IPL ಸೀಸನ್ 13 ಆರಂಭಕ್ಕೂ ಮುನ್ನವೇ ಒಂದರ ಮೇಲೊಂದು ಹೊಡೆತ ಬಿದ್ದದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ. ಮೊದಲು ತಂಡದ 13 ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಸಿಎಸ್‌ಕೆ ಮ್ಯಾನೇಜ್ಮೆಂಟ್ ಹೈರಾಣಾಗಿತ್ತು.
2/ 10
ಇದರ ಬೆನ್ನಲ್ಲೇ ಸಿಎಸ್‌ಕೆ ಸ್ಟಾರ್ ಆಟಗಾರ ಸುರೇಶ್ ರೈನಾ ಟೂರ್ನಿಯನ್ನು ತೊರೆದು ದುಬೈನಿಂದ ಭಾರತಕ್ಕೆ ಮರಳಿದ್ದರು. ಕೊರೋನಾ ಶಾಕ್ ಮರೆಯಾಗುವ ಮೊದಲೇ ರೈನಾ ಅಲಭ್ಯ ಸುದ್ದಿ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
3/ 10
ರೈನಾ ಸುದ್ದಿ ಮರೆಯಾಗುವ ಮೊದಲೇ ಹರ್ಭಜನ್ ಸಿಂಗ್ ಕೂಡ ವೈಯುಕ್ತಿಕ ಕಾರಣಗಳಿಂದ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದು ಘೋಷಿಸಿದರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ಆಟಗಾರರನ್ನು ಕಳೆದುಕೊಂಡಿದ್ದರಿಂದ ಸಿಎಸ್‌ಕೆ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
4/ 10
ಆದರೆ ಇದ್ಯಾವುದಕ್ಕೂ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಡಿ. ತಂಡದಲ್ಲಿ ತಲೈವಾ ಇದ್ದಾನೆ. ಎಲ್ಲವನ್ನೂ ಆತನೇ ನಿಭಾಯಿಸಿಕೊಳ್ಳುತ್ತಾನೆ. ನಿಮ್ಮ ಬೆಂಬಲವೊಂದಿದ್ರೆ ಸಾಕು ಅಂದಿದ್ದಾರೆ ಸಿಎಸ್‌ಕೆ ಸಿಇಒ.
5/ 10
ಹೌದು ತಂಡದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಗುಳಿದಿರುವುದು ಸೂಪರ್ ಕಿಂಗ್ಸ್ನ ಸೂಪರ್ ಫ್ಯಾನ್ಸ್ಗೆ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಕೆಲವರು ಇಬ್ಬರ ಅನುಪಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.
6/ 10
ಹೀಗೆ ತಂಡದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುವ ಅಭಿಮಾನಿಗಳಿಗೆ ಸಿಎಸ್‌ಕೆ ಮೇಲೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಸಿಇಒ ಕಾಶಿ ವಿಶ್ವನಾಥನ್. ಅಭಿಮಾನಿಗಳು ಯಾರೂ ಕೂಡ ತಂಡದ ಬಗ್ಗೆ ಚಿಂತಿತರಾಗಬೇಡಿ. ಎಲ್ಲವನ್ನೂ ಧೋನಿ ನಿಭಾಯಿಸಿಕೊಳ್ಳುತ್ತಾರೆ.
7/ 10
ಈ ಬಾರಿ ಕೂಡ ನಮ್ಮ ತಂಡ ಸಮತೋಲನದಿಂದ ಕೂಡಿದೆ. ಇಂತಹ ಅನೇಕ ಕಠಿಣ ಸಂದರ್ಭಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ ಅನುಭವ ಧೋನಿಗಿದೆ. ತಲೈವಾ (ಧೋನಿ) ತಂಡವನ್ನು ಖಂಡಿತವಾಗಿಯೂ ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
8/ 10
ಆಟಗಾರರು ಸಹ ಉತ್ತಮ ಮನೋಭಾವದಲ್ಲಿದ್ದಾರೆ. ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ. ಅಲ್ಲಿ ತರಬೇತುದಾರ ಮತ್ತು ನಾಯಕ ಆಟಗಾರರನ್ನು ಉದ್ದೇಶಿಸಿ ಚರ್ಚಿಸುತ್ತಿದ್ದಾರೆ. ನಾವು ಕಠಿಣ ಪರಿಸ್ಥಿತಿಯಿಂದ ಹೊರಬರುತ್ತೇವೆ. ಈಗಾಗಲೇ ಎಲ್ಲೊ ಫೀವರ್ ಶುರುವಾಗಿದೆ.
9/ 10
ಅಭಿಮಾನಿಗಳ ಬೆಂಬಲ ನಮಗೆ ದುಬೈನಲ್ಲಿಯೂ ತುಂಬಾ ಅವಶ್ಯಕ. ಸಿಎಸ್‌ಕೆ ಅಭಿಮಾನಿಗಳು ತಂಡಕ್ಕೆ ಬಹಳ ಮುಖ್ಯ ಮತ್ತು ನಿಮ್ಮ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
10/ 10
CSK
First published:
110
IPL 2020: ಡೋಂಟ್ ವರಿ...ಧೋನಿ ಇದ್ದಾರೆ..!