕಳಪೆ ಪ್ರದರ್ಶನ ನೀಡಿದ್ದರೂ ಅವರನ್ನು ನಿರಂತರವಾಗಿ ಆಡಿಸಲಾಗಿತ್ತು. ಆದಾಗ್ಯೂ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಜೇಮ್ಸ್ ನೀಶಮ್: ಜೇಮ್ಸ್ ನೀಶಮ್ ಆಲ್ರೌಂಡರ್ ಎನ್ನುವ ಕಾರಣಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ, ಮೊದಲು ಆಡಿದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಆಡಿದ ಐದು ಪಂದ್ಯಗಳಲ್ಲಿ ಕೇವಲ 19ರನ್ ಕಲೆ ಹಾಕಿದ್ದಾರೆ. ಬೌಲಿಂಗ್ನಲ್ಲಿ ಕಿತ್ತಿದ್ದು ಕೇವಲ 2 ವಿಕೆಟ್ ಮಾತ್ರ.
ಕೃಷ್ಣಪ್ಪ ಗೌತಮ್:ಕನ್ನಡಿಗ ಕೃಷ್ಣಪ್ಪ ಗೌತಮ್ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕೆ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ಖರೀದಿ ಮಾಡಿತ್ತು. ಆದರೆ, ಕಳೆದ ಐಪಿಎಲ್ನಲ್ಲಿ ಅವರು ಹೊಡೆದಿದ್ದು ಕೇವಲ 42 ರನ್. ಬೌಲಿಂಗ್ನಲ್ಲಿ ಎರಡು ವಿಕೆಟ್ ಕಿತ್ತಿದ್ದರೂ ಎಕಾನಮಿ 10.50 ಇದೆ. ಇದು ಪಂಜಾಬ್ ತಂಡಕ್ಕೆ ತುಟ್ಟಿ ಆಗಿತ್ತು.