IPL 2020: RCB ವಿರುದ್ಧ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದ ವಿಜಯ್ ಶಂಕರ್
ಹೆಚ್ಚಿನ ಆತ್ಮ ವಿಶ್ವಾಸದಿಂದಲೇ ಉತ್ತರಿಸಿದ ವಿಜಯ್ ಶಂಕರ್, ನನ್ನ ಹೆಸರಿನಲ್ಲಿ ಈಗಾಗಲೇ ಒಂದು ದಾಖಲೆಯಿದೆ. ಶೂನ್ಯಕ್ಕೆ ಔಟಾಗದೇ ಅತೀ ಹೆಚ್ಚು ಇನಿಂಗ್ಸ್ನಲ್ಲಿ ಆಡಿದ ಭಾರತೀಯ ಬ್ಯಾಟ್ಸಮನ್ ಎಂಬ ರೆಕಾರ್ಡ್ ನನ್ನ ಹೆಸರಿನಲ್ಲಿದೆ.
ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳಿವೆ. ಇಂತಹ ದಾಖಲೆಗಳಿಗೆ ಐಪಿಎಲ್ ಕೂಡ ಹೊರತಾಗಿಲ್ಲ. ಆದರೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿರ್ಮಿಸುವ ದಾಖಲೆಗಳ ಮೂಲಕ ಒಂದೇ ದಿನಕ್ಕೆ ಹೀರೋ ಅನಿಸಿಕೊಳ್ಳಬಹುದು.
2/ 7
ಹೀಗಾಗಿಯೇ ಐಪಿಎಲ್ ದಾಖಲೆ ನಿರ್ಮಿಸಲು ಎಲ್ಲಾ ಆಟಗಾರರು ಎದುರು ನೋಡುತ್ತಿರುತ್ತಾರೆ. ಇದಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡದ ಆಲ್ರೌಂಡರ್ ವಿಜಯ್ ಶಂಕರ್ ಕೂಡ ಹೊರತಾಗಿಲ್ಲ.
3/ 7
ಯಾವುದಾದರೂ ಒಂದು ರೀತಿಯಲ್ಲಿ ತಮ್ಮ ಹೆಸರು ಕೂಡ ದಾಖಲೆ ಪಟ್ಟಿಯಲ್ಲಿರಬೇಕು ಎಂದು ಬಯಸಿದ್ದರು. ಅಂತಹದೊಂದು ದಾಖಲೆಯನ್ನು ಕೂಡ ಅವರು ಮುಂದುವರೆಸಿದ್ದರು. ಅದು ಐಪಿಎಲ್ ಸೀಸನ್-13ನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದ ತನಕ ಮಾತ್ರ.
4/ 7
ಹೌದು, ಐಪಿಎಲ್ ಆರಂಭಕ್ಕೂ ಮುನ್ನ ನಡೆಸಿದ ಸಂದರ್ಶನವೊಂದರಲ್ಲಿ ಈ ಬಾರಿ ಯಾವ ದಾಖಲೆಯನ್ನು ನಿರ್ಮಿಸಲು ಬಯಸುತ್ತೀರಿ ಎಂದು ವಿಜಯ್ ಶಂಕರ್ ಅವರನ್ನು ಕೇಳಲಾಗಿತ್ತು.
5/ 7
ಇದಕ್ಕೆ ಹೆಚ್ಚಿನ ಆತ್ಮ ವಿಶ್ವಾಸದಿಂದಲೇ ಉತ್ತರಿಸಿದ ವಿಜಯ್ ಶಂಕರ್, ನನ್ನ ಹೆಸರಿನಲ್ಲಿ ಈಗಾಗಲೇ ಒಂದು ದಾಖಲೆಯಿದೆ. ಶೂನ್ಯಕ್ಕೆ ಔಟಾಗದೇ ಅತೀ ಹೆಚ್ಚು ಇನಿಂಗ್ಸ್ನಲ್ಲಿ ಆಡಿದ ಭಾರತೀಯ ಬ್ಯಾಟ್ಸಮನ್ ಎಂಬ ರೆಕಾರ್ಡ್ ನನ್ನ ಹೆಸರಿನಲ್ಲಿದೆ.
6/ 7
ಅದನ್ನು ಈ ಬಾರಿ ಕೂಡ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ವಿಜಯ್ ಶಂಕರ್ ಹೇಳಿದ್ದರು. ಆದರೆ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ವಿಜಯ್ ಶಂಕರ್ ಶೂನ್ಯಕ್ಕೆ ಔಟಾದರು.
7/ 7
ಯಜುವೇಂದ್ರ ಚಾಹಲ್ ಅವರ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಗೋಲ್ಡನ್ ಡಕ್ ಆದರು. ಈ ಮೂಲಕ ತಮ್ಮ ಹೆಸರಿನಲ್ಲಿದ್ದ ಶೂನ್ಯಕ್ಕೆ ಔಟಾಗದ ಭಾರತೀಯ ಬ್ಯಾಟ್ಸ್ಮನ್ ದಾಖಲೆಗೆ ಫುಲ್ ಸ್ಟಾಪ್ ಹಾಕಿದ್ದಾರೆ ವಿಜಯ್ ಶಂಕರ್.