IPL 2020: ಈ 10 ವಿಷಯಗಳನ್ನು ಈ ಬಾರಿಯ ಐಪಿಎಲ್ನಲ್ಲಿ ನೀವು ಖಂಡಿತಾ ಮಿಸ್ ಮಾಡಿಕೊಳ್ತೀರಿ!
Indian Premier League: ಈ ಹಿಂದೆ ನಾವು ನೋಡಿದಂತೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯುವುದಿಲ್ಲ. ಅಭಿಮಾನಿಗಳು ಪ್ರಮುಖವಾಗಿ ಈ ಹತ್ತು ವಿಷಯಗಳನ್ನು ತುಂಬಾನೇ ಮಿಸ್ ಮಾಡಿಕೊಳ್ಳಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ವಿಜೃಂಭಣೆಯಿಂದ ಅದ್ಭೂರಿಯಾಗಿ ನಡೆಯುತ್ತಿತ್ತು. ಅಭಿಮಾನಿಗಳು ಸ್ಟೇಡಿಯಂಗೆ ಬಂದು ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು.
2/ 15
ಆದರೆ, ಮಾರಕ ಕೊರೋನಾ ವೈರಸ್ ಇಡೀ ವಿಶ್ವವನ್ನೇ ಕಾಡುತ್ತಿದ್ದು, ಕ್ರಿಕೆಟ್ ಲೋಕಕ್ಕೂ ಇದರ ಬಿಸಿ ಜೋರಾಗಿಯೇ ತಟ್ಟಿದೆ. ಅನೇಕ ಟೂರ್ನಿಗಳು ಅರ್ಧದಲ್ಲೇ ಮುಟುಕುಗೊಂಡರೆ ಕೆಲವು ಟೂರ್ನಿ ರದ್ದಾಗಿ ಮುಂದಕ್ಕೋಗಿವೆ.
3/ 15
ಇದರ ನಡುವೆ 13ನೇ ಆವೃತ್ತಿಯ ಐಪಿಎಲ್ ಅನ್ನು ಬಿಸಿಸಿಐ ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದು ಯುಎಇನಲ್ಲಿ ಆಯೋಜನೆ ಮಾಡಿದೆ. ಅದರಂತೆ ಸೆಪ್ಟೆಂಬರ್ 19ಕ್ಕೆ ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ದೊರಕಲಿದ್ದು ನವೆಂಬರ್ 10ರ ವರೆಗೆ ನಡೆಯಲಿದೆ.
4/ 15
ಆದರೆ, ಈ ಹಿಂದೆ ನಾವು ನೋಡಿದಂತೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯುವುದಿಲ್ಲ. ಅಭಿಮಾನಿಗಳು ಪ್ರಮುಖವಾಗಿ ಈ ಹತ್ತು ವಿಷಯಗಳನ್ನು ತುಂಬಾನೇ ಮಿಸ್ ಮಾಡಿಕೊಳ್ಳಲಿದ್ದಾರೆ.
5/ 15
ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ: ಹೌದು, ಈ ಬಾರಿಯ ಐಪಿಎಲ್ನಲ್ಲಿ ಸ್ಟೇಡಿಯಂ ಒಳಗಡೆ ಅಭಿಮಾನಿಗಳಿಗೆ ಪ್ರವೇಶವಿರುವುದಿಲ್ಲ. ಹೀಗಾಗಿ ಆಟಗಾರರಿಗೆ ಹುರಿದುಂಬಿಸಲು ಹರ್ಷೋದ್ಗಾರ ಇರುವುದಿಲ್ಲ.
6/ 15
ಚೆಂಡಿಗೆ ಎಂಜಲು ನಿಷೇಧ: ಕೋವಿಡ್ 19 ಭೀತಿಯಿಂದಾಗಿ ಚೆಂಡಿನ ಹೊಳಪನ್ನು ಕಾಯ್ದುಕೊಳ್ಳಲು ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ. ಎಂಜಲಿನ ಬದಲು ಚೆಂಡಿಗೆ ಬೆವರು ಹಚ್ಚಬಹುದಾಗಿದೆ ಎಂದು ಹೇಳಲಾಗಿದೆ.
