MI vs KKR playing 11: ಮುಂಬೈ-ಕೆಕೆಆರ್ ಪರ ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್ ರಾಜ್ಯದೇಶ-ವಿದೇಶಸಿನಿಮಾಕ್ರೀಡೆಲೈಫ್ ಸ್ಟೈಲ್ಫೋಟೋLive TVCoronaಟೆಕ್ExplainedGamesಟ್ರೆಂಡ್ ಹೋಮ್ » ಫೋಟೋ » IPL MI vs KKR playing 11: ಮುಂಬೈ-ಕೆಕೆಆರ್ ಪರ ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಕೆಕೆಆರ್ ತಂಡಕ್ಕೆ ಇಂಗ್ಲೆಂಡ್ ದಾಂಡಿಗ ಇಯಾನ್ ಮೋರ್ಗನ್ ಎಂಟ್ರಿ, ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಪ್ರಮುಖ ಅಸ್ತ್ರವಾಗಲಿದ್ದಾರೆ. ಅಲ್ಲದೆ ಈಗಾಗಲೇ ಕೆಕೆಆರ್ ಬೆನ್ನಲುಬಾಗಿರುವ ಆಂಡ್ರೆ ರಸೆಲ್ ಈ ಸೀಸನ್ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. News18 Kannada | September 23, 2020, 7:26 PM IST 1/ 8 ಅಬುಧಾಬಿ: ಐಪಿಎಲ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇಂದು 2 ಬಾರಿಯ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಶೇಖ್ ಝಾಯದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೂಲಕ ಕೆಕೆಆರ್ 13ನೇ ಸೀಸನ್ನಲ್ಲಿ ಶುಭರಾರಂಭ ಮಾಡುವ ಇರಾದೆಯಲ್ಲಿದೆ. ಅತ್ತ ಮೊದಲ ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ಖಾತೆ ತೆರೆಯುವ ತವಕದಲ್ಲಿದೆ. 2/ 8 ಉಭಯ ತಂಡಗಳು ಬಲಿಷ್ಠವಾಗಿದ್ದು, ಘಟಾನುಘಟಿ ಆಟಗಾರರು ಎರಡು ತಂಡಗಳಲ್ಲೂ ಇದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದ್ರೆ ಮುಂಬೈ ಇಂಡಿಯನ್ಸ್ ಕೆಕೆಆರ್ ವಿರುದ್ಧ ಮೇಲುಗೈ ಸಾಧಿಸಿದೆ. ಎರಡು ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 19 ಸಲ ಮುಂಬೈ ಇಂಡಿಯನ್ಸ್ ವಿಜಯ ಸಾಧಿಸಿದೆ. ಇನ್ನು 6 ಬಾರಿ ಗೆದ್ದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಗೆಲುವಿನ ಅಂಕಿಯನ್ನು ಏರಿಸುವ ಆತ್ಮ ವಿಶ್ವಾಸದಲ್ಲಿದೆ. 3/ 8 ಹಾಗೆಯೇ ಉಭಯದ ತಂಡಗಳ ನಡುವಣ ಕೊನೆಯ ಐದು ಪಂದ್ಯಗಳನ್ನು ತೆಗೆದುಕೊಂಡರೂ ಮುಂಬೈ ಇಂಡಿಯನ್ಸ್ ಪಾರುಪತ್ಯವನ್ನು ಹೊಂದಿದೆ. ಏಕೆಂದರೆ ಐದರಲ್ಲಿ ಕೇವಲ ಒಂದು ಗೆಲುವು ಸಾಧಿಸುವಲ್ಲಿ ಮಾತ್ರ ದಿನೇಶ್ ಕಾರ್ತಿಕ್ ಪಡೆ ಯಶಸ್ವಿಯಾಗಿದೆ. ಆದರೆ ಈ ಬಾರಿ ಕೆಕೆಆರ್ ತಂಡದಲ್ಲಿ ಕೆಲ ಬದಲಾವಣೆಗಳಾಗಿದ್ದು, ಹೀಗಾಗಿ ಫಲಿತಾಂಶಗಳಲ್ಲೂ ವ್ಯತ್ಯಾಸಗಳಾಗುವುದನ್ನು ನಿರೀಕ್ಷಿಸಬಹುದು. 4/ 8 ಕೆಕೆಆರ್ ತಂಡಕ್ಕೆ ಇಂಗ್ಲೆಂಡ್ ದಾಂಡಿಗ ಇಯಾನ್ ಮೋರ್ಗನ್ ಎಂಟ್ರಿ, ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಪ್ರಮುಖ ಅಸ್ತ್ರವಾಗಲಿದ್ದಾರೆ. ಅಲ್ಲದೆ ಈಗಾಗಲೇ ಕೆಕೆಆರ್ ಬೆನ್ನಲುಬಾಗಿರುವ ಆಂಡ್ರೆ ರಸೆಲ್ ಈ ಸೀಸನ್ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಸುನೀಲ್ ನರೈನ್ ಇದ್ದು, ಇಬ್ಬರ ಮೇಲೆ ತಂಡದ ಅವಲಂಭಿತವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಪಂದ್ಯದ ಮೂಲಕ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದ್ದು, ಇವರಿಗೆ ಜೋಡಿಯಾಗಿ ನರೈನ್ ಕಣಕ್ಕಿಳಿಯಲಿದ್ದಾರೆ. 5/ 8 ಮತ್ತೊಂದೆಡೆ, ಮೊದಲ ಸೋಲಿನಿಂದ ಎಚ್ಚೆತ್ತಿರುವ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಖಾತೆ ತೆರೆಯಲು ಸಕಲ ಸಿದ್ದತೆಯಲ್ಲಿದೆ. ಸಿಎಸ್ಕೆ ವಿರುದ್ಧ ಕಣಕ್ಕಿಳಿದ ತಂಡವೇ ಇಂದು ಕೂಡ ಮೈದಾನಕ್ಕಿಳಿಯಲಿದೆ. 6/ 8 ಇಂದು ಕಣಕ್ಕಿಳಿಯುವ ಉಭಯ ತಂಡಗಳು ಈ ಕೆಳಗಿನಂತಿವೆ: 7/ 8 ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್ , ಕೀರನ್ ಪೊಲಾರ್ಡ್, ಸೌರವ್ ತಿವಾರಿ, ಪ್ಯಾಟಿನ್ಸನ್ 8/ 8 ಕೋಲ್ಕತಾ ನೈಟ್ ರೈಡರ್ಸ್: ಸುನಿಲ್ ನರೈನ್, ಶುಭ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮೋರ್ಗಾನ್, ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ನಾಯಕ), ನಿಖಿಲ್ ನಾಯಕ್, ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ಸಂದೀಪ್ ವಾರಿಯರ್, ಶಿವಂ ಮಾವಿ ತಾಜಾ ಸುದ್ದಿIPL 2021: ಈ ಬಾರಿ ಐಪಿಎಲ್ ಟೂರ್ನಿಯಲ್ಲಿನ ಗಮನಾರ್ಹ ಬದಲಾವಣೆಗಳೇನು?Anant Kumar Hegde: ಸಂಸದ ಅನಂತ ಕುಮಾರ್ ಹೆಗಡೆಗೆ ಶಸ್ತ್ರ ಚಿಕಿತ್ಸೆ; ಇನ್ನು ಒಂದು ವರ್ಷ ಎಲ್ಲೂ ಓಡಾಡೋ ಹಾಗಿಲ್ಲ!Road Safety World Series 2021: ಸೆಹ್ವಾಗ್ ಸಿಡಿಲಬ್ಬರಕ್ಕೆ ತತ್ತರಿಸಿದ ಬಾಂಗ್ಲಾ ಲೆಜೆಂಡ್ಸ್..!Women's Day 2021; ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣಕ್ಕೆ ಹೊಸ ಉಡುಗೊರೆ ನೀಡಿದ ನೀತಾ ಅಂಬಾನಿ! Top Stories ಸಂಸದ ಅನಂತ ಕುಮಾರ್ ಹೆಗಡೆಗೆ ಶಸ್ತ್ರ ಚಿಕಿತ್ಸೆ; ಇನ್ನು ಒಂದು ವರ್ಷ ಎಲ್ಲೂ ಓಡಾಡೋ ಹಾಗಿಲ್ಲ! Women's Day 2021; ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣಕ್ಕೆ ಹೊಸ ಉಡುಗೊರೆ ನೀಡಿದ ನೀತಾ ಅಂಬಾನಿ! ಆ ಸೆಕ್ಸ್ ಸಿಡಿ ನಕಲಿ, ನಮ್ಮ ಕುಟುಂಬದ ಹೆಸರು ಕೆಡಿಸಲು ಷಡ್ಯಂತ್ರ ನಡೆದಿದೆ; ಬಾಲಚಂದ್ರ ಜಾರಕಿಹೊಳಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯದ ದೂರನ್ನು ಹಿಂಪಡೆದ ದಿನೇಶ್ ಕಲ್ಲಹಳ್ಳಿ ರೈತರು ಭೂಮಿ ಕಳೆದುಕೊಂಡರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ; ಕೇಂದ್ರ ಸಚಿವ ಸಂಜೀವ್ ಬಾಲ್ಯನ್