ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ಗಳಲ್ಲಿ ಒಬ್ಬರು. ಈಗಾಗಲೇ 134 ಪಂದ್ಯಗಳನ್ನಾಡಿರುವ ಬ್ರಾವೋ 147 ವಿಕೆಟ್ಗಳನ್ನು ಉರುಳಿಸಿ ಐಪಿಎಲ್ನ ಬೆಸ್ಟ್ ವೇಗಿಯ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಡೆತ್ ಓವರ್ಗಳಲ್ಲಿ ಬ್ರಾವೋ ಅನ್ನು ಎದುರಿಸೋದೇ ಕಷ್ಟ. ಅಂತದ್ರಲ್ಲಿ ಯುಎಇ ಪಿಚ್ಗಳು ವಿಂಡೀಸ್ ಬೌಲರ್ಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಈ ಬಾರಿ ಚೆನ್ನೈ ಫಲಿತಾಂಶಗಳಲ್ಲಿ ಬ್ರಾವೋ ಪ್ರಮುಖ ಪಾತ್ರವಹಿಸಲಿದ್ದಾರೆ.
ಸ್ವಿಂಗ್ ಬೌಲಿಂಗ್ ಮೂಲಕ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಭುವನೇಶ್ವರ್ ಕುಮಾರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದುವರೆಗೆ ಐಪಿಎಲ್ನಲ್ಲಿ 117 ಪಂದ್ಯಗಳನ್ನಾಡಿರುವ ಭುವಿ 133 ವಿಕೆಟ್ ಪಡೆದಿದ್ದಾರೆ. ಅವರ ಸ್ವಿಂಗ್ ಬಾಲ್ಗೆ ಪ್ರತಿಕ್ರಿಯಿಸುವುದು ಬ್ಯಾಟ್ಸ್ಮನ್ಗಳಿಗೆ ದೊಡ್ಡ ಸವಾಲು. ಹೀಗಾಗಿ ಈ ಬಾರಿ ಪವರ್ಪ್ಲೇ ಮತ್ತು ಡೆತ್ ಓವರ್ಗಳ ಅತ್ಯುತ್ತಮ ಬೌಲಿಂಗ್ನ್ನು ಭುವನೇಶ್ವರ್ ಕಡೆಯಿಂದ ನಿರೀಕ್ಷಿಸಬಹುದು.
ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಈಗಾಗಲೇ ಐಪಿಎಲ್ಗೆ ನಿವೃತ್ತಿ ನೀಡಿ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಐಪಿಎಲ್ನಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ನೆಹ್ರಾ ಬ್ಯಾಟ್ಸ್ಮನ್ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು ಎಂಬುದಕ್ಕೆ ಅವರು ಉರುಳಿಸಿರುವ ವಿಕೆಟ್ಗಳೇ ಸಾಕ್ಷಿ. 88 ಐಪಿಎಲ್ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಆಶಿಶ್ ನೆಹ್ರಾ ಐಪಿಎಲ್ನಲ್ಲಿ 6 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಪಾತ್ರರಾಗಿದ್ದರು ಎಂಬುದು ವಿಶೇಷ.