IPL 2020: ಕೊಹ್ಲಿ-ರೋಹಿತ್-ಧೋನಿ ಅಲ್ಲ: ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದವರು ಯಾರು?
ಐಪಿಎಲ್ ಇತಿಹಾಸದಲ್ಲಿ ಈವರೆಗೆ ಗರಿಷ್ಠ ಅರ್ಧಶತಕ ಸಿಡಿಸಿದವರು ವಿದೇಶಿ ಬ್ಯಾಟ್ಸ್ಮನ್. ಇವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿಯಂತಹ ಸ್ಟಾರ್ ಆಟಗಾರರನ್ನೇ ಹಿಂದಿಕ್ಕಿ ಬರೋಬ್ಬರಿ 44 ಹಾಫ್ ಸೆಂಚುರಿ ಬಾರಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಈವರೆಗೆ ಗರಿಷ್ಠ ಅರ್ಧಶತಕ ಸಿಡಿಸಿದವರು ವಿದೇಶಿ ಬ್ಯಾಟ್ಸ್ಮನ್. ಇವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿಯಂತಹ ಸ್ಟಾರ್ ಆಟಗಾರರನ್ನೇ ಹಿಂದಿಕ್ಕಿ ಬರೋಬ್ಬರಿ 44 ಹಾಫ್ ಸೆಂಚುರಿ ಬಾರಿಸಿದ್ದಾರೆ.
2/ 8
ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ನಂಬರ್ 1 ಬ್ಯಾಟ್ಸ್ಮನ್ ಡೇವಿಡ್ ವಾರ್ನರ್. ಇವರು 126 ಪಂದ್ಯಗಳಲ್ಲಿ 4706 ರನ್ ಕಲೆಹಾಕಿ 44 ಅರ್ಧಶತಕ ಸಿಡಿಸಿದ್ದಾರೆ.
3/ 8
ಗರಿಷ್ಠ ಅರ್ಧಶತಕ ಬಾರಿಸಿದ ಆಟಗಾರರ ಸ್ಥಾನದಲ್ಲಿ ಎರಡನೇಯವರಾಗಿ ಸುರೇಶ್ ರೈನಾ ಇದ್ದಾರೆ. ಇವರು ಒಟ್ಟು 38 ಅರ್ಧಶತಕ ಗಳಿಸಿದ್ದಾರೆ.
4/ 8
3ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಇದ್ದು, 37 ಅರ್ಧಶತಕ ಬಾರಿಸಿದ್ದಾರೆ.
5/ 8
ನಂತರದ ಸ್ಥಾನದಲ್ಲಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯಿದ್ದು, ಇವರು 36 ಅರ್ಧಶತಕ ಗಳಿಸಿದ್ದಾರೆ. ಆಡಿರುವ 177 ಪಂದ್ಯಗಳಲ್ಲಿ 5412 ರನ್ ಕಲೆಹಾಕಿದ್ದಾರೆ.
6/ 8
ಐಪಿಎಲ್ ಇತಿಹಾಸದಲ್ಲೇ ಈವರೆಗೆ ಗರಿಷ್ಠ ಅರ್ಧಶತಕ ಸಿಡಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ. ಇವರು ಕೂಡ 36 ಅರ್ಧಶತಕ ಸಿಡಿಸಿ ಕೊಹ್ಲಿ ಜೊತೆಯಾಗಿದ್ದಾರೆ.
7/ 8
ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಸಾಲಿನಲ್ಲಿ ಮಾಜಿ ಆಟಗಾರ ಗೌತಮ್ ಗಂಭೀರ್ 6ನೇ ಸ್ಥಾನದಲ್ಲಿದ್ದಾರೆ. ಇವರು ಈವರೆಗೆ 36 ಅರ್ಧಶತಕ ಸಿಡಿಸಿದ್ದಾರೆ.
8/ 8
ಇನ್ನು ಎಂಎಸ್ ಧೋನಿ 11ನೇ ಸ್ಥಾನದಲ್ಲಿದ್ದಾರೆ. ಇವರು ಈವರೆಗೆ ಐಪಿಎಲ್ನಲ್ಲಿ 23 ಅರ್ಧಶತಕ ಬಾರಿಸಿದ್ದಾರೆ.