ಐಪಿಎಲ್ ಈ ಬಾರಿ ನಡೆಯುತ್ತೋ? ಅಥವಾ ನಡೆಯಲ್ವೋ? ಎಂಬ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳ ಮನಸ್ಸಲ್ಲಿ ಬೇರೂರಿತ್ತು. ಆದರೆ ಆ ಎಲ್ಲಾ ಪ್ರಶ್ನೆಗೆ ಬಿಸಿಸಿಐ ಉತ್ತರ ನೀಡಿದೆ. ಕೊನೆಯೂ ಐಪಿಎಲ್ ನಡೆಸುತ್ತೇವೆ ಎಂದು ಹೇಳಿದೆ.
2/ 11
ಈ ಸುದ್ದಿ ಹೊರ ಬಿದ್ದಿದ್ದೆ ತಡ ಕ್ರಿಕೆಟ್ ಪ್ರಿಯರಿಗೆ ಸಿಹಿ ಸಿಕ್ಕಿದಂತಾಗಿದೆ. ಅಷ್ಟರ ಮಟ್ಟಿಗೆ ಭಾರತೀಯ ಕ್ರಿಕೆಟ್ ಪ್ರಿಯರ ಮನದಲ್ಲಿ ಐಪಿಎಲ್ ಅಚ್ಚಳಿಯಾಗಿ ಉಳಿದಿದೆ.
3/ 11
ಅಂದಹಾಗೆಯೇ, ಕೊರೋನಾದಿಂದಾಗಿ ಈ ಬಾರಿಯ ಐಪಿಎಲ್ ಪಂದ್ಯಾಟ ಯುಎಇನಲ್ಲಿ ನಡೆಯತ್ತಿದೆ. ಪ್ರತಿವರ್ಷ ಭಾರತದ ನೆಲದಲ್ಲಿ ನಡೆಯುತ್ತಿದ್ದ ಐಪಿಎಲ್ ಕೊರೋನಾ ಕಂಟದಿಂದಾಗಿ ಅರಬ್ ರಾಷ್ಟ್ರದಲ್ಲಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
4/ 11
ಹಾಗಾಗಿ ಸೆಪ್ಟಂಬರ್ 19 ರಿಂದ ಟೂರ್ನಿ ಆರಂಭವಾಗಿ ನವೆಂಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. 51 ದಿನಗಳ ಕಾಲ ನಡೆಯಲಿರುವ ಈ ವೈಭವದ ಪಂದ್ಯವನ್ನು ವೀಕ್ಷಸಲು ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದಾರೆ.
5/ 11
ಐಪಿಎಲ್ ಎಂದರೆ ಒಂದು ಹಬ್ಬವಿದ್ದಂತೆ. ಈ ಹಬ್ಬದಲ್ಲಿ ದೊಡ್ಡ ವ್ಯವಹಾರಗಳು ನಡೆದು ಹೋಗುತ್ತದೆ. ಸಾಕಷ್ಟು ಜನರಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಅನೇಕರಿಗೆ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಐಪಿಎಲ್ ವೇದಿಕೆ ಸಾಕ್ಷಿಯಾಗುತ್ತದೆ.
6/ 11
ಐಪಿಎಲ್ನಲ್ಲಿ ವಾರ್ಷಿಕವಾಗಿ ಅಂದಾಜು 4000 ಕೋಟಿ ರೂಪಾಯಿಯ ವ್ಯವಹಾರ ನಡೆದುಹೋಗುತ್ತದೆ. ಇದರ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಟೋರ್ಟ್ಸ್ ಪಡೆದುಕೊಂಡಿದೆ. ಮಾಹಿತಿಗಳ ಮೇರೆಗೆ ಸ್ಟಾರ್ ಸ್ಟೋಟ್ಸ್ 3,300 ಕೋಟಿ. ರೂಗಳ ನೀಡಿ ಪ್ರಸಾರದ ಹಕ್ಕನ್ನು ತೆಗೆದುಕೊಂಡಿದೆ.
7/ 11
ಇನ್ನು ಪ್ರತಿಷ್ಠಿತ ಸಂಸ್ಥೆ ವಿವೋ ಐಪಿಎಲ್ ಟೈಟಲ್ ಸ್ಪಾನ್ಸರ್ ಅನ್ನು 439 ಕೋಟಿ ರೂ. ನೀಡಿ ಖರೀದಿಸಿದೆ. ಇತರೆ ಸ್ಪಾನ್ಸರ್ಗಳ (250 ರಿಂದ 300 ಕೋಟಿ) ಇದರಲ್ಲಿ ಸೇರಿಕೊಂಡಿದೆ.
8/ 11
ಹಾಗಾಗಿ ಐಪಿಎಲ್ ಟೂರ್ನಿ ನಡೆದಾಗ ಮಾತ್ರ ಎಲ್ಲಾ ಸಂಸ್ಥೆಗಳು ಲಾಭದ ದಾರಿಯಲ್ಲಿ ಸಾಗುತ್ತದೆ. ಇಲ್ಲವಾದರೆ ನಷ್ಟದ ಪ್ರಮಾಣ ಉಂಟಾಗುತ್ತದೆ. ಇನ್ನು ಐಪಿಎಲ್ನಲ್ಲಿ ಬಂದ ಹಣವನ್ನು ಬಿಸಿಸಿಐ ಮತ್ತು ಪ್ರಾಂಚೈಸಿಗಳು 50;50 ಅನುಪಾತದಲ್ಲಿ ಹಣ ಹಂಚಿಕೊಳ್ಳುತ್ತದೆ
9/ 11
ಐಪಿಎಲ್ ರದ್ದಾಗಿದ್ದರೆ ನಷ್ಟವೆಷ್ಟು ಗೊತ್ತಾ?
10/ 11
ಐಪಿಎಲ್ ಪಂದ್ಯವನ್ನು ನಂಬಿಕೊಂಡು ಸಾಕಷ್ಟು ಜಾಹೀರಾತು ಮತ್ತು ಉತ್ಪನ್ನ ಸಂಸ್ಥೆಗಳು ಈ ಸಮಯದಲ್ಲಿ ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತದೆ.
11/ 11
ಆದರೆ ಐಪಿಎಲ್ ನಡೆಯದೇ ಹೋದರೆ ಪ್ರಸಾರದ ಹಕ್ಕನ್ನು ಹೊಂದಿರುವ ಸ್ಟಾರ್ ಸ್ಟೋಟ್ಸ್ ನಷ್ಟವನ್ನು ಹೊಂದುತ್ತದೆ. ವಿವೋ ಹಾಗೂ ಇತರೆ ಬ್ರ್ಯಾಂಡ್ಗಳು ಕೂಡ ನಷ್ಟ ಅನುಭವಿಸುತ್ತದೆ. ಎಲ್ಲಿದಕ್ಕಿಂತ ಮುಖ್ಯವಾಗಿ ಬಿಸಿಸಿಐಗೆ ದೊಡ್ಡ ನಷ್ಟವಾಗಿ ಪರಿಣಮಿಸುತ್ತದೆ.