IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

ಕರ್ನಾಟಕದ ಕ್ರಿಕೆಟಿಗರು ಕೂಡ ಟೂರ್ನಿಯಲ್ಲಿ ಕಣಕ್ಕಿಳಿಯಲು ತಯಾರುಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಐಪಿಎಲ್​ನಲ್ಲಿ ಕನ್ನಡಿಗರ ದಂಡೇ ಇದೆ.

First published:

  • 112

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಇಡೀ ವಿಶ್ವವೇ ಅನೇಕ ತಿಂಗಳುಗಳಿಂದ ಕಾತುರದಿಂದ ಕಾಯುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ.

    MORE
    GALLERIES

  • 212

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಮುಂದಿನ ತಿಂಗಳು ಸೆಪ್ಟೆಂಬರ್ 19 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಯುಎಇನಲ್ಲಿ ಚಾಲನೆ ಸಿಗಲಿದೆ. ಮೈದಾನಕ್ಕೆ ಬಂದು ಕ್ರಿಕೆಟ್ ನೋಡಲು ಸಾಧ್ಯವಾಗಿಲ್ಲ ಎಂದಾದರೂ ಟಿವಿ ಮುಂದೆ ಕೂತು ರೋಚಕ ಪಂದ್ಯಗಳ ವೀಕ್ಷಣೆ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

    MORE
    GALLERIES

  • 312

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಈಗಾಗಲೇ ಆರ್​ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಸೇರಿ ಎಂಟು ಪ್ರಾಂಚೈಸಿಗಳು ಅರಬ್ ರಾಷ್ಟ್ರಕ್ಕೆ ತಲುಪಿದ್ದು ಕ್ವಾರಂಟೈನ್ ಮುಗಿಸಿ ಅಭ್ಯಾಸಕ್ಕೆ ತಯಾರಾಗುತ್ತಿದೆ.

    MORE
    GALLERIES

  • 412

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಈ ನಡುವೆ ಕರ್ನಾಟಕದ ಕ್ರಿಕೆಟಿಗರು ಕೂಡ ಟೂರ್ನಿಯಲ್ಲಿ ಕಣಕ್ಕಿಳಿಯಲು ತಯಾರುಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಐಪಿಎಲ್​ನಲ್ಲಿ ಕನ್ನಡಿಗರ ದಂಡೇ ಇದೆ.

    MORE
    GALLERIES

  • 512

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಕಿಂಗ್ಸ್ ಇಲೆವೆನ್ ತಂಡವನ್ನು ಮುನ್ನಡೆಸಲಿರುವ ಕೆಎಲ್ ರಾಹುಲ್, ತಂಡದ ಬ್ಯಾಟ್ಸ್​ಮನ್​ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಒಂದುಕಡೆಯಾದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಲಿರುವ ರಾಬಿನ್ ಉತ್ತಪ್ಪ ಮತ್ತೊಂದು ಕಡೆ.

    MORE
    GALLERIES

  • 612

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಇನ್ನೂ ಆರ್​ಸಿಬಿ ತಂಡದ ಪರ ಕಣಕ್ಕಿಳಿಯಲಿರುವ ದೇವದತ್ ಪಡಿಕಲ್ ಸೇರಿ ಅನೇಕ ಕನ್ನಡಿಗರು ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸಲು ತಯಾರಾಗಿದ್ದಾರೆ.

    MORE
    GALLERIES

  • 712

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ತಂಡವೊಂದರ ನಾಯಕರಾಗಿ ಕಣಕ್ಕಿಳಿಯಲು ಕೆ. ಎಲ್ ರಾಹುಲ್ ಸಜ್ಜಾಗಿದ್ದಾರೆ. ಅವರಿಗೆ ಕರ್ನಾಟಕದವರೇ ಆದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ಸಾಥ್ ನೀಡಲಿದ್ದಾರೆ.

    MORE
    GALLERIES

  • 812

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕರ್ನಾಟಕದ ಒಟ್ಟು 5 ಆಟಗಾರರನ್ನು ಒಳಗೊಂಡಿದೆ. ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಒಟ್ಟು 12 ಕನ್ನಡಿಗರು ಆಡಲಿದ್ದು, ಈ ಪೈಕಿ 5 ಆಟಗಾರರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವುದು ವಿಶೇಷ.

    MORE
    GALLERIES

  • 912

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ರಾಹುಲ್ ಜೊತೆ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆಲ್ರೌಂಡರ್ ಕೆ. ಗೌತಮ್ ಮತ್ತು ಸ್ಪಿನ್ನರ್ ಜೆ. ಸುಚಿತ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಇತರ ಕನ್ನಡಿಗರು.

    MORE
    GALLERIES

  • 1012

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಇನ್ನೂ ಕೆಕೆಆರ್ ತಂಡದಿಂದ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವ ರಾಬಿನ್ ಉತ್ತಪ್ಪ ಕೂಡ ಕನ್ನಡವರಾಗಿದ್ದಾರೆ.

    MORE
    GALLERIES

  • 1112

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್​ ಪ್ರವಾಹ ಹರಿಸಿ ಗಮನ ಸೆಳೆದಿದ್ದ ಯುವ ಎಡಗೈ ಬ್ಯಾಟ್ಸ್​ಮನ್​ ದೇವದತ್ ಪಡಿಕಲ್ ಈ ಬಾರಿ ಆರ್​ಸಿಬಿ ಪರ ಮಿಂಚುವ ಸಿದ್ಧತೆಯಲ್ಲಿದ್ದಾರೆ. ಮತ್ತೋರ್ವ ಕನ್ನಡಿಗ ಪವನ್ ದೇಶಪಾಂಡೆ ಕೂಡ ಈ ಬಾರಿ ಆರ್​​ಸಿಬಿ ಪರ ಆಡಲಿದ್ದಾರೆ.

    MORE
    GALLERIES

  • 1212

    IPL 2020: ರಂಗು ರಂಗಿನ ಐಪಿಎಲ್​ನಲ್ಲಿ ಕನ್ನಡ ಡಿಂಡಿಮ: ಈ ಬಾರಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ ಗೊತ್ತೇ

    ಅಷ್ಟೇ ಅಲ್ಲದೆ ಮನೀಷ್ ಪಾಂಡೆ , ಪ್ರಸಿದ್ಧಕೃಷ್ಣ, ಶ್ರೇಯಸ್ ಗೋಪಾಲ್ , ಕೃಷ್ಣಪ್ಪ ಗೌತಮ್ ಮತ್ತು ಅನಿರುದ್ಧ ಜೋಷಿ ಈ ಬಾರಿ ಐಪಿಎಲ್​ನಲ್ಲಿ ಕಣಕ್ಕಿಳಿಯಲಿರುವ ಇತರ ಕನ್ನಡಿಗರಾಗಿದ್ದಾರೆ.

    MORE
    GALLERIES