Virat Kohli: 2008 ಐಪಿಎಲ್ ಹರಾಜಿನಲ್ಲಿ ಕೊಹ್ಲಿಯನ್ನ ರಿಜೆಕ್ಟ್ ಮಾಡಿತ್ತು ಈ ಫ್ರಾಂಚೈಸಿ!
IPL: 2008ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಗಿನ ಭಾರತದ ಅಂಡರ್-19 ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರನ್ನು ಖರೀದಿ ಮಾಡಿ ಈವರೆಗೆ ತಂಡದಲ್ಲೇ ಇರಿಸಿಕೊಂಡಿದೆ.
ಸದ್ಯದ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ಮನ್ ಎಂದರೆ ಅದು ವಿರಾಟ್ ಕೊಹ್ಲಿ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ಕೊಹ್ಲಿ ಅದೆಷ್ಟೋ ದಾಖಲೆಗಳನ್ನು ಅಳಿಸಿಹಾಕಿದ್ದಾರೆ.
2/ 10
ಐಪಿಎಲ್ ಇತಿಹಾಸದಲ್ಲಿ ಈವರೆಗೆ ಬೇರೆ ಫ್ರಾಂಚೈಸಿ ಸೇರದೆ ಒಂದೇ ತಂಡದಲ್ಲಿ ಆಡುತ್ತಿರುವ ಕೆಲವೇ ಕೆಲವು ಆಟಗಾರರ ಪೈಕಿ ಕೊಹ್ಲಿ ಕೂಡ ಒಬ್ಬರು.
3/ 10
ಕಳೆದ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ನಾಲ್ಕರ ಘಟ್ಟಕ್ಕೆ ತಲುಪಿತ್ತು.ಕೊಹ್ಲಿ ಆಟ ಕೂಡ ಭರ್ಜರಿ ಆಗಿತ್ತು.
4/ 10
ಈ ಬಾರಿ ಕೂಡ ಕೊಹ್ಲಿ ಹಾಗೂ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
5/ 10
2008ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಗಿನ ಭಾರತದ ಅಂಡರ್-19 ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರನ್ನು ಖರೀದಿ ಮಾಡಿ ಈವರೆಗೆ ತಂಡದಲ್ಲೇ ಇರಿಸಿಕೊಂಡಿದೆ.
6/ 10
ಆದರೆ, ಆರ್ಸಿಬಿ ಕೊಹ್ಲಿಯನ್ನು ಖರೀದಿ ಮಾಡುವ ಮುನ್ನ ಮತ್ತೊಂದು ಫ್ರಾಂಚೈಸಿ ಅಂದಿನ ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್ಡೆವಿಲ್ಸ್) ಹರಾಜಿನಲ್ಲಿ ಕೊಹ್ಲಿಯನ್ನು ರಿಜೆಕ್ಟ್ ಮಾಡಿತ್ತಂತೆ.
7/ 10
2008ರ ಐಪಿಎಲ್ ಹರಾಜಿನಲ್ಲಿ ಪ್ರತಿ ತಂಡಗಳಿಗೆ ಇಬ್ಬರು ಅಂಡರ್-19 ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿತ್ತು.
8/ 10
ಈ ಸಂದರ್ಭ ಡೆಲ್ಲಿ ಡೇರ್ಡೆವಿಲ್ಸ್ ಆಗಿನ ಅಂಡರ್-19 ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯನ್ನು ಬಿಟ್ಟು 50 ಸಾವಿರ ಡಾಲರ್ಗೆ ಪ್ರದೀಪ್ ಸಂಗ್ವಾನ್ರನ್ನು ಖರೀದಿ ಮಾಡಿತ್ತು.
9/ 10
ಇದಾದ ಬೆನ್ನಲ್ಲೆ ಆರ್ಸಿಬಿ ಫ್ರಾಂಚೈಸಿ 30 ಸಾವಿರ ಡಾಲರ್ಗೆ ಕೊಹ್ಲಿಯನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು.
10/ 10
ಅಲ್ಲಿಂದ ಕೊಹ್ಲಿ ಈವರೆಗೆ ಮಿಂಚು ಹರಿಸುತ್ತಿದ್ದರೆ, ಡೆಲ್ಲಿ ಖರೀದಿ ಮಾಡಿದ ಆಟಗಾರ ಪ್ರದೀಪ್ ಮೂರು ವರ್ಷ ಆಡಿ ಯಶಸ್ಸು ಸಿಗದೆ ಬಳಿಕ ಹೊರ ಬಿದ್ದರು.