ಈ ನಡುವೆ ಕುಟುಂಬ ಸದಸ್ಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸುದ್ದಿ ತಿಳಿದ ಸುರೇಶ್ ರೈನಾ ಕೂಡಲೇ ಭಾರತಕ್ಕೆ ಹಿಂದಿರುಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್ 2020 ಟೂರ್ನಿಯಿಂದಲೇ ರೈನಾ ಹೊರನಡೆದಿದ್ದಾರೆ ಎಂದು ಸಿಎಸ್ಕೆ ಅಧಿಕೃತ ಹೇಳಿಕೆ ಕೂಡ ಬಿಡುಗಡೆ ಮಾಡಿತ್ತು. ಇನ್ನೂ ಹಿರಿಯ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಕೂಡ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರ ನಡೆದರು.