13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೇನು ಸುಮಾರು ಒಂದು ತಿಂಗಳಷ್ಟೆ ಬಾಕಿ ಉಳಿದಿದೆ. ಭಾರತದಲ್ಲಿ ಈ ಬಾರಿಯ ಐಪಿಎಲ್ ನಡೆಯುತ್ತಿಲ್ಲ ಎಂದು ಕೊಂಚ ಬೇಸರದಲ್ಲಿದ್ದರೂ ಐಪಿಎಲ್ ನಡೆಯುತ್ತಿದೆಯಲ್ಲಾ ಎಂಬ ಸಮಾಧಾನ ಅಭಿಮಾನಿಗಳಲ್ಲಿದೆ.
2/ 30
ಸೆಪ್ಟೆಂಬರ್ 19ಕ್ಕೆ ಯುಎಇನಲ್ಲಿ 2020 ಐಪಿಎಲ್ಗೆ ಚಾಲನೆ ಸಿಗಲಿದ್ದು, ನವೆಂಬರ್ 10 ರಂದು ಫೈನಲ್ ಪಂದ್ಯ ಏರ್ಪಡಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಸಿಸಿಐ ವೇಳಾಪಟ್ಟಿ ಕೂಡ ಬಿಡುಗಡೆ ಮಾಡಲಿದೆ.
3/ 30
ಐಪಿಎಲ್ ಅಭಿಮಾನಿಗಳ ಮೆಚ್ಚಿನ ತಂಡ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ಬಾರಿ ಎದುರಾಳಿಗೆ ಪೈಪೋಟಿ ನೀಡುವುದರಲ್ಲಿ ಎತ್ತಿದ ಕೈ. ಈ ಬಾರಿಯಂತು ಧೋನಿ ಪಡೆ ಮತ್ತಷ್ಟು ಬಲಿಷ್ಠವಾಗಿದೆ.
4/ 30
ಒಟ್ಟು ಮೂರು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಯುಎಇನಲ್ಲಿ ಯಾವರೀತಿ ಪ್ರದರ್ಶನ ನೀಡುಲಿದೆ ಎಂಬುದು ಕುತೂಹಲ ಕೆರಳಿಸಿದೆ.
5/ 30
ಹಾಗಾದ್ರೆ ಸಿಎಸ್ಕೆ ತಂಡದಲ್ಲಿ ಈ ಬಾರಿ ಯಾರೆಲ್ಲ ಇದ್ದಾರೆ ಎಂಬ ಕುರಿತ ಮಾಹಿತಿ ಇಲ್ಲಿದೆ.