4- ದೇವದತ್ ಪಡಿಕ್ಕಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಪಡಿಕ್ಕಲ್ ಅತೀ ಹೆಚ್ಚು ರನ್ ಬಾರಿಸಿದ ಉದಯೋನ್ಮುಖ ಆಟಗಾರ ಎನಿಸಿಕೊಂಡಿದ್ದಾರೆ. 13 ಪಂದ್ಯಗಳಲ್ಲಿ 422 ರನ್ ಬಾರಿಸಿರುವ ಪಡಿಕ್ಕಲ್, 46 ಬೌಂಡರಿ ಸಿಡಿಸಿದ್ದಾರೆ. ಇನ್ನು ಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧದ ಪಂದ್ಯ ಹಾಗೆಯೇ ಪ್ಲೇ ಆಫ್ ಪಂದ್ಯದಲ್ಲಿ ಕಣಕ್ಕಿಳಿದರೆ ರಾಹುಲ್ ದಾಖಲೆ ಮುರಿಯುವ ಸಾಧ್ಯತೆಯಿದೆ.
3- ಸೂರ್ಯಕುಮಾರ್ ಯಾದವ್: ಈ ಬಾರಿ ಮಿಂಚಿದ ಆಟಗಾರರಲ್ಲಿ ಸೂರ್ಯಕುಮಾರ್ ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ ಪರ ಮೂರನೇ ಬ್ಯಾಟಿಂಗ್ ಮಾಡುವ ಸೂರ್ಯ 374 ರನ್ ಗಳಿಸಿದ್ದಾರೆ. ಇದರಲ್ಲಿ 49 ಬೌಂಡರಿಗಳಿದ್ದು, ಇನ್ನೂ ಪ್ಲೇ ಆಫ್ ಹಾಗೂ ಸನ್ರೈಸರ್ಸ್ ವಿರುದ್ಧದ ಪಂದ್ಯಗಳು ಬಾಕಿಯಿವೆ. ಹೀಗಾಗಿ ಕೆಎಲ್ ರಾಹುಲ್ ದಾಖಲೆಯನ್ನು ಮುರಿದು ಬೌಂಡರಿ ಲೆಕ್ಕಚಾರದಲ್ಲಿ ಮುನ್ನುಗ್ಗಲು ಸೂರ್ಯಕುಮಾರ್ಗೆ ಉತ್ತಮ ಅವಕಾಶವಿದೆ.