ಕ್ರಿಕೆಟ್‌ನ ಯಾವುದೇ ಸ್ವರೂಪವಿರಲಿ, ತಂಡದ ಗೆಲುವಿನಲ್ಲಿ ವಿಕೆಟ್‌ಕೀಪರ್‌ನ ಪಾತ್ರ ಬಹಳ ಮುಖ್ಯ. ಬ್ಯಾಟ್ಸ್‌ಮನ್ ಎಷ್ಟು ಏಕಾಗ್ರತೆಯಿಂದ ಇರುತ್ತಾರೋ ಹಾಗೆಯೇ ವಿಕೆಟ್ ಕೀಪರ್ ಯಾವಾಗಲೂ ಜಾಗರೂಕರಾಗಿರಬೇಕು. ಚೆಂಡಿನ ಮೇಲೆ ಸದಾ ಕಣ್ಣಿಟ್ಟು ಸಿಕ್ಕ ಅವಕಾಶವನ್ನು ಕ್ಯಾಚ್ ಮತ್ತು ಸ್ಟಂಪಿಂಗ್ ಯಶಸ್ಸು ಸಾಧಿಸಲು ಸಿದ್ಧರಾಗಿರಬೇಕು. ಹೀಗೆ ಇಡೀ ಪಂದ್ಯದ ಫಲಿತಾಂಶವನ್ನು ಬದಲಿಸುವಲ್ಲಿ ವಿಕೆಟ್ ಕೀಪರ್ ಮುಖ್ಯ ಪಾತ್ರವಹಿಸುತ್ತಾರೆ.
ಹೀಗೆ 13 ಸೀಸನ್ಗಳಲ್ಲಿ ಹಲವು ವಿಕೆಟ್ ಕೀಪರ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಸ್ಥಾನ ಪಡೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಪರ ವಿಕೆಟ್ ಕೀಪಿಂಗ್ ಮಾಡಿರುವ ಉತ್ತಪ್ಪ ವಿಕೆಟ್ ಹಿಂದೆ ಕೂಡ ಯಶಸ್ವು ಸಾಧಿಸಿದ್ದಾರೆ. ಹಾಗಿದ್ರೆ ಐಪಿಎಲ್ ಬೆಸ್ಟ್ ಕೀಪರ್ ಯಾರು ಎಂದು ನೋಡೋಣ
# 2 ದಿನೇಶ್ ಕಾರ್ತಿಕ್: ಕೆಕೆಆರ್ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಭಾನುವಾರ ನಡೆದ ಆರ್ಆರ್ ವಿರುದ್ಧದ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಅವರ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು. ಅಲ್ಲದೆ 110 ಕ್ಯಾಚ್ಗಳೊಂದಿಗೆ ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆ ಬರೆದರು. ಈ ಹಿಂದೆ ಈ ರೆಕಾರ್ಡ್ ಧೋನಿ ಹೆಸರಿನಲ್ಲಿತ್ತು. ಸದ್ಯ 110 ಕ್ಯಾಚ್, 30 ಸ್ಟಂಪಿಂಗ್ ಮೂಲಕ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ 140 ಯಶಸ್ಸು ಗಳಿಸಿದ್ದಾರೆ.
# 1 ಎಂ.ಎಸ್.ಧೋನಿ: 'ಕ್ಯಾಪ್ಟನ್ ಕೂಲ್' ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಈ ಬಾರಿ ಕೂಡ ಉಳಿಸಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಕ್ಯಾಚ್ ದಾಖಲೆಯನ್ನು ಮುರಿದರೂ, ಒಟ್ಟಾರೆ ಯಶಸ್ಸಿನಲ್ಲಿ ಈಗಲೂ ಮುಂದಿದ್ದಾರೆ. ಸಿಎಸ್ಕೆ ಹಾಗೂ ಪುಣೆ ಪರ ಕೀಪಿಂಗ್ ಮಾಡಿರುವ ಧೋನಿ 109 ಕ್ಯಾಚ್ ಹಾಗೂ 39 ಸ್ಟಂಪಿಂಗ್ ಮೂಲಕ 148 ಡಿಸ್ಮಿಸ್ ಮಾಡುವ ಮೂಲಕ ಬೆಸ್ಟ್ ಕೀಪರ್ ಎನಿಸಿಕೊಂಡಿದ್ದಾರೆ.