ಆದರೆ, ತನ್ನ ಅದ್ಭುತ ಆಟ ಮುಂದುವರೆಸಿದ ಬೈರ್ಸ್ಟೋ ತಂಡದ ರನ್ ಗತಿಯನ್ನು ಕಡಿಮೆ ಆಗದಂತೆ ನೋಡಿಕೊಂಡರು. ಅದರಂತೆ ಅರ್ಧಶತಕವನ್ನೂ ಪೂರೈಸಿದರು. ಆದರೆ, ಈ ಸಂದರ್ಭ ನಡೆದಿದ್ದು ಚಹಾಲ್ ಸ್ಪಿನ್ ಮೋಡಿ. ತನ್ನ ಗೂಗ್ಲಿ ಬೌಲಿಂಗ್ನಿಂದ ಬೈರ್ಸ್ಟೋ ಅವರನ್ನು ಬೌಲ್ಡ್ ಮಾಡಿದರೆ ಬಂದ ಬೆನ್ನಲ್ಲೆ ವಿಜಯ್ ಶಂಕರ್ ಕೂಡ ಚಹಾಲ್ ಸ್ಪಿನ್ ಬಲೆಗೆ ಸಿಲುಕು ಪೆವಿಲಯನ್ ಸೇರಿಕೊಂಡರು. ಬೈರ್ಸ್ಟೋ 43 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 61 ರನ್ ಗಳಿಸಿದರು