IPL 2020 RR vs KXIP Playing 11 | RR vs KXIP Playing 11: ಸ್ಮಿತ್ ಪಡೆಯಲ್ಲಿ 2 ಬದಲಾವಣೆ: ಉಭಯ ತಂಡಗಳು ಇಂತಿವೆ
ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್Jobs ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್Jobs ಹೋಮ್ » ಫೋಟೋ » IPL RR vs KXIP Playing 11: ಸ್ಮಿತ್ ಪಡೆಯಲ್ಲಿ 2 ಬದಲಾವಣೆ: ಉಭಯ ತಂಡಗಳು ಇಂತಿವೆ ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 10 ರಲ್ಲಿ ಗೆದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ 9 ರಲ್ಲಿ ಜಯ ಸಾಧಿಸಿದೆ. ಹಾಗೆಯೇ ಕಳೆದ ಸೀಸನ್ನಲ್ಲಿ ಆಡಿದ 2 ಪಂದ್ಯಗಳಲ್ಲೂ ಕಿಂಗ್ಸ್ ಇಲೆವೆನ್ ಗೆದ್ದು ಬೀಗಿತ್ತು. News18 Kannada | September 27, 2020, 7:14 PM IST 1/ 8 ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಿವೆ. ಉಭಯ ತಂಡಗಳು ಈಗಾಗಲೇ ಜಯದ ಖಾತೆ ತೆರೆದಿದ್ದು, ಇದೇ ಆತ್ಮ ವಿಶ್ವಾಸದಲ್ಲಿ ಮತ್ತೊಂದು ಜಯವನ್ನು ತನ್ನದಾಗಿಸಿಕೊಳ್ಳಬೇಕೆಂಬ ತವಕದಲ್ಲಿದೆ. 2/ 8 ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯ ಭರ್ಜರಿ ಪೈಪೋಟಿಗೆ ಕಾರಣವಾಗಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಕಳೆದ ಪಂದ್ಯದಲ್ಲಿ ಮಿಂಚಿದ್ರೆ, ಇತ್ತ ಪಂಜಾಬ್ ತಂಡದ ಕಪ್ತಾನ ಕೆಎಲ್ ರಾಹುಲ್ ಕೂಡ ಕೊನೆಯ ಪಂದ್ಯದಲ್ಲಿ ಆರ್ಭಿಟಿಸಿದ್ದರು. ಅದೇ ರೀತಿ ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್ನಲ್ಲಿದ್ರೆ, ರಾಯಲ್ಸ್ ಪರ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 3/ 8 ಶಾರ್ಜಾ ಮೈದಾನ ಕೂಡ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿದ್ದು, ಹೀಗಾಗಿ ಉಭಯ ತಂಡಗಳಿಂದ ರನ್ ಸುರಿಮಳೆಯಾಗಬಹುದು. ಇನ್ನು ಎರಡು ತಂಡಗಳು ಈ ಬಾರಿ 200 ಕ್ಕೂ ಅಧಿಕ ರನ್ ಬಾರಿಸಿರುವ ಕಾರಣ ಇಂದಿನ ಪಂದ್ಯದಲ್ಲೂ ಬೃಹತ್ ಟಾರ್ಗೆಟ್ ನಿರೀಕ್ಷಿಸಬಹುದು. 4/ 8 ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 10 ರಲ್ಲಿ ಗೆದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ 9 ರಲ್ಲಿ ಜಯ ಸಾಧಿಸಿದೆ. ಹಾಗೆಯೇ ಕಳೆದ ಸೀಸನ್ನಲ್ಲಿ ಆಡಿದ 2 ಪಂದ್ಯಗಳಲ್ಲೂ ಕಿಂಗ್ಸ್ ಇಲೆವೆನ್ ಗೆದ್ದು ಬೀಗಿತ್ತು. ಈ ಎರಡು ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ 180ಕ್ಕಿಂತ ಹೆಚ್ಚು ರನ್ ಬಾರಿಸಿತ್ತು ಎಂಬುದು ವಿಶೇಷ. 5/ 8 ಹಾಗೆಯೇ ಇದನ್ನು ಚೇಸ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ಕೂಡ ಎರಡು ಬಾರಿ ಕೂಡ 170 ರನ್ ಗಳಿಸಿರುವುದು ಮತ್ತೊಂದು ವಿಶೇಷ. ಹೀಗಾಗಿ ಇಂದಿನ ಪಂದ್ಯದಲ್ಲೂ ಉತ್ತಮ ಚೇಸಿಂಗ್ನ್ನು ಉಭಯ ತಂಡಗಳಿಂದ ನಿರೀಕ್ಷಿಸಬಹುದು. 6/ 8 ಇನ್ನು ಇಂದು ಕಣಕ್ಕಿಳಿಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಜೈಸ್ವಾಲ್ ಬದಲು ಅಂಕಿತ್, ಹಾಗೆಯೇ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ರಾಜಸ್ಥಾನ್ ಆರಂಭಿಕ ಜೋಶ್ ಬಟ್ಲರ್ ಇಂದು ಇನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಪಂಜಾಬ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಉಭಯ ತಂಡಗಳು ಇಂತಿವೆ. 7/ 8 RR: ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಠಿಯಾ, ಟಾಮ್ ಕರ್ರನ್, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್, ಅಂಕಿತ್ ರಜಪೂತ್ 8/ 8 KXIP: ಕೆ.ಎಲ್. ರಾಹುಲ್ (ನಾಯಕ) , ನಿಕೋಲಸ್ ಪೂರನ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಗ್ಲೆನ್ ಮ್ಯಾಕ್ಸ್ ವೆಲ್, ಸರ್ಫರಾಜ್ ಖಾನ್, ಜಿಮ್ಮಿ ನೀಶಮ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್. ತಾಜಾ ಸುದ್ದಿಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್Unlock| ಇಳಿಯುತ್ತಿರುವ ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ!Crime News| ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಗೆ ವಾಮಾಚಾರ ಮಾಡಿ ನರಬಲಿಗೆ ಯತ್ನ; ಅದೃಷ್ಟವಶಾತ್ ತಪ್ಪಿದ ಅನಾಹುತRamesh Jarkiholi| ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ; ಮುಂಬೈನಲ್ಲಿ ಹಿರಿಯ ನಾಯಕರ ಜತೆಗೆ ಮಹತ್ವ ಚರ್ಚೆ! Top Stories ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ; ಮುಂಬೈನಲ್ಲಿ ಹಿರಿಯ ನಾಯಕರ ಜತೆಗೆ ಮಹತ್ವ ಚರ್ಚೆ! ಕರ್ನಾಟಕದಲ್ಲಿ 3.4 ಲಕ್ಷ ಮಕ್ಕಳನ್ನು ಬಾಧಿಸಲಿದೆ ಕೊರೋನಾ ಮೂರನೇ ಅಲೆ?; ತಜ್ಞರ ಎಚ್ಚರಿಕೆ! ಪ್ರಧಾನಿ ಮೋದಿ ಅವಧಿಯಲ್ಲಾದ ಐದು ಮಹಾ ಪ್ರಮಾದಗಳು; ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಬಿಜೆಪಿ! ಆರ್ಥಿಕತೆಯನ್ನು ಕಾಡುತ್ತಿದೆ ಕೊರೋನಾ, ಬಡವರ ತವರಾಯಿತೇ ಭಾರತ? ಇಲ್ಲಿದೆ ವಾಸ್ತವ ಚಿತ್ರಣ! ಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್