#1 ಕೇದರ್ ಜಾಧವ್: ಸಿಎಸ್ಕೆ ಫ್ರಾಂಚೈಸಿಯು ಕೇದರ್ ಜಾಧವ್ ಅವರನ್ನು ಖರೀದಿಸಿದ್ದು ಬರೋಬ್ಬರಿ 7.8 ಕೋಟಿ ರೂ.ಗೆ ಎಂದರೆ ನಂಬಲೇಬೇಕು. 2019 ರಲ್ಲಿ 14 ಪಂದ್ಯಗಳನ್ನಾಡಿದ್ದ ಜಾಧವ್ ಕಲೆಹಾಕಿದ್ದು ಮಾತ್ರ 162 ರನ್ಗಳು. ಇದಾಗ್ಯೂ 2020 ರಲ್ಲೂ ಸಿಎಸ್ಕೆ ಕೇದರ್ ಜಾಧವ್ ಅವರನ್ನು ಉಳಿಸಿಕೊಂಡಿತ್ತು. ಆದರೆ ಕಳೆದ ಸೀಸನ್ನಲ್ಲಿ 8 ಪಂದ್ಯಗನ್ನಾಡಿದ ಜಾಧವ್ ಬರೀ 62 ರನ್ ಗಳಿಸಿ ಹೀನಾಯ ಪ್ರದರ್ಶನ ನೀಡಿದ್ದರು. ಹೀಗಾಗಿ ಕೇದರ್ ಜಾಧವ್ ಅವರನ್ನೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಕೈ ಬಿಡಲಿರುವುದು ಬಹುತೇಕ ಖಚಿತ.