IPL 2020, SRH vs MI: ಡು ಆರ್ ಡೈ ಪಂದ್ಯಕ್ಕೆ ಆರೆಂಜ್ ಆರ್ಮಿ ರೆಡಿ: ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆ?
ಟೂರ್ನಿಯಲ್ಲಿ ಈಗಾಗಲೇ 13 ರಲ್ಲಿ 6 ಪಂದ್ಯಗಳಲ್ಲಿ ಗೆದ್ದಿರುವ ವಾರ್ನರ್ ಪಡೆ, ಪಾಯಿಂಟ್ ಟೇಬಲ್ನಲ್ಲಿ +0.555 ನೆಟ್ ರನ್ರೇಟ್ನಿಂದ 5ನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪ್ಲೇ ಆಫ್ ಹಂತಕ್ಕೇರಲು, ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
13ನೇ ಆವೃತ್ತಿಯ ಐಪಿಎಲ್ನಲ್ಲಿಂದು ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೀರೊನ್ ಪೊಲಾರ್ಡ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಅಂತಿಮ ಹಣಾಹಣಿಯಲ್ಲಿ ಕಾದಾಟ ನಡೆಸಲಿವೆ.
2/ 11
ಮುಂಬೈಗೆ ಇದು ಔಪಚಾರಿಕ ಪಂದ್ಯವಾಗಿದ್ದರೆ, ಹೈದರಾಬಾದ್ ಗೆದ್ದರಷ್ಟೆ ಪ್ಲೇ ಆಫ್ಗೆ ಪ್ರವೇಶ. ಮುಂಬೈ ಮತ್ತು ಹೈದರಾಬಾದ್ ಪಂದ್ಯದ ಫಲಿತಾಂಶದ ಮೇಲೆ ಕೆಕೆಆರ್ ತಂಡದ ಪ್ಲೇ ಆಫ್ ಪ್ರವೇಶದ ಅವಕಾಶ ನಿಂತಿದೆ. ಹೈದರಾಬಾದ್ ಸೋತರೆ ಕೆಕೆಆರ್ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆಯುತ್ತದೆ.
3/ 11
ಹ್ಯಾಟ್ರಿಕ್ ಗೆಲುವಿನೊಂದಿಗೆ ನೇರವಾಗಿ ಅರ್ಹತೆ ಪಡೆಯುವ ಗುರಿಯಲ್ಲಿರುವ ಸನ್ರೈಸರ್ಸ್ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಸ್ಟಾರ್ ಬ್ಯಾಟ್ಸ್ಮನ್ಗಳಿದ್ದರೂ ತಂಡಕ್ಕೆ ದಿಢೀರ್ ಕುಸಿತದ ಭೀತಿ ಕಾಡುತ್ತಿದೆ.
4/ 11
ಅದರಲ್ಲೂ ಎಸ್ಆರ್ಹೆಚ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯ ತಂಡವನ್ನು ಕಾಡುತ್ತಿದೆ. ಜೇಸನ್ ಹೋಲ್ಡರ್ ತಂಡಕ್ಕೆ ಆಗಮಿಸಿದ ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲ ತುಂಬುತ್ತಿದ್ದಾರೆ.
5/ 11
ಟೂರ್ನಿಯಲ್ಲಿ ಈಗಾಗಲೇ 13 ರಲ್ಲಿ 6 ಪಂದ್ಯಗಳಲ್ಲಿ ಗೆದ್ದಿರುವ ವಾರ್ನರ್ ಪಡೆ, ಪಾಯಿಂಟ್ ಟೇಬಲ್ನಲ್ಲಿ +0.555 ನೆಟ್ ರನ್ರೇಟ್ನಿಂದ 5ನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪ್ಲೇ ಆಫ್ ಹಂತಕ್ಕೇರಲು, ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
6/ 11
ಸಂದೀಪ್ ಶರ್ಮ, ಎಡಗೈ ವೇಗಿ ಟಿ.ನಟರಾಜನ್, ರಶೀದ್ ಖಾನ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ.
7/ 11
ಕೊನೆಯ ಲೀಗ್ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ ಯಾವ ಪರಿಣಾಮ ಬೀರದ ಪಂದ್ಯ. ಇದನ್ನ ಸೋತರೂ ಮುಂಬೈನ ಅಗ್ರಸ್ಥಾನಕ್ಕೆ ಯಾವುದೇ ಸಂಚಕಾರ ಇರುವುದಿಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲೂ ಮುಂಬೈನ ಬ್ಯಾಟಿಂಗ್ ಸ್ಫೋಟಕ ಶಕ್ತಿ ಹೊಂದಿದೆ.
8/ 11
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್ ಸ್ಟ್ರೆಂತ್ ಪರೀಕ್ಷಿಸಲು ಅವಕಾಶ ಇದೆ. ಹೀಗಾಗಿ, ಮುಂಬೈನಿಂದ ಸೆಕೆಂಡ್ ಸ್ಟ್ರಿಂಗ್ ಟೀಮ್ ಕಣಕ್ಕಿಳಿಯುವ ಸಾಧ್ಯತೆ ಇದೆ.
9/ 11
ಗೆಲ್ಲಲೇ ಬೇಕಾದ ಪಂದ್ಯವಾಗಿರುವುದರಿಂದ ಹೈದರಾಬಾದ್ ತಂಡದಲ್ಲಿ ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ.
10/ 11
ಪ್ರಮುಖವಾಗಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚದ ಅಭಿಷೇಕ್ ಶರ್ಮಾ ಬದಲು ಬ್ಯಾಟಿಂಗ್ ಬಲ ಹೆಚ್ಚಿಸಲು ಶ್ರೀವತ್ಸ್ ಗೋಸ್ವಾಮಿ ಕಣಕ್ಕಿಳಿಯುವ ಅಂದಾಜಿದೆ. ಜೊತೆಗೆ ಕೇನ್ ವಿಲಿಯಮ್ಸನ್ ಬದಲು ಜಾನಿ ಬೈರ್ಸ್ಟೋ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲು ಕಮ್ಬ್ಯಾಕ್ ಮಾಡಬಹುದು.
11/ 11
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ವೃದ್ದಿಮಾನ್ ಸಾಹ, ಮನೀಷ್ ಪಾಂಡೆ, ಜಾನಿ ಬೈರ್ಸ್ಟೋ, ಶ್ರೀವತ್ಸ್ ಗೋಸ್ವಾಮಿ, ಜೇಸನ್ ಹೋಲ್ಡರ್, ಶಹ್ಬಾಜ್ ನದೀಂ, ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಟಿ. ನಟರಾಜನ್.