IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ವೇಳೆ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬಂದಿದ್ದು, ತಕ್ಷಣವೇ ಸರಣಿಯಿಂದ ಹಿಂದೆ ಸರಿದು ಸ್ಟೋಕ್ಸ್ ನ್ಯೂಜಿಲೆಂಡ್​ಗೆ ತೆರಳಿದ್ದಾರೆ.

First published:

  • 110

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ವಾರಗಳು ಮಾತ್ರ ಉಳಿದಿರುವಾಗ ರಾಜಸ್ಥಾನ್ ರಾಯಲ್ಸ್ ಹೊಸ ತಲೆಬಿಸಿ ಶುರುವಾಗಿದೆ. ಏಕೆಂದರೆ ತಂಡದ ಪ್ರಮುಖ ಆಲ್​ರೌಂಡರ್ ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ.

    MORE
    GALLERIES

  • 210

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಹೌದು, ಇಂಗ್ಲೆಂಡ್ ತಂಡದ ಸ್ಪೋಟಕ ಆಟಗಾರ ಬೆನ್​ ಸ್ಟೋಕ್ಸ್ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸುವುದು ಡೌಟ್ ಎನ್ನಲಾಗುತ್ತಿದೆ. ಸ್ಟೋಕ್ಸ್ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದು, ಹೀಗಾಗಿ  ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

    MORE
    GALLERIES

  • 310

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಬೆನ್ ಸ್ಟೋಕ್ಸ್ ಕುಟುಂಬ ಮೂಲತಃ ನ್ಯೂಜಿಲೆಂಡ್​ನವರು. ಅವರ ತಂದೆ ಮೆದುಳಿನ ಕ್ಯಾನ್ಸರ್​ಗೆ ತುತ್ತಾಗಿದ್ದು, ಹೀಗಾಗಿ ನ್ಯೂಜಿಲೆಂಡ್​ನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ಕಿವೀಸ್ ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.

    MORE
    GALLERIES

  • 410

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ವೇಳೆ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬಂದಿದ್ದು, ತಕ್ಷಣವೇ ಸರಣಿಯಿಂದ ಹಿಂದೆ ಸರಿದು ಸ್ಟೋಕ್ಸ್ ನ್ಯೂಜಿಲೆಂಡ್​ಗೆ ತೆರಳಿದ್ದಾರೆ.

    MORE
    GALLERIES

  • 510

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅಲಭ್ಯರಾಗಿರುವುದಾಗಿ ಸ್ಟೋಕ್ಸ್ ತಿಳಿಸಿದ್ದರು. ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವ ತನಕ ಮತ್ತೆ ಮೈದಾನದಲ್ಲಿ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ.

    MORE
    GALLERIES

  • 610

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಈ ಬಗ್ಗೆ ಮಾತನಾಡಿರುವ ರಾಜಸ್ಥಾನ್ ತಂಡದ ಕೋಚ್ ಆಂಡ್ರ್ಯೂ ಮ್ಯಾಕ್‌ಡೊನಾಲ್ಡ್, ಸ್ಟೋಕ್ಸ್ ಅವರ ಕುಟುಂಬದ ಪರಿಸ್ಥಿತಿಯನ್ನು ಅವಲೋಕಿಸಿದ್ರೆ, ಅವರು ಟೂರ್ನಿಯನ್ನು ಭಾಗವಹಿಸಲಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.

    MORE
    GALLERIES

  • 710

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಅವರು ತುಂಬಾ ಕಷ್ಟಕರ ಸನ್ನಿವೇಶದಲ್ಲಿದ್ದಾರೆ. ಹೀಗಾಗಿ ನಾವು ಕೂಡ ಅವರ ಕುಟುಂಬದ ಬಗ್ಗೆ ಯೋಚಿಸಬೇಕಿದೆ. ಅಲ್ಲದೆ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಬೇಕಿದೆ. ಇಂತಹ ಸಮಯದಲ್ಲಿ ಬೆನ್ ಸ್ಟೋಕ್ಸ್ ಐಪಿಎಲ್​ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಲಾಗುವುದಿಲ್ಲ ಎಂದು ಮ್ಯಾಕ್​ಡೊನಾಲ್ಡ್ ಹೇಳಿದ್ದಾರೆ.

    MORE
    GALLERIES

  • 810

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ಮತ್ತೋರ್ವ ಆಟಗಾರ ಸ್ಟೀವ್ ಸ್ಮಿತ್ ಕೂಡ ಗಾಯಗೊಂಡಿದ್ದು, ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ಮೂಲಕ ಮತ್ತೆ ಸ್ಮಿತ್ ಮೈದಾನಕ್ಕಿಳಿಯುವ ವಿಶ್ವಾಸವಿದೆ ಎಂದು ರಾಜಸ್ಥಾನ್ ಕೋಚ್ ತಿಳಿಸಿದ್ದಾರೆ.

    MORE
    GALLERIES

  • 910

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಹೀಗಾಗಿ ಐಪಿಎಲ್​ನಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಭಾಗವಹಿಸುವುದು ಬಹುತೇಕ ಅನುಮಾನ ಎಲ್ಲಾಗುತ್ತಿದೆ. ಇತ್ತ 2018ರಲ್ಲಿ 12.5 ಕೋಟಿ ನೀಡಿದ ಖರೀದಿಸಿದ ರಾಜಸ್ಥಾನ್ ರಾಯಲ್ಸ್​ಗೆ ಸ್ಟೋಕ್ಸ್ ಗೈರಿನ ಚಿಂತೆ ಶುರುವಾಗಿದೆ.

    MORE
    GALLERIES

  • 1010

    IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

    ಒಟ್ಟಿನಲ್ಲಿ  2019ರ ಏಕದಿನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಐಪಿಎಲ್​ನಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚಿದ್ದು, ಹೀಗಾಗಿ ಆರ್​ಆರ್ ತಂಡ ಸಹ ಸೂಕ್ತವಾದ ಬದಲಿ ಆಟಗಾರನನ್ನು ಕಂಡುಹಿಡಿಯಬೇಕಾಗುತ್ತದೆ.

    MORE
    GALLERIES