IPL 2021: ಇಂದು CSK vs DC ಹಣಾಹಣಿ; ಎರಡು ತಂಡದಿಂದ ಕಣಕ್ಕಿಳಿಯುವ ಸಂಭಾವ್ಯ ಆಟಗಾರರು ಇವರೇನಾ?
CSK vs DC: ಎರಡು ತಂಡಗಳ ಈವರೆಗಿನ ಪ್ರದರ್ಶನವನ್ನು ನೋಡುವುದಾದರೆ ಮಾಹಿ ನಾಯಕತ್ವದ ಸಿಎಸ್ಕೆ ತಂಡ ಮೈಲುಗೈ ಸಾಧಿಸಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕಾಪಿಟಲ್ಸ್ ತಂಡವಿಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಬಾರಿಯ ಮೊದಲ ಐಪಿಎಲ್ ಪಂದ್ಯವನ್ನು ಎದುರಿಸುತ್ತಿದೆ. ಬಲಿಷ್ಠ ತಂಡಗಳು ಕೊರೊನಾದ ನಡುವೆಯೂ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಂಡು ಸೆಣೆಸಾಡಲಿದೆ.
2/ 9
ಚೆನ್ನೈ ತಂಡದ ನಾಯಕತ್ವ ವಹಿಸಿರುವ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸಿದರೆ ಅತ್ತ ಡೆಲ್ಲಿ ಕ್ಯಾಪಿಟಲ್ ತಂಡವನ್ನು ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ. ಮಾಹಿ ತಂಡ ವಿಶಲ್ ಹೊಡೆಯುವ ಮೂಲಕ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸು ತವಕದಲ್ಲಿದ್ದಾರೆ.
3/ 9
ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಜಯ ಸಾಧಿಸಲು ಸಿದ್ಧವಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಎಲ್ಲಾ ತಂಡದೊಂದಿದೆ ಸೆಣಸಲು ತಯಾರಾಗಿ ನಿಂತಿದೆ. ಎರಡು ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದೆ.
4/ 9
ಎರಡು ತಂಡಗಳ ಈವರೆಗಿನ ಪ್ರದರ್ಶನವನ್ನು ನೋಡುವುದಾದರೆ ಮಾಹಿ ನಾಯಕತ್ವದ ಸಿಎಸ್ಕೆ ತಂಡ ಮೈಲುಗೈ ಸಾಧಿಸಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ 15 ಬಾರಿ ಸಿಎಸ್ಕೆ ಗೆಲುವು ಸಾಧಿಸಿದರೆ. ಡೆಲ್ಲಿ ತಂಡ 8 ಬಾರಿ ಮಾತ್ರ ಗೆದ್ದಿದೆ.
5/ 9
ಇಂದಿನ ಪಂದ್ಯದಲ್ಲಿ ಚೆನ್ನೈ ತಂಡದಿಂದ ಕಣಕ್ಕಿಳಿಯುವ ಸಂಭಾವ್ಯ ಆಟಗಾರರು ಹೆಸರು: 1) ಫ್ಯಾಫ್ ಡು ಪ್ಲೆಸಿಸ್ 2) ರಾಬಿನ್ ಉತ್ತಪ್ಪ / ರುತುರಾಜ್ ಗಾಯಕವಾಡ್ 3) ಅಂಬಾಟಿ ರಾಯುಡು 4) ಸುರೇಶ್ ರೈನಾ 5) ಸ್ಯಾಮ್ ಕರ್ರನ್ 6) ಎಂ.ಎಸ್.ಧೋನಿ (ನಾಯಕ) 7) ರವೀಂದ್ರ ಜಡೇಜಾ 8) ಮೊಯೀನ್ ಅಲಿ 9) ಶಾರ್ದುಲ್ ಠಾಕೂರ್ 10) ದೀಪಕ್ ಚಹರ್ 11) ಇಮ್ರಾನ್ ತಾಹಿರ್
6/ 9
ಡೆಲ್ಲಿ ತಂಡದಿಂದ ಕಣಕ್ಕಿಳಿಯುವ ಸಂಭಾವ್ಯ ಆಟಗಾರರ: 1) ಪೃಥ್ವಿ ಶಾ 2) ಶಿಖರ್ ಧವನ್ 3) ಅಜಿಂಕ್ಯ ರಹಾನೆ 4) ಶಿಮ್ರಾನ್ ಹೆಟ್ಮಿಯರ್ 5) ರಿಷಭ್ ಪಂತ್ (ನಾಯಕ) 6) ಮಾರ್ಕಸ್ ಸ್ಟೋನಿಸ್ 7) ಆರ್ ಅಶ್ವಿನ್ 8) ಅಮಿತ್ ಮಿಶ್ರಾ 9) ಕ್ರಿಸ್ ವೋಕ್ಸ್ 10) ಇಶಾಂತ್ ಶರ್ಮಾ 11) ಸ್ಟೀವ್ ಸ್ಮಿತ್
7/ 9
ಪಿಚ್ ಹೇಗಿದೆ?: ಮುಂಬೈನ ವಾಂಖೆಡೆ ಮೈದಾನವು ಬ್ಯಾಟಿಂಗ್ ಮಾಡಲು ಯೋಗ್ಯವಾಗಿದ್ದರು, 200ಕ್ಕಿಂತ ಹೆಚ್ಚಿನ ರನ್ ನಿರೀಕ್ಷಿಸುವು ಕಷ್ಟಕರ. ಮತ್ತೊಂದೆಡೆ ಸ್ಟಿನ್ ಬೌಲಿಂಗ್ ಮಾಡಲು ಅಷ್ಟೇನು ಯೋಗ್ಯವಾಗಿಲ್ಲ. 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಆಟಗಾರರ ಪರಿಸ್ಥಿತಿ ಗೊತ್ತಾಗಲಿದೆ.
8/ 9
ಆದರೆ ಚೆನ್ನೈ ತಂಡದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಮೇಲೆ ಭಾರಿ ನಿರೀಕ್ಷೆ ಕಾಣುತ್ತಿದೆ. ಅತ್ತ ಡೆಲ್ಲಿ ತಂಡದಲ್ಲಿ ಬೌಲರ್ ಅಶ್ವಿನ್ ಮೇಲೂ ನಿರೀಕ್ಷೆಯಿದೆ. ಇಂದಿನ ವಾಂಖೆಡೆ ಮೈದಾನದ ಪಿಚ್ ಸ್ಟೀನ್ ಮಾಡಲು ಯೋಗ್ಯವಾಗಿಲ್ಲವಾಗಿದ್ದರು. ಅವರ ಅನುಭವದಿಂದ ತಂಡದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಅವರಲ್ಲಿದೆ.