7/ 15
ನೋ ಹ್ಯಾಂಡ್ಶೇಕ್: ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು, ನಾಯಕರು ಶೇಕ್ ಹ್ಯಾಂಡ್ ಮಾಡಿಕೊಳ್ಳುವುದು ಅಥವಾ ಪರಸ್ಪರ ತಬ್ಬಿಕೊಳ್ಳುವುದನ್ನು ನಿಷೇಧಿಸಲಾಗಿದೆ.
8/ 15
ಸಂಭ್ರಮಾರಣೆಗೆ ಬ್ರೇಕ್: ವಿಕೆಟ್ ಉರುಳಿದಾಗ ಕ್ರಿಕೆಟಿಗರೆಲ್ಲ ಒಂದೆಡೆ ಗುಂಪುಗೂಡಿ ಸಂಭ್ರಮ ನಡೆಸುವಂತಿಲ್ಲ. ಓಡಿ ಬಂದು ತಬ್ಬಿಕೊಳ್ಳುವುದು, ಬೌಲರ್ಗಳ ಹಾಗೂ ಕ್ಯಾಚ್ ಪಡೆದವರ ಮೈಮೇಲೆ ಏರಿ ಹೋಗುವುದು, ಬೌಲರ್ಗಳ ಕೈ ತಟ್ಟಿ ಸಂಭ್ರಮಿಸುವುದು ಇಲ್ಲಿ ಕಂಡುಬರದು. ಮೊಣಕೈ ಸ್ಪರ್ಶಕ್ಕೆ ಯಾವುದೇ ಅಡ್ಡಿ ಇಲ್ಲ. ಬೇಕಿದ್ದರೆ ಕಾಲಿಗೆ ಕಾಲನ್ನು ತಾಗಿಸಲೂಬಹುದು.
9/ 15
ಪ್ರಶಸ್ತಿ ಸಮಾರಂಭ ಅನುಮಾನ: ಪಂದ್ಯ ಮುಗಿದ ಬಳಿಕ ನಡೆಯುವ ಪ್ರಶಸ್ತಿ ಸಮಾರಂಭ ಅಥವಾ ನಾಯಕರ ಜೊತೆ ಪಂದ್ಯದ ಅಭಿಪ್ರಾಯ ಕೇಳುವ ಪದ್ದತಿ ಇಲ್ಲ ಎಂದು ಹೇಳಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ನಿಯಮ ಅನ್ವಯವಾಗಿರುತ್ತದೆ.
10/ 15
ಸುದ್ದಿಗೋಷ್ಠಿ ಇಲ್ಲ: ಪಂದ್ಯ ಆರಂಭಕ್ಕೆ ಮುನ್ನ ಅಥವಾ ಪಂದ್ಯ ಮುಗಿದ ಬಳಿಕ ಪತ್ರಕರ್ತರೊಂದಿಗೆ ತಂಡದ ನಾಯಕ ಅಥವಾ ಕೋಚ್ ಸುದ್ದಿಗೋಷ್ಠಿ ನಡೆಸುವುದು ವಾಡಿಕೆ. ಆದರೆ, ಈ ಬಾರಿ ಈರೀತಿಯ ಚಟುವಟಿಕೆ ಇರುವುದಿಲ್ಲ.
11/ 15
ಡ್ರೆಸ್ಸಿಂಗ್ ರೋಂ ಮಸ್ತಿ ಬ್ಯಾನ್: ಹೌದು, ಪಂದ್ಯದ ಮಧ್ಯೆ ಅಥವಾ ಒಂದು ತಂಡದ ಪಂದ್ಯ ಗೆದ್ದ ಬಳಿಕ ಸಾಮಾನ್ಯವಾಗಿ ಡ್ರೆಸ್ಸಿಂಗ್ ರೋಂಗೆ ತೆರಳಿ ಕುಣಿಸು ಕುಪ್ಪಳಿಸುವುದು ನೀವು ನೋಡೆ ಇರುತ್ತೀರಿ. ಅಥವಾ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ಗುಂಪುಗೂಡಿ ಸಮಲೋಚನೆ ನಡೆಸುತ್ತಿರುತ್ತಾರೆ. ಆದರೆ, ಈ ಬಾರಿ ಈರೀತಿಯಾಗಿ ಯಾವುದು ನಡೆಯುವುದಿಲ್ಲ.
12/ 15
ಫ್ರಾಂಚೈಸಿ ಓನರ್ಗೂ ನಿರ್ಭಂದ?: ಹೌದು, ಈ ಹಿಂದೆ ತನ್ನ ಫ್ರಾಂಚೈಸಿ ಆಟಗಾರರನ್ನು ಹುರಿದುಂಬಿಸಲು ಓನರ್ಗಳಾದ ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಶಾರುಖ್ ಖಾನ್ ಮೈದಾನದಲ್ಲಿ ತುಂಬಾನೆ ಆ್ಯಕ್ಟಿವ್ ಇರೋದನ್ನು ಕಂಡಿದ್ದೀರಿ. ಆದರೆ, ಈ ಬಾರಿ ಇದು ಯಾವುದಕ್ಕೂ ಅನುಮತಿ ಇಲ್ಲ.
13/ 15
ಕುಟುಂಬದವರಿಗೆ ನೋ ಎಂಟ್ರಿ: ಟೂರ್ನಿಯ ವೇಳೆ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳಲು ಆಟಗಾರರ ಪತ್ನಿ-ಮಕ್ಕಳು ಅಥವಾ ಗೆಳತಿಗೆ ನಿರ್ಬಂಧ ಹೇರಿದೆ. ಆಟಗಾರರೊಂದಿಗೆ ಕುಟುಂಬದವರೂ ಯುಎಇಗೆ ಪ್ರಯಾಣಿಸಿದರೆ ಆಗ ಹೋಟೆಲ್ ರೂಂಗಳಲ್ಲಿ ಜಾಗದ ವ್ಯವಸ್ಥೆ ಮಾಡುವುದು ಕಷ್ಟಕರವಾಗಲಿದೆ ಎಂಬ ಮಾತುಗಳು ಕೇಳಿಬಂದ ಹಿನ್ನಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
14/ 15
ಕೆಲ ಆಟಗಾರರ ಮಕ್ಕಳು 3-5 ವರ್ಷ ವಯಸ್ಸಿನವರಾಗಿದ್ದು, ಅವರನ್ನು ಜೈವಿಕ-ಸುರಕ್ಷಾ ವಾತಾವರಣದ ಕಾರಣ ಹೋಟೆಲ್ ರೂಂಗಳಲ್ಲಿ 2 ತಿಂಗಳ ಕಾಲ ಕೂಡಿಹಾಕುವುದು ಕೂಡ ಸಾಧ್ಯವಾಗದು ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು.
15/ 15
ಇನ್ನೂ ಟಾಸ್ ಪ್ರಕ್ರಿಯೆ ವೇಳೆ ಪೇಪರ್ನಲ್ಲಿ ಪ್ಲೇಯರ್ ಲಿಸ್ಟ್ ಅನ್ನು ತೆಗೆದುಕೊಂಡು ಬರುವ ನಿಯಮ ಈ ಬಾರಿ ಇರಲ್ಲ. ಇದರ ಬದಲಾಗಿ ಡಿಜಿಟಲ್ ಅಲ್ಲೇ ಪ್ರಕಟಿಸಲಾಗುತ್ತದೆ.