MS Dhoni: ಟಾಸ್ ಪ್ರಕ್ರಿಯೆಗೆ ಇಳಿಯುತ್ತಲೇ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಎಂ ಎಸ್ ಧೋನಿ
IPL 2020: ಇಂದಿನ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ ಕಣಕ್ಕಿಳಿದ ಆಟಗಾರ ಎಂಬ ದಾಖಲೆಗೆ ಧೋನಿ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿತ್ತು.
ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ನ 14ನೇ ಪಂದ್ಯ ನಡೆಯುತ್ತಿದ್ದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗುತ್ತಿವೆ.
2/ 12
ಈ ನಡುವೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
3/ 12
ಇಂದಿನ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ ಕಣಕ್ಕಿಳಿದ ಆಟಗಾರ ಎಂಬ ದಾಖಲೆಗೆ ಧೋನಿ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿತ್ತು.
4/ 12
ಈವರೆಗೆ 194 ಐಪಿಎಲ್ ಪಂದ್ಯಗಳನ್ನಾಡಿರುವ ಧೋನಿ ಸದ್ಯ ಅತಿ ಹೆಚ್ಚು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
5/ 12
ಸುರೇಶ್ ರೈನಾ 193 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಧೋನಿ ಆಡುವ ಮೂಲಕ ಈ ದಾಖಲೆಯನ್ನು ಸರಿದೂಗಿಸಿದ್ದರು. ಇಂದಿನ ಪಂದ್ಯದಲ್ಲಿ ಧೋನಿ ಈ ದಾಖಲೆಯನ್ನು ಮುರಿದಿದ್ದಾರೆ.
6/ 12
ಇದಿಷ್ಟೇ ಅಲ್ಲದೆ ಇಂದಿನ ಪಂದ್ಯದಲ್ಲಿ ಧೋನಿ ಕೇವಲ 2 ಸಿಕ್ಸರ್ ಸಿಡಿಸಿದರೆ ಟಿ-20 ಕ್ರಿಕೆಟ್ನಲ್ಲಿ 300 ಸಿಕ್ಸ್ ಚಚ್ಚಿದ ಮೂರನೇ ಭಾರತೀಯ ಆಟಗಾರ ಆಗಲಿದ್ದಾರೆ. ಸದ್ಯ ಧೋನಿ 298 ಸಿಕ್ಸರ್ ಬಾರಿಸಿದ್ದಾರೆ.
7/ 12
ಈ ಪಟ್ಟಿಯ ಮೊದಲ ಸ್ಥಾನದಲ್ಲಿ ರೋಹಿತ್ ಶರ್ಮಾ(368) ಇದ್ದರೆ, ಸುರೇಶ್ ರೈನಾ (311) ಎರಡನೇ ಸ್ಥಾನದಲ್ಲಿದ್ದಾರೆ.
8/ 12
ಇನ್ನೂ ಧೋನಿ ಕೇವಲ 24 ರನ್ ಗಳಿಸಿದರೆ ಐಪಿಎಲ್ನಲ್ಲಿ 4500 ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
9/ 12
ಕೀಪಿಂಗ್ನಲ್ಲೂ ಧೋನಿ ದಾಖಲೆ ಬರೆಯುವ ಹೊಸ್ತಿಲಲ್ಲದ್ದಾರೆ. ಎರಡು ಕ್ಯಾಚ್ ಪಡೆದರೆ ಐಪಿಎಲ್ನಲ್ಲಿ 100 ಕ್ಯಾಚ್ ಹಿಡಿದ ಸಾಧನೆ ಮಾಡಲಿದ್ದಾರೆ.
10/ 12
ಇಂದಿನ ಪಂದ್ಯಕ್ಕೆ ಚೆನ್ನೈ ಪರ ಇಂಜುರಿಯಿಂದ ಗುಣಮುಖರಾಗಿ ಅಂಬಟಿ ರಾಯುಡು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಂತೆಯೆ ಡ್ವೇನ್ ಬ್ರಾವೋ ಹಾಗೂ ಶಾರ್ದೂಲ್ ಠಾಕೂರ್ ಕೂಡ ಕಣಕ್ಕಿಳಿದಿದ್ದಾರೆ.
11/ 12
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಫಾಪ್ ಡುಪ್ಲೆಸಿಸ್, ಕೇದಾರ್ ಜಾಧವ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಶಾರ್ದೂಲ್ ಠಾಕೂರ್.
12/ 12
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್ಸ್ಟೋ (ವಿಕೆಟ್ ಕೀಪರ್), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಖಲೀಲ್ ಅಹಮದ್.