IPL 2020, SRH vs DC: ಕಮ್ಬ್ಯಾಕ್ ಮಾಡಲು ಡೆಲ್ಲಿ ರೆಡಿ: ತಂಡದಲ್ಲಿ ಒಂದು ಬದಲಾವಣೆ ನಿರೀಕ್ಷೆ
ಡೆಲ್ಲಿ ಪರ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಫಾರ್ಮ್ನಲ್ಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಕೂಡ ಮಂಕಾಗಿದ್ದಾರೆ. ಹೀಗಾಗಿ ರಹಾನೆ ಜಾಗಕ್ಕೆ ಪೃಥ್ವಿ ಶಾ ಮತ್ತೆ ಬರುವ ಅಂದಾಜಿದೆ.
13ನೇ ಆವೃತ್ತಿಯ ಐಪಿಎಲ್ನಲ್ಲಿಂದು ನಡೆಯಲಿರುವ 47ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗಲಿವೆ.
2/ 11
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎಸ್ಆರ್ಹೆಚ್ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇತ್ತ ಡೆಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಿ ಪ್ಲೇ ಆಫ್ ಹಂತವನ್ನು ಖಚಿತಪಡಿಸಲಿದೆ.
3/ 11
ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿ, ನಾಲ್ಕರಲ್ಲಿ ಸೋಲುಂಡಿದೆ. ಸದ್ಯ 2ನೇ ಸ್ಥಾನದಲ್ಲಿದೆ. ಇತ್ತ ಹೈದರಾಬಾದ್ 11 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿ 7 ಪಂದ್ಯಗಳಲ್ಲಿ ಸೋಲು ಕಂಡಿದೆ.
4/ 11
ಅಯ್ಯರ್ ಪಡೆ ಈ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವುದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಇರಾದೆಯಲ್ಲಿದೆ.
5/ 11
ಡೆಲ್ಲಿ ಪರ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಫಾರ್ಮ್ನಲ್ಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಕೂಡ ಮಂಕಾಗಿದ್ದಾರೆ. ಹೀಗಾಗಿ ರಹಾನೆ ಜಾಗಕ್ಕೆ ಪೃಥ್ವಿ ಶಾ ಮತ್ತೆ ಬರುವ ಅಂದಾಜಿದೆ.
6/ 11
ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ ಬಳಿಕ ರಿಷಭ್ ಪಂತ್ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಹೀಗಾಗಿ ಬ್ಯಾಟ್ಸ್ಮನ್ಗಳು ಅಬ್ಬರಿಸಬೇಕಾದ ಅಗತ್ಯವಿದೆ. ಬೌಲಿಂಗ್ ವಿಭಾಗವೂ ಬಲಿಷ್ಠವಾಗಬೇಕಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ.
7/ 11
ಉಳಿದಿರುವ ಮೂರು ಪಂದ್ಯವನ್ನೂ ಗೆದ್ದರು ಹೈದರಾಬಾದ್ ಪ್ಲೇ ಆಫ್ಗೆ ಏರುವುದು ಖಚಿತವಿಲ್ಲ. ಇತರೆ ತಂಡಗಳ ಪ್ರದರ್ಶನದ ಮೇಲೆ ವಾರ್ನರ್ ಪಡೆಯ ಭವಿಷ್ಯ ನಿರ್ಧಾರವಾಗಲಿದೆ.
8/ 11
ಮಧ್ಯಮ ಕ್ರಮಾಂಕವೇ ಎಸ್ಆರ್ಹೆಚ್ಗೆ ಮುಳುವಾಗಿದೆ. ಆರಂಭದಲ್ಲಿ ವಾರ್ನರ್, ಬೈರ್ಸ್ಟೋ, ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಬಿಟ್ಟರೆ ನಂತರದ ಸ್ಥಾನದಲ್ಲಿ ಅಬ್ಬರಿಸುವ ಬ್ಯಾಟ್ಸ್ಮನ್ ಯಾರೂ ಇಲ್ಲ.
9/ 11
ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ಕಮಾಲ್ ಮಾಡುತ್ತಿದ್ದಾರೆ ಬಿಟ್ಟರೆ ಬ್ಯಾಟಿಂಗ್ನಲ್ಲಿ ಲಾಭತಂದಿಲ್ಲ. ಬೌಲಿಂಗ್ನಲ್ಲಿ ಹೈದರಾಬಾದ್ ಅಷ್ಟೊಂದು ಮಾರಕವಾಗಿ ಗೋಚರಿಸುತ್ತಿಲ್ಲ.
10/ 11
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ ಒಟ್ಟು 16 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದ ಇತಿಹಾಸವಿದೆ.