ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಆಡಿದ 8 ಪಂದ್ಯಗಳಲ್ಲಿ ಧೋನಿ ಪಡೆ ಕೇವಲ 3ರಲ್ಲಿ ಜಯ ಸಾಧಿಸಿ ಐದು ಪಂದ್ಯಗಳಲ್ಲಿ ಸೋಲುಕಂಡಿದೆ. ಚೆನ್ನೈ ಪ್ರದರ್ಶನ ಕಳಪೆ ಆಗಿದ್ದರೂ ವಿಶ್ವದ ಶ್ರೇಷ್ಠ ಬೌಲರ್ ಎನಿಸಿಕೊಂಡಿರುವ ಇಮ್ರಾನ್ ತಾಹಿರ್ಗೆ ಮಾತ್ರ ಇನ್ನೂ ಅವಕಾಶ ನೀಡಲಿಲ್ಲ.
2/ 10
ಕಳೆದ 12ನೇ ಆವೃತ್ತಿಯ ಐಪಿಎಲ್ನಲ್ಲಿ ಇಮ್ರಾನ್ ತಾಹಿರ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಮೂಲಕ ಪರ್ಪಲ್ ಕ್ಯಾಪ್ಅನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ಈ ಬಾರಿ ಮಾತ್ರ ಇವರು ಒಂದೂ ಪಂದ್ಯವನ್ನು ಆಡಿಲ್ಲ.
3/ 10
ಈ ಬಾರಿಯ ಐಪಿಎಲ್ನಲ್ಲಿ ತಾಹಿರ್ ಅವರು ಸಹ ಆಟಗಾರರಿಗೆ ನೀರನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಪಂದ್ಯದ ಮಧ್ಯೆ ಆಗಾಗ್ಗೆ ನೀರಿನ ಬಾಟೆಲ್ನೊಂದಿಗೆ ಅಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
4/ 10
ಇದರಿಂದ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡಿದ್ದು, ಡ್ರಿಂಕ್ಸ್ ಪೂರೈಸಲು ಈ ಆಟಗಾರನನ್ನು ಚೆನ್ನೈ ತಂಡ ಉಪಯೋಗಿಸಿಕೊಳ್ಳುತ್ತಿದೆ ಎಂದು ನಾನಾ ರೀತಿಯಲ್ಲಿ ಟ್ವೀಟ್ ಮಾಡುತ್ತಿದ್ದಾರೆ.
5/ 10
ಇದನ್ನ ಮನಗಂಡ ತಾಹಿರ್ ಅಭಿಮಾನಿಗಳಿಗೆ ಟ್ವಿಟ್ಟರ್ನಲ್ಲಿ ಹೃದಯರ್ಸ್ಪರ್ಶಿ ಸಂದೇಶವೊಂದನ್ನು ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
6/ 10
ಈ ಹಿಂದೆ ನಾನು ಅಂಗಳದಲ್ಲಿ ಆಡುವಾಗ, ನನಗೆ ನೀರು ಸರಬರಾಜು ಮಾಡಿದ್ದ ಆಟಗಾರರಿಗೆ ಇದೀಗ ನಾನು ನೀರು ನೀಡುತ್ತಿದ್ದೇನೆ. ತಂಡ ಎಂದ ಮೇಲೆ ಇದು ನಮ್ಮ ಕರ್ತವ್ಯ. ನೀರಿನ ಬಾಟೆಲ್ ಆಟಗಾರರಿಗೆ ನೀಡುವ ಮೂಲಕ ತಂಡದ ಗೆಲುವಿಗೆ ಸಹಕಾರಿ ನೀಡುವುದು ಮುಖ್ಯ ಎಂದು ತಾಹಿರ್ ಟ್ವೀಟ್ ಮೂಲಕ ಹೇಳಿದ್ದಾರೆ.
7/ 10
ಆಟಗಾರರಿಗೆ ನೀರು ನೀಡಿ ಬೆಂಬಲಿಸುವುದು ನನ್ನ ಕರ್ತವ್ಯ. ನಾನು ಆಡುವುದು ಅಥವಾ ಆಡದೇ ಇರುವುದು ಮುಖ್ಯವಲ್ಲ, ಪಂದ್ಯ ಗೆಲ್ಲುವುದು ಮುಖ್ಯ ಎಂದು ಹೇಳಿ ತಾಹಿರ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
8/ 10
ತಾಹಿರ್ಗೆ ಅವಕಾಶ ನೀಡದ ಬಗ್ಗೆ ಮಾತನಾಡಿರುವ ಸಿಎಸ್ಕೆ ನಾಯಕ ಎಂಎಸ್ ಧೋನಿ ತಾಹಿರ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಲು ಬಯಸುತ್ತಿದ್ದೇವೆ. ಆದರೆ, ವಿದೇಶಿ ಆಟಗಾರನಾಗಿ ತಂಡದ ಸಂಯೋಜನೆಯಲ್ಲಿ ತಾಹಿರ್ ಸೇರ್ಪಡೆ ಅಸಂಭವವಾಗುತ್ತಿದೆ ಎಂದಿದ್ದಾರೆ.
9/ 10
ದಕ್ಷಿಣ ಆಫ್ರಿಕಾದ ಹಿರಿಯ ಲೆಗ್ ಸ್ಪಿನ್ನರ್ 2019ರ ಐಪಿಎಲ್ ಟೂರ್ನಿಯಲ್ಲಿ 26 ವಿಕೆಟ್ಗಳನ್ನು ಕಬಳಿಸಿದ್ದರು ಹಾಗೂ ಪರ್ಪಲ್ ಕ್ಯಾಪ್ ಗೆದ್ದಿದ್ದರು.
10/ 10
ಆದರೆ, ಈ ಬಾರಿ ಆಡುವ ಬಳಗದಲ್ಲಿ ಅವಕಾಶವನ್ನು ಗಳಿಸದ ಇಮ್ರಾನ್ ತಾಹಿರ್ ಹನ್ನೆರಡನೇ ಆಟಗಾರನಾಗಿ ತಂಡದ ಸಹ ಆಟಗಾರಿಗೆ ಡ್ರಿಂಕ್ಸ್ ಪೂರೈಸುತ್ತಿದ್ದಾರೆ.