IPL 2020: ಭುವನೇಶ್ವರ್ ಕುಮಾರ್ ಸ್ಥಾನಕ್ಕೆ 22 ವರ್ಷದ ಬೌಲರ್ ಆಯ್ಕೆ..!
Bhuvneshwar kumar: ಸನ್ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ 22 ರ ಹರೆಯದ ಯುವ ಬೌಲರ್ಗೆ ಅವಕಾಶ ನೀಡಲಾಗಿದೆ.
IPL 13ನೇ ಸೀಸನ್ನಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಹೊರ ನಡೆದಿದ್ದಾರೆ. ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದು, ಅವರ ಸ್ಥಾನಕ್ಕೆ ಎಸ್ಆರ್ಹೆಚ್ ಬದಲಿ ಬೌಲರ್ನನ್ನು ಪ್ರಕಟಿಸಿದೆ.
2/ 4
ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕೊನೆಯ ಓವರ್ನಲ್ಲಿ ಗಾಯಗೊಂಡಿದ್ದರು. ಇದರ ನಂತರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಕಾಲಿನ ನೋವಿನಲ್ಲಿ ಚೇತರಿಕೆ ಕಾಣದ ಕಾರಣ ಟೂರ್ನಿಯಿಂದ ಹೊರಗುಳಿಯಲು ಭುವಿ ನಿರ್ಧರಿಸಿದ್ದಾರೆ.
3/ 4
ಭುವನೇಶ್ವರ್ ಬದಲಿಗೆ ತಂಡದಲ್ಲಿ 2019ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದ ಆಂಧ್ರಪ್ರದೇಶದ ಪೃಥ್ವಿ ರಾಜ್ ಯಾರಾ ಅವರಿಗೆ ಬುಲಾವ್ ನೀಡಲಾಗಿದೆ. 22 ವರ್ಷದ ಪೃಥ್ವಿ ರಾಜ್ ಕಳೆದ ವರ್ಷ ಅವರು ಕೆಕೆಆರ್ ಪರ ಎರಡು ಪಂದ್ಯಗಳನ್ನು ಆಡಿದ್ದರು. ಈ ಎರಡು ಪಂದ್ಯಗಳಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆಯಲು ಯಶಸ್ವಿಯಾಗಿದ್ದರು.
4/ 4
ಪೃಥ್ವಿ ರಾಜ್ ಆಂಧ್ರಪ್ರದೇಶ ಪರ 11 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 39 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಒಂಬತ್ತು ಲಿಸ್ಟ್ ಎ ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ.