ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಅದರಲ್ಲೂ ಐಪಿಎಲ್ನ 39ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೇವಲ 84 ರನ್ಗಳಿಗೆ ನಿಯಂತ್ರಿಸುವ ಮೂಲಕ ಭರ್ಜರಿ ಬೌಲಿಂಗ್ ಪ್ರದರ್ಶಿಸಿದೆ.
2/ 9
ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್ಗಳಿಸಿತು. ಇದು ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ.
3/ 9
ಹಾಗೆಯೇ 20 ಓವರ್ ಸಂಪೂರ್ಣ ಬ್ಯಾಟಿಂಗ್ ಮಾಡಿ ಆಲೌಟ್ ಆಗದೇ ಗಳಿಸಿರುವ ಅತೀ ಕಡಿಮೆ ಮೊತ್ತ ದಾಖಲಿಸಿದ ಹೀನಾಯ ದಾಖಲೆ ಈಗ ಕೆಕೆಆರ್ ಪಾಲಾಗಿದೆ. ಇದಕ್ಕೂ ಮುಂದೆ ಐಪಿಎಲ್ನಲ್ಲಿ ಆಲೌಟ್ ಆಗದೇ ಕಿಂಗ್ಸ್ ಇಲೆವೆನ್ ಪಂಜಾಬ್ (92/8) ಅತೀ ಕಡಿಮೆ ಮೊತ್ತ ಪೇರಿಸಿತ್ತು.
4/ 9
ಇದಾಗ್ಯೂ ಐಪಿಎಲ್ನ ಕಳಪೆ ಬ್ಯಾಟಿಂಗ್ ದಾಖಲೆ ಆರ್ಸಿಬಿ ಹೆಸರಿನಲ್ಲಿದೆ. ಹಾಗಿದ್ರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ದಾಖಲಾದ ಅತೀ ಕಡಿಮೆ ಸ್ಕೋರ್ಗಳಾವುವು ಎಂಬುದನ್ನು ನೋಡೋಣ.
5/ 9
5- ಕೊಲ್ಕತ್ತಾ ನೈಟ್ ರೈಡರ್ಸ್: 2008 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 15.2 ಓವರ್ಗಳಲ್ಲಿ ಕೇವಲ 67 ರನ್ ಬಾರಿಸಿ ಸರ್ವಪತನ ಕಂಡಿತು.
6/ 9
4- ಡೆಲ್ಲಿ ಡೇರ್ಡೆವಿಲ್ಸ್: 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡವು 17.1 ಓವರ್ನಲ್ಲಿ ಕೇವಲ 67 ಮಾತ್ರ ರನ್ ಕಲೆಹಾಕುವಲ್ಲಿ ಶಕ್ತರಾಗಿದ್ದರು.
7/ 9
3- ಡೆಲ್ಲಿ ಡೇರ್ಡೆವಿಲ್ಸ್: 2017ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಕೆಂಡ್ ಇನಿಂಗ್ಸ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ 13.4 ಓವರ್ನಲ್ಲಿ 66 ರನ್ಗಳಿಗೆ ಆಲೌಟ್ ಆಗಿತ್ತು.
8/ 9
2- ರಾಜಸ್ಥಾನ್ ರಾಯಲ್ಸ್: 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ ಸೆಕೆಂಡ್ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 15.1 ಓವರ್ನಲ್ಲಿ 58 ರನ್ಗಳಿಗೆ ಸರ್ವಪತನ ಕಂಡಿತು.
9/ 9
1- ರಾಯಲ್ ಚಾಲೆಂಜರ್ಸ್: 2017ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೆಕೆಂಡ್ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಆರ್ಸಿಬಿ 9.4 ಓವರ್ನಲ್ಲಿ 49 ರನ್ಗಳಿಸಿ ಸರ್ವಪತನ ಕಂಡಿತು. ಕೊಹ್ಲಿ ಪಡೆಯ ಈ ಇನಿಂಗ್ಸ್ ಐಪಿಎಲ್ ಇತಿಹಾಸದ ಅತ್ಯಂತ ಕಳಪೆ ಮೊತ್ತ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.