ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ಗಳ ರೋಚಕ ಜಯ ಸಾಧಿಸಿ 2ನೇ ಕ್ವಾಲಿಫೈಯರ್ಗೆ ಕಾಲಿಟ್ಟಿತು. ಬ್ಯಾಟಿಂಗ್ - ಬೌಲಿಂಗ್ನಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲಾಗದೆ ಟೂರ್ನಿಯಿಂದ ಹೊರಬಿದ್ದಿದೆ.