13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಪ್ರತಿ ವರ್ಷದಂತೆ ಭಾರತದಲ್ಲಿ ಈ ಬಾರಿ ಐಪಿಎಲ್ ನಡೆಯುತ್ತಿಲ್ಲ ಎಂಬ ಕೊಂಚ ಬೇಸರವಿದ್ದರೂ ಐಪಿಎಲ್ ನಡೆಯುತ್ತಿದೆಯಲ್ಲಾ ಎಂಬ ಸಮಾಧಾನ ಅಭಿಮಾನಿಗಳಲ್ಲಿದೆ.
2/ 16
ಮುಂದಿನ ತಿಂಗಳು ಸೆಪ್ಟೆಂಬರ್ 19ಕ್ಕೆ ಯುಎಇನಲ್ಲಿ 2020 ಐಪಿಎಲ್ಗೆ ಚಾಲನೆ ಸಿಗಲಿದ್ದು, ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಸಿಸಿಐ ವೇಳಾಪಟ್ಟಿ ಕೂಡ ಬಿಡುಗಡೆ ಮಾಡಲಿದೆ.
3/ 16
ಐಪಿಎಲ್ನಲ್ಲಿ ಪಾಲ್ಗೊಳ್ಳುವ ಖ್ಯಾತ ಆಟಗಾರರಲ್ಲಿ ಕೆಲ ಆಟಗಾರರದ್ದು 2020ರ ಸೀಸನ್ ಕೊನೆಯಾದಾದರೂ ಅಚ್ಚರಿಯಿಲ್ಲ. ಅಂಥ ಆಟಗಾರರ ಪಟ್ಟಿ ಇಲ್ಲಿದೆ.
4/ 16
ಕ್ರಿಸ್ ಗೇಲ್: ಸ್ಫೋಟಕ ಬ್ಯಾಟಿಂಗ್ಗೆ ಹೆಸರಾದವರು ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ನಲ್ಲಿರುವ ಗೇಲ್ ಐಪಿಎಲ್ನಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ.
5/ 16
ಅತ್ಯಧಿಕ ಶತಕ (6), ಅತ್ಯಧಿಕ ವೈಯಕ್ತಿಕ ರನ್ (175), ಅತ್ಯಧಿಕ ಸಿಕ್ಸರ್ (326) ದಾಖಲೆ ಗೇಲ್ ಹೆಸರಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ಆರ್ಸಿಬಿ ತಂಡಗಳನ್ನು ಪ್ರತಿನಿಧಿಸಿರುವ ಗೇಲ್ ಬ್ಯಾಟ್ ಈಗೀಗ ಅಷ್ಟೊಂದು ಸದ್ದು ಮಾಡುತ್ತಿಲ್ಲ.
6/ 16
ಗೇಲ್ ಅವರನ್ನು ಹರಾಜಿನ ವೇಳೆ ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ 40ರ ಹರೆಯದ ಗೇಲ್ಗೆ ಇದೇ ಕೊನೆಯ ಐಪಿಎಲ್ ಸೀಸನ್ ಆದರೂ ಅಚ್ಚರಿಯಿಲ್ಲ.
7/ 16
ಇಮ್ರಾನ್ ತಾಹೀರ್: ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಸದ್ಯ ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
8/ 16
ಹೆಚ್ಚು ಬಾರಿ ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡುತ್ತಿರುವ ತಾಹೀರ್, 6 ಸೀಸನ್ಗಳಲ್ಲಿ 20.39ರ ಸರಾಸರಿಯಂತೆ 79 ವಿಕೆಟ್ ಪಡೆದಿದ್ದಾರೆ.
9/ 16
ಕಳೆದ ಸೀಸನ್ನಲ್ಲಿ 26 ವಿಕೆಟ್ ಪಡೆದಿದ್ದ ತಾಹೀರ್ ಪರ್ಪಲ್ ಕ್ಯಾಪ್ ಪಡೆದಿದ್ದರು. 41ರ ಹರೆಯದ ಇಮ್ರಾನ್ ಈಗ ಆಟ ನಿಲ್ಲಿಸುವ ಘಟ್ಟದಲ್ಲಿದ್ದಾರೆ. ವಯೋಸಹಜವಾಗಿ ಆಟ ಕಷ್ಟವಾಗುವುದರಿಂದ ತಾಹೀರ್ ಆಟ ನಿಲ್ಲಿಸಬಹುದು.
10/ 16
ಡೇಲ್ ಸ್ಟೇನ್: ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಮೈದಾನದಲ್ಲಿ ಕಾಣಸಿಕೊಂಡಿದ್ದಕ್ಕಿಂತ ಗಾಯಗೊಂಡು ದೂರ ಉಳಿದಿದ್ದೇ ಹೆಚ್ಚು.
11/ 16
ಆರ್ಸಿಬಿ ಮೂಲಕ ಆಟ ಆರಂಭಿಸಿದ್ದ ಸ್ಟೇನ್ ಆ ಬಳಿಕ ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್ ತಂಡಕ್ಕೆಲ್ಲ ಹೋಗಿ ಮತ್ತೀಗ ಆರ್ಸಿಬಿಗೆ ಬಂದಿದ್ದಾರೆ.
12/ 16
37ರ ಹರೆಯದ ಸ್ಟೇನ್ 2019ರ ಸೀಸನ್ನಲ್ಲಿ ಎರಡು ಪಂದ್ಯಗಳಲ್ಲಿ ಆಡಿ ಆರ್ಸಿಬಿ ಗೆಲುವಿಗೆ ಕಾರಣವಾಗಿದ್ದರು. ಆದರೆ ಸ್ಟೇನ್ ವೃತ್ತಿಬದುಕು ಈಗ ಕೊನೇ ಹಂತದಲ್ಲಿದೆ.
13/ 16
ಅಮಿತ್ ಮಿಶ್ರಾ: ಐಪಿಎಲ್ ಪ್ರತೀ ಸೀಸನ್ನಲ್ಲೂ ಅಮಿತ್ ಮಿಶ್ರಾ ಆಡಿದ್ದಾರೆ. ಲೆಗ್ ಸ್ಪಿನ್ನರ್ ಮಿಶ್ರಾ ಐಪಿಎಲ್ ಕ್ರಿಕೆಟ್ನಲ್ಲಿ ಅತೀ ಯಶಸ್ವಿ ಬೌಲರ್ ಅನ್ನಿಸಿಕೊಂಡವರು.
14/ 16
12 ಸೀಸನ್ಗಳಲ್ಲಿ ಮಿಶ್ರಾ 19.75ರ ಸರಾಸರಿಯಂತೆ 157 ವಿಕೆಟ್ ಪಡೆದಿದ್ದಾರೆ. ಅಲ್ಲದೆ 3 ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆಯೂ ಮಾಡಿದ್ದಾರೆ. ನವೆಂಬರ್ನಲ್ಲಿ 38ರ ಹರೆಯಕ್ಕೆ ಕಾಲಿರಿಸುತ್ತಿರುವ ಮಿಶ್ರಾ ಇನ್ನು ಹೆಚ್ಚು ಸೀಸನ್ಗಳಲ್ಲಿ ಆಡುವ ನಿರೀಕ್ಷೆಯಿಲ್ಲ.
15/ 16
ಹರ್ಭಜನ್ ಸಿಂಗ್: ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಭಜ್ಜಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು.
16/ 16
ಮುಂಬೈ ಮತ್ತು ಚೆನ್ನೈ ಎರಡೂ ತಂಡಗಳು ಕ್ರಮವಾಗಿ 4, 3ರಂತೆ ಒಟ್ಟಿಗೆ 7 ಬಾರಿ ಚಾಂಪಿಯನ್ಸ್ ಆಗಿ ಮಿನುಗಿದೆ. ಐಪಿಎಲ್ನಲ್ಲಿ 150+ ವಿಕೆಟ್ಗಳೊಂದಿಗೆ ಮೂರನೇ ಅತ್ಯಧಿಕ ವಿಕೆಟ್ ದಾಖಲೆ ಹೊಂದಿರುವ ಭಜ್ಜಿಗೀಗ 40ರ ಹರೆಯ. ಬಹುಶಃ 13ನೇ ಐಪಿಎಲ್ ಆವೃತ್ತಿ ಭಜ್ಜಿಯ ಕೊನೆಯ ಐಪಿಎಲ್ ಆವೃತ್ತಿಯಾದರೂ ಅಚ್ಚರಿಯಿಲ್ಲ.