ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ಈ ಬಾರಿಯ ಐಪಿಎಲ್ ಅನ್ನು ಬಿಸಿಸಿಐ ಆಯೋಜನೆ ಮಾಡುತ್ತಿದೆ.
2/ 12
ಈಗಾಗಲೇ ಬಿಸಿಸಿಐ ಯುಎಇನಲ್ಲಿ ನಡೆಯಲಿರುವ ಐಪಿಎಲ್ಗೆ ಸಕಲ ತಯಾರಿ ಮಾಡಿಕೊಂಡಿದೆ. ಆಟಗಾರರಂತೂ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
3/ 12
ಸುರೇಶ್ ರೈನಾ, ಶಿಖರ್ ಧವನ್, ಎಂ ಎಸ್ ಧೋನಿ ಸೇರಿದಂತೆ ಅನೇಕ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
4/ 12
ಇನ್ನೇನು ಕೆಲವೇ ದಿನಗಳಲ್ಲಿ ಬಹತೇಕ ಎಲ್ಲ ಫ್ರಾಂಚೈಸಿಗಳು ಕೋವಿಡ್ ಟೆಸ್ಟ್ಗೆ ಒಳಗಾಗಿ ಬಳಿಕ ಅರಭ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
5/ 12
ಇವೆಲ್ಲದರ ನಡುವೆ ಐಪಿಎಲ್ ವೇಳಾಪಟ್ಟಿ ಮಾತ್ರ ಇನ್ನೂ ಬಿಡುಗಡೆಗೊಂಡಿಲ್ಲ. ಹಾಗಾದ್ರೆ ವೇಳಾಪಟ್ಟಿ ಯಾವಾಗ ಬಿಡುಗಡೆ? ಎಂಬ ಅಭಿಮಾನಿಗಳ ಕುತೂಹಲಕ್ಕೆ ಇಲ್ಲಿದೆ ಮಾಹಿತಿ.
6/ 12
2020 ಐಪಿಎಲ್ ವೇಳಾಪಟ್ಟಿ ಕುರಿತಾಗಿ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾತನಾಡಿದ್ದು ಕೆಲವು ಮಾಹಿತಿಯನ್ನು ಹಂಚಿಕೊಂಡಿಡ್ದಾರೆ.
7/ 12
ಪ್ರತಿಯೊಬ್ಬರು ಐಪಿಎಲ್ ವೇಳಾಪಟ್ಟಿಗೆ ಕಾತುರರಾಗಿದ್ದಾರೆ ಎಂಬ ವಿಚಾರ ನಮಗೆ ತಿಳಿದಿದೆ. ಆದರೆ, ಕೆಲವು ಸಮಸ್ಯೆಗಳನ್ನು ಬಗೆಹರಿಸಿ 7-8 ದಿನಗಳ ಒಳಗಾಗಿ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
8/ 12
ಅಲ್ಲದೆ ಯುಎಇನ ಯಾವ ಕ್ರೀಡಾಂಗಣದಲ್ಲಿ ಎಷ್ಟು ಪಂದ್ಯ ನಡೆಯಬೇಕು ಎಂಬ ಕುರಿತ ಚರ್ಚೆ ಇನ್ನೂ ನಡೆಯುತ್ತಿದೆ. ಜೊತೆಗೆ ಈ ಬಾರಿಯ ಐಪಿಎಲ್ ಸ್ಪಾನ್ಸರ್ ಫೈನಲ್ ಆದಮೇಲೆ ವೇಳಾಪಟ್ಟಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.
9/ 12
ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್ 2020 ನವೆಂಬರ್ 10ರಂದು ಫೈನಲ್ನೊಂದಿಗೆ ಕೊನೆಗೊಳ್ಳಲಿದೆ. 2014ರ ಸೀಸನ್ನ ಕೆಲ ಪಂದ್ಯಗಳು ಯುಎಇಯಲ್ಲಿ ನಡೆದಿತ್ತು. ಆದರೆ ಸಂಪೂರ್ಣ ಟೂರ್ನಿ ಯುಎಇಯಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿ.
10/ 12
ಈ ಬಾರಿಯ ಐಪಿಎಲ್ ಟೂರ್ನಿ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಳ್ಳಲು ಆಸಕ್ತಿ ವಹಿಸುವ ಸಂಸ್ಥೆಗಳಿಗೆ ಆಗಸ್ಟ್ 14ರ ಸಂಜೆ 5 ಗಂಟೆವರೆಗೆ ಅಂತಿಮ ಗಡುವು ನೀಡಿರುವ ಬಿಸಿಸಿಐ, ಆಗಸ್ಟ್ 18ರ ಮಧ್ಯಾಹ್ನ 1 ಗಂಟೆ ಒಳಗೆ ತಮ್ಮ ಅಂತಿಮ ಬಿಡ್ ಸಲ್ಲಿಸುವಂತೆ ಸೂಚಿಸಿದೆ.
11/ 12
ಇನ್ನೂ ವಿವೊ ಜೊತೆಗಿನ ಒಪ್ಪಂದ ರದ್ದಾಗುತ್ತಿದ್ದಂತೆಯೇ ಶೀರ್ಷಿಕೆ ಪ್ರಾಯೋಜಕತ್ವ ಪಡೆಯುವ ರೇಸ್ನಲ್ಲಿ ಕೋಕಾ ಕೋಲ ಮತ್ತು ಬೈಜೂಸ್ ಕಾರ್ಪೊರೇಟ್ ಸಂಸ್ಥೆಗಳು ಮುಂದಿದೆ.
12/ 12
ಈ ವೇಳೆ ದೇಶಿ ಆಯೂರ್ವೇದ ಸರಕುಗಳ ತಯಾರಿಕಾ ಸಂಸ್ಥೆಯಾದ ಪತಂಜಲಿ ಕೂಡ ಪ್ರಾಯೋಜಕತ್ವ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದೆ.