ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಈಗಾಗಲೇ ಕೆಲ ಫ್ರಾಂಚೈಸಿ ಆಟಗಾರರು ಯುಎಇಗೆ ತಲುಪಿದ್ದು ಸದ್ಯದಲ್ಲೇ ಅಭ್ಯಾಸಕ್ಕೆ ಇಳಿಯಲಿದ್ದಾರೆ.
2/ 12
ಸೆಪ್ಟೆಂಬರ್ 19 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದ್ದು ನವೆಂಬರ್ 10ಕ್ಕೆ ಫೈನಲ್ ಪಂದ್ಯ ಆಯೋಜಿಸಲಾಗಿದೆ.
3/ 12
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಿಎಸ್ಕೆ, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಯುಎಇಗೆ ತಲುಪಿದೆ.
4/ 12
ಇನ್ನೇನು ಐಪಿಎಲ್ಗೆ ಎಲ್ಲ ಸಿದ್ಧತೆಯನ್ನು ಫ್ರಾಂಚೈಸಿ ಆಟಗಾರರು ಭರ್ಜರಿ ಆಗಿ ಆರಂಭ ಮಾಡಬೇಕು ಎಂಬುವ ಹೊತ್ತಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ.
5/ 12
ಮುಂಬೈ ಇಂಡಿಯನ್ಸ್ ತಂಡ ಪ್ರಮುಖ ವೇಗಿ ಲಸಿತ್ ಮಾಲಿಂಗ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
6/ 12
ಅಲ್ಲದೆ ಕಷ್ಟದ ಸಮಯದಲ್ಲಿ ಅವರ ಜೊತೆಗಿರಲು ನಿರ್ಧರಿಸಿರುವ ಬಲಗೈ ವೇಗಿ ಐಪಿಎಲ್ 2020 ಟೂರ್ನಿಯಿಂದಲೇ ಹೊರಗುಳಿದರೂ ಅಚ್ಚರಿಯೇನಿಲ್ಲ.
7/ 12
ಮಲಿಂಗಾ ಅವರ ತಂದೆ ಅನಾರೋಗ್ಯಕ್ಕೊಳಗಾಗಿರುವ ಕಾರಣ ಅವರಿಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ಅವರು ತಂಡವನ್ನ ತಡವಾಗಿ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
8/ 12
ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಸರದಾರರಲ್ಲಿ ಮುಂಚೂಣಿಯಲ್ಲಿರುವ ಮಾಲಿಂಗ, ಈವರೆಗೆ ಒಟ್ಟು 170 ವಿಕೆಟ್ಗಳನ್ನು ಪಡೆದಿದ್ದಾರೆ. ಕಳೆದ ವರ್ಷವೂ ಅದ್ಭುತ ಪ್ರದರ್ಶನ ತೋರಿದ್ದ ಮಾಲಿಂಗ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಗೆಲುವಿಗೆ ಕಾರಣವಾಗಿದ್ದರು.
9/ 12
ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಮಾಲಿಂಗ ಬಹಳ ಮುಖ್ಯ ಪಾತ್ರ ವಹಿಸಿದ್ದರು. ತಂಡದ ಪರ ಫೈನಲ್ನಲ್ಲಿ ಕೊನೆಯ ಓವರ್ ಬೌಲ್ ಮಾಡಿದ್ದ ಯಾರ್ಕರ್ ಸ್ಪೆಷಲಿಸ್ಟ್ 1 ರನ್ಗಳ ರೋಚಕ ಜಯ ತಂದುಕೊಟ್ಟಿದ್ದರು.
10/ 12
ಕಳೆದ ಮಾರ್ಚ್ನಲ್ಲಿ ಗ್ಯಾಲೆಯಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20ಐನಲ್ಲಿ ಮಾಲಿಂಗ ಆಡಿದ್ದೇ ಕೊನೆ. ಆ ಬಳಿಕ ಲಸಿತ್ ಯಾವುದೇ ಪಂದ್ಯಗಳನ್ನಾಡಿಲ್ಲ.
11/ 12
ಒಂದು ವೇಳೆ ಮಾಲಿಂಗ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಆದರೆ, ಅನುಭವಿ ಎಡಗೈ ವೇಗದ ಬೌಲರ್ ಇಸುರು ಉದನಾ ಈ ಬಾರಿ ಆಡಲಿರುವ ಶ್ರೀಲಂಕಾದ ಏಕಮಾತ್ರ ಆಟಗಾರ ಎನಿಸಿಕೊಳ್ಳಲಿದ್ದಾರೆ.
12/ 12
ಕಳೆದ ಡಿಸೆಂಬರ್ನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಉದನಾ ಅವರನ್ನು ಮೂಲ ಬೆಲೆಗೆ (50 ಲಕ್ಷ ರೂ.) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.