13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿರುವಾಗ ಮತ್ತೆ ಕಂಟಕ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ.
2/ 9
ದುಬೈನಲ್ಲಿ ಬೀಡುಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ದೀಪಕ್ ಚಹಾರ್ ಮತ್ತು ಫ್ರಾಂಚೈಸಿಯ 12 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
3/ 9
ಇದರ ಬೆನ್ನಲ್ಲೆ ಚೆನ್ನೈ ಸ್ಟಾರ್ ಬ್ಯಾಟ್ಸ್ಮನ್ ಸುರೇಶ್ ರೈನಾ ಈ ಬಾರಿಯ ಐಪಿಎಲ್ನಿಂದ ಸಂಪೂರ್ಣ ಹೊರ ನಡೆದಿದ್ದಾರೆ.
4/ 9
ಸುರೇಶ್ ರೈನಾ ವೈಯಕ್ತಿಕ ಕಾರಣಕ್ಕೆ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮೇಲ್ನೋಟಕ್ಕೆ ಸಿಎಸ್ಕೆ ತಂಡದ ಹಲವರಿಗೆ ಕೊರೋನಾ ತಗುಲಿದ ಕಾರಣ ರೈನಾ ಹೊರಗುಳಿದಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
5/ 9
ಸುರೇಶ್ ರೈನಾ ಭಾರತಕ್ಕೆ ವಾಪಸಾಗುತ್ತಿದ್ದಾರೆ ಎಂದು ಚೆನ್ನೈ ತಂಡ ಅಧಿಕೃತ ಪ್ರಕಟಣೆ ತಿಳಿಸಿದೆ. ಕಳೆದ ವಾರ ತಂಡದ ಜತೆಗೆ ಅವರೂ ದುಬೈಗೆ ಪ್ರಯಾಣ ಬೆಳೆಸಿ ಕ್ವಾರಂಟೈನ್ ನಲ್ಲಿದ್ದರು. ಆಗಾಗ ವರ್ಕೌಟ್ ವಿಡಿಯೋ ಪ್ರಕಟಿಸುವ ಮೂಲಕ ಐಪಿಎಲ್ ಗೆ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು.
6/ 9
ಸದ್ಯ ಸಿಎಸ್ಕೆ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