1- ಶಿಖರ್ ಧವನ್: ಐಪಿಎಲ್ನಲ್ಲಿ 159 ಪಂದ್ಯಗಳನ್ನಾಡಿರುವ ಶಿಖರ್ ಧವನ್ ಇದುವರೆಗೆ 3,669 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 37 ಅರ್ಧಶತಕಗಳೊಂದಿಗೆ ಧವನ್ ಬ್ಯಾಟ್ನಿಂದ ಸಿಡಿದದ್ದು ಬರೋಬ್ಬರಿ 524 ಫೋರ್ಗಳು. ಇದು ಕಳೆದ 12 ಸೀಸನ್ಗಳಲ್ಲಿ ಬ್ಯಾಟ್ಸ್ಮನ್ ಒಬ್ಬರು ಸಿಡಿಸಿದ ಅತ್ಯಧಿಕ ಬೌಂಡರಿ ದಾಖಲೆಯಾಗಿದೆ.