ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಯಾರಾದರೂ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಲ್ಲ ಎಂದರೆ ಯಾರಾದರೂ ನಂಬುತ್ತಿದ್ದರೆ? ಖಂಡಿತವಾಗಿಯೂ ಇಲ್ಲ. ಅಷ್ಟೇ ಅಲ್ಲ, ಈ ಬಾರಿ ರಾಜಸ್ಥಾನ್ ರಾಯಲ್ಸ್ ಅಂಕ ಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆಯಲಿದೆ ಎಂದು 4 ತಿಂಗಳುಗಳ ಹಿಂದೆಯೇ ಹೇಳಿದ್ದರೆ....ಇದರೊಂದಿಗೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ ಎಂದೂ ಕೂಡ ತಿಳಿಸಿದ್ದರೆ..!
ಇನ್ನು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಇಳಿದಿದ್ದು, ಇದುವರೆಗೂ ಸ್ಪೋಟಕ ಇನಿಂಗ್ಸ್ ಮೂಡಿಬಂದಿಲ್ಲ. ಇಷ್ಟೇ ಅಲ್ಲದೆ ಈತ ತಿಳಿಸಿದ ತಂಡಗಳೇ ಪ್ಲೇ ಆಫ್ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ಅದರಂತೆ ಮುಂಬೈ ಇಂಡಿಯನ್ಸ್ , ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ನಾಲ್ಕು ತಂಡಗಳಾಗಿ ಕಾಣಿಸಿಕೊಂಡಿದೆ.
ಇನ್ನು ಈ ನಾಲ್ಕು ತಂಡಗಳಲ್ಲಿ ಈ ಬಾರಿ ಯಾವ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂಬುದನ್ನು ತಿಳಿಸಿದ್ದು, ಅದರಂತೆ ಮುಂಬೈ ಇಂಡಿಯನ್ಸ್ 5ನೇ ಬಾರಿ ಪ್ರಶಸ್ತಿ ಜಯಿಸುವುದಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಚೊಚ್ಚಲ ಟ್ರೋಫಿಗೆ ಮುತ್ತಿಡುವುದಿಲ್ಲ. ಬದಲಾಗಿ ಸನ್ರೈಸರ್ಸ್ ಹೈದರಾಬಾದ್ ಯುಎಇ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದಿದ್ದಾನೆ.