IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

Chennai Super Kings: ಮುಂದಿನ ಆವೃತ್ತಿಗೆ ಚೆನ್ನೈ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ಹಿಂದೆ ಹೇಳಿರುವಂತೆ ಹಿರಿಯ ಆಟಗಾರರಿಗೆ ಗೇಟ್​ಪಾಸ್ ಕೊಟ್ಟು ಯುವಕರಿಗೆ ಮಣೆಹಾಕಲು ಚೆನ್ನೈ ಮುಂದಾಗಿದೆ.

First published:

  • 110

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟೂರ್ನಿಯಿಂದ ಮೊದಲು ಹೊರಬಿದ್ದ ತಂಡ ಚೆನ್ನೈ ಸೂಪರ್ ಕಿಂಗ್ಸ್. ಧೋನಿ ತಂಡದ ಪಾಲಿಗೆ ಈ ಬಾರಿ ಅತ್ಯಂತ ಕಳಪೆ ಐಪಿಎಲ್ ಆಗಿತ್ತು. 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಕೇವಲ 7ರಲ್ಲಿ.

    MORE
    GALLERIES

  • 210

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಹೀಗಾಗಿ ಮುಂದಿನ ಆವೃತ್ತಿಗೆ ಚೆನ್ನೈ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ಹಿಂದೆ ಹೇಳಿರುವಂತೆ ಹಿರಿಯ ಆಟಗಾರರಿಗೆ ಗೇಟ್​ಪಾಸ್ ಕೊಟ್ಟು ಯುವಕರಿಗೆ ಮಣೆಹಾಕಲು ಚೆನ್ನೈ ಮುಂದಾಗಿದೆ.

    MORE
    GALLERIES

  • 310

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅಲಭ್ಯತೆ ಈ ಬಾರಿ ಸಿಎಸ್​ಕೆಗೆ ದೊಡ್ಡ ಹಿನ್ನಡೆಯಾಗಿದ್ದು ನಿಜ. ಆದರೆ, ಶೇನ್ ವಾಟ್ಸನ್, ಡುಪ್ಲೆಸಿಸ್, ಧೋನಿ, ಜಡೇಜಾರಂತಹ ಅನುಭವಿಗಳಿದ್ದರೂ ವಿಫಲವಾಯಿತು.

    MORE
    GALLERIES

  • 410

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಐಪಿಎಲ್ ಮುಗಿದ ಬೆನ್ನಲ್ಲೆ ವಾಟ್ಸನ್ ಕ್ರಿಕೆಟ್​ಗೆ ಸಂಪೂರ್ಣ ವಿದಾಯ ಘೋಷಿಸಿದರು. ಹೀಗಾಗಿ ಇವರ ಜಾಗಕ್ಕೆ ಮುಂಬೈ ತಂಡದಲ್ಲಿರುವ ಕ್ರಿಸ್ ಲಿನ್ ಅವರನ್ನು ಟ್ರೇಡ್ ಮಾಡಲು ಮುಂದಾಗಬಹುದು ಎಂದು ಹೇಳಲಾಗಿದೆ.

    MORE
    GALLERIES

  • 510

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಕ್ರಿಸ್ ಲಿನ್ ಐಪಿಎಲ್ 2020ರಲ್ಲಿ ಮುಂಬೈ ಇಂಡಿಯನ್ಸ್ ಪಾಲಾಗಿದ್ದರು. ಆದರೆ, ಇವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ನೀಡಲಿಲ್ಲ. ಇತ್ತ ಸಿಎಸ್​ಕೆ ತಂಡದ ಪರ ರುತುರಾಜ್ ಗಾಯಕ್ವಾಡ್ ಜೊತೆ ಸ್ಫೋಟಕ ಆರಂಭ ಒದಗಿಸುವ ಆಟಗಾರನ ಅವಶ್ಯತೆಯಿದೆ. ಹೀಗಾಗಿ ಲಿನ್ ಚೆನ್ನೈ ಪಾಲಾದರೆ ಅಚ್ಚರಿಯಿಲ್ಲ.

    MORE
    GALLERIES

  • 610

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಸಿಎಸ್​ಕೆಯ ಸ್ಪಿನ್ ವಿಭಾಗ ಈ ಬಾರಿ ತುಂಬಾ ದುರ್ಬಲವಾಗಿತ್ತು. 6.75 ಕೋಟಿ ನೀಡಿ ಖರೀದಿ ಮಾಡಿದ ಪಿಯೂಷ್ ಚಾವ್ಲಾ ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಹೀಗಾಗಿ ರಾಜಸ್ಥಾನ್ ತಂಡದಲ್ಲಿರುವ ಮಯಾಂಕ್ ಮಾರ್ಕಂಡೆ ಅವರನ್ನು ಬದಲಾವಣೆ ನಿಯಮದಡಿಯಲ್ಲಿ ಚೆನ್ನೈ ಕೊಂಡುಕೊಳ್ಳಬಹುದು.

    MORE
    GALLERIES

  • 710

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಸಿಎಸ್​ಕೆ ತಂಡಕ್ಕೆ ಆಲ್ರೌಂಡರ್ ಅಗತ್ಯ ತುಂಬಾನೆ ಇದೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಅಫ್ಘಾನ್ ಆಟಗಾರ ಮೊಹಮ್ಮದ್ ನಬಿ ಅವರನ್ನು ಟ್ರೇಡ್ ಮಾಡುವತ್ತ ಚೆನ್ನೈ ಕಣ್ಣು ಹಾಯಿಸುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 810

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದ ಬೆನ್ನಲ್ಲೆ ಐಪಿಎಲ್ 2021ರ ಸುದ್ದಿ ಗರಿಗೆದರಿದೆ. ಬಿಸಿಸಿಐ ಕೂಡ 14ನೇ ಆವೃತ್ತಿ ಐಪಿಎಲ್​ನ ಸಿದ್ಧತೆಯಲ್ಲಿದ್ದು ಕೆಲ ಮಾಹಿತಿಯನ್ನು ಹೊರಹಾಕಿದೆ.

    MORE
    GALLERIES

  • 910

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಈಗಾಗಲೇ ಮುಂದಿನ ಐಪಿಎಲ್ನಲ್ಲಿ ಒಟ್ಟು 9 ತಂಡಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ತಂಡದ ಆಡುವ ಬಳಗದಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.

    MORE
    GALLERIES

  • 1010

    IPL 2021 Auction: ಬದಲಾವಣೆಯತ್ತ ಮೊದಲ ಹೆಜ್ಜೆಯಿಟ್ಟ CSK: ಟ್ರೇಡ್​ನಲ್ಲಿ 3 ಸ್ಟಾರ್ ಆಟಗಾರರು ಚೆನ್ನೈ ಪಾಲು?

    ಈಗಿರುವ 8 ತಂಡಗಳ ಜತೆಗೆ ಒಂದು ಹೊಸ ತಂಡಗಳನ್ನು ಸೇರಿಸಲು ಈಗಿರುವ ತಂಡಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬ ಭೀತಿ ಉಂಟಾದ ಹಿನ್ನಲೆಯಲ್ಲಿ ತಂಡಗಳ ಮನವೊಲಿಸಲು ಆಡುವ ಬಳಗದಲ್ಲಿ ಐವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸುವತ್ತ ಚಿತ್ತ ನೆಟ್ಟಿದೆ.

    MORE
    GALLERIES