IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

ಇಂದಿನ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದಲ್ಲಿ ಒಂದು ಬದಲಾವಣೆ ಆಗುವ ನಿರೀಕ್ಷೆಯಿದೆ.ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ತೊಟ್ಟಿದ್ದ ಸ್ಟಾರ್ ಸ್ಪಿನ್ನರ್ ಇಮ್ರಾನ್ ತಾಹಿರ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

First published:

  • 112

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಐಪಿಎಲ್​​ನಲ್ಲಿಂದು ನಡೆಯಲಿರುವ 41ನೇ ಪಂದ್ಯದಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಟ ನಡೆಸಲಿವೆ.

    MORE
    GALLERIES

  • 212

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಪ್ಲೇ ಆಫ್ ಕನಸನ್ನು ಅಲ್ಪಸ್ವಲ್ಪ ಜೀವಂತವಾಗಿರಿಸಿರುವ ಚೆನ್ನೈಗೆ ಈ ಪಂದ್ಯ ಮಹತ್ವ ಪಡೆದಿದೆ. ಇತ್ತ ಅಗ್ರಸ್ಥಾನಕ್ಕೇರಲು ಮುಂಬೈ ಮತ್ತೊಂದು ಗೆಲುವು ಎದುರುನೋಡುತ್ತಿದೆ.

    MORE
    GALLERIES

  • 312

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಈವರೆಗೆ ಒಟ್ಟು ಒಂಭತ್ತು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ಆರರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಇತ್ತ ಸಿಎಸ್​ಕೆ ತಂಡ 10 ಪಂದ್ಯಗಳನ್ನು ಆಡಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 7 ಪಂದ್ಯಗಳನ್ನು ಕೈಚೆಲ್ಲಿದೆ.

    MORE
    GALLERIES

  • 412

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಕಳೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಹೀನಾಯವಾಗಿ ಸೋತಿತ್ತು. ಅಲ್ಲದೆ ಧೋನಿ ಪಡೆಗೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಡ್ವೇನ್ ಬ್ರಾವೋ ಇಂಜುರಿಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

    MORE
    GALLERIES

  • 512

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ತಂಡ ಉತ್ತಮ ಆರಂಭ ಪಡೆದುಕೊಳ್ಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುವ ಆಟಗಾರರು ಯಾರೂ ಇಲ್ಲ. ಸ್ವತಃ ನಾಯಕನೇ ಪ್ರತಿ ಪಂದ್ಯದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.

    MORE
    GALLERIES

  • 612

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಇಂದಿನ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದಲ್ಲಿ ಒಂದು ಬದಲಾವಣೆ ಆಗುವ ನಿರೀಕ್ಷೆಯಿದೆ.ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ತೊಟ್ಟಿದ್ದ ಸ್ಟಾರ್ ಸ್ಪಿನ್ನರ್ ಇಮ್ರಾನ್ ತಾಹಿರ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

    MORE
    GALLERIES

  • 712

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಇತ್ತ ಪ್ರಚಂಡ ಫಾರ್ಮ್​ನಲ್ಲಿರುವ ಮುಂಬೈ ಎಲ್ಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಆದರೆ, ಸತತ 5 ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ಸಿಎಸ್‌ಕೆ ಎದುರು ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮುಂಬೈ ಪ್ಲೇ-ಆಫ್ ಹಾದಿಯನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ.

    MORE
    GALLERIES

  • 812

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಬಹುತೇಕ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಡಿ ಕಾಕ್, ರೋಹಿತ್, ಸೂರ್ಯಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಮುಂಬೈನ ಬ್ಯಾಟಿಂಗ್ ಬಲ.

    MORE
    GALLERIES

  • 912

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಆದರೆ, ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು 99 ರನ್ ಸಿಡಿಸಿದ್ದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಬಳಿಕ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರ ಬದಲಿಗೆ ಸೌರಭ್ ತಿವಾರಿ ತಂಡಕ್ಕೆ ವಾಪಸಾಗಬಹುದು.

    MORE
    GALLERIES

  • 1012

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಹಾಗೂ ಚೆನ್ನೈ ಪರಸ್ಪರ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 17 ಹಾಗೂ ಧೋನಿ ಬಳಗ 12ರಲ್ಲಿ ಗೆಲುವು ಸಾಧಿಸಿದೆ.

    MORE
    GALLERIES

  • 1112

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಚೆನ್ನೈ ಸಂಭಾವ್ಯ ತಂಡ: ಫಾಫ್ ಡುಪ್ಲೆಸಿಸ್, ಸ್ಯಾಮ್ ಕುರ್ರನ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ಆರ್.ಜಡೇಜಾ, ಎನ್.ಜಗದೀಶನ್, ದೀಪಕ್ ಚಹರ್, ಪಿಯುಷ್ ಚಾವ್ಲಾ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.

    MORE
    GALLERIES

  • 1212

    IPL 2020, CSK vs MI: ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಚೆನ್ನೈ ಪರ ಕಣಕ್ಕಿಳಿಯುತ್ತಾರ ಈ ಆಟಗಾರ?

    ಮುಂಬೈ ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

    MORE
    GALLERIES