RCB Predicted XI vs SRH: ಇಂದಿನ ಪಂದ್ಯಕ್ಕೆ ಆರ್ಸಿಬಿ ಬ್ಯಾಟಿಂಗ್ ಆರ್ಡರ್ನಲ್ಲಿ ಮಹತ್ವದ ಬದಲಾವಣೆ?
ಓಪನರ್ ಆಗಿ ದೇವದತ್ ಜೊತೆ ಸ್ವತಃ ಕೊಹ್ಲಿಯೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಫಿಲಿಪ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊರಲಿದ್ದಾರೆ.
ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಅಗ್ನಿಪರೀಕ್ಷೆ ನಡೆಸಲಿದೆ. (ಫೋಟೋ ಕೃಪೆ: RCB, Twitter)
2/ 13
ಸತತ 4 ಪಂದ್ಯ ಸೋತರೂ ರನ್ರೇಟ್ ಆಧಾರದ ಮೇಲೆ 3 ವರ್ಷಗಳ ಬಳಿಕ ಪ್ಲೇ - ಆಫ್ ತಲುಪಿರುವ ಆರ್ಸಿಬಿ ತಂಡಕ್ಕೆ ಹೈದರಾಬಾದ್ ನಿಜಕ್ಕೂ ಕಠಿಣ ಸವಾಲೊಡ್ಡಲಿದೆ. ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವ ಮೂಲಕವೇ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದವು. ಅದರಲ್ಲಿ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು.
3/ 13
ಆರ್ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ಓಪನರ್ಗಳು ಸಹಾಯ ಮಾಡುತ್ತಿಲ್ಲ. ದೇವದತ್ ಪಡಿಕ್ಕಲ್ ಉತ್ತಮ ಲಯದಲ್ಲಿದ್ದರೆ, ಜೋಶ್ ಫಿಲಿಪ್ ಬ್ಯಾಟ್ ಸದ್ದು ಮಾಡುತ್ತಿಲ್ಲ.
4/ 13
ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುತ್ತಿಲ್ಲ. ಇನ್ನೂ ಎಬಿಡಿ ನಿರ್ಗಮನದ ಬಳಿಕ ತಂಡದಲ್ಲಿ ದೊಡ್ಡ ರನ್ ಕಲೆಹಾಕುವ ಸಾಮರ್ಥ್ಯ ಯಾರಲ್ಲೂ ಇಲ್ಲ.
5/ 13
ಮೊಹಮ್ಮದ್ ಸಿರಾಜ್, ಇಸುರು ಉದಾನ ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾಗುತ್ತಿದ್ದಾರೆ. ನವ್ದೀಪ್ ಸೈನಿ ಕೂಡ ಇಂಜುರಿಯಿಂದ ಇನ್ನೂ ಸರಿಯಾಗಿ ಕಮ್ಬ್ಯಾಕ್ ಮಾಡಿಲ್ಲ.
6/ 13
ಯಜುವೇಂದ್ರ ಚಹಾಲ್ ಹಾಗೂ ವಾಷಿಂಗ್ಟನ್ ಸುಂದರ್ ಮಾತ್ರ ಪಂದ್ಯವನ್ನು ಕಂಟ್ರೋಲ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.
7/ 13
ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿರುವುದರಿಂದ ಕೊಹ್ಲಿ ಮಾಸ್ಟರ್ ಪ್ಲ್ಯಾನ್ ಮಾಡಲಿದ್ದಾರೆ. ತಂಡದ ಬ್ಯಾಟಿಂಗ್ ಆರ್ಡರ್ನಲ್ಲಿ ಬದಲಾವಣೆ ಆಗುವ ಅಂದಾಜಿದೆ.
8/ 13
ಓಪನರ್ ಆಗಿ ದೇವದತ್ ಜೊತೆ ಸ್ವತಃ ಕೊಹ್ಲಿಯೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಫಿಲಿಪ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊರಲಿದ್ದಾರೆ.
9/ 13
ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದ್ದು, ಇಸುರು ಉದಾನ ಅಥವಾ ಕ್ರಿಸ್ ಮೊರೀಸ್ ಇಬ್ಬರ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡಿ ಬ್ಯಾಟಿಂಗ್ ಬಲ ಹೆಚ್ಚಿಸಲು ಮೊಯೀನ್ ಸ್ಥಾನ ಪಡೆಯುವುದು ಬಹುತೇಕ ಖಚಿತ.
10/ 13
ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್(ವಿ.ಕೀ), ಜೋಶ್ ಫಿಲಿಪ್, ಮೊಯೀನ್ ಅಲಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೊರೀಸ್, ಯಜುವೇಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್.
11/ 13
ಇತ್ತ ಹೈದರಾಬಾದ್ಗೆ ಓಪನರ್ಗಳೇ ಇಡೀ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಕಳೆದ ಪಂದ್ಯದಲ್ಲೇ ಸಾಭೀತಾಗಿತ್ತು. ಆರ್ಸಿಬಿ ಗೆಲ್ಲಬೇಕಾದರೆ ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹ ವಿಕೆಟ್ ಬೇಗನೆ ಮುಖ್ಯವಾಗಿ ಕೀಳಬೇಕಿದೆ.
12/ 13
ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ, ಪ್ರಿಯಂ ಗರ್ಗ್ ಹಾಗೂ ಜೇಸನ್ ಹೋಲ್ಡರ್ ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಶಕ್ತಿ ಹೊಂದಿದ್ದಾರೆ.
13/ 13
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ 16 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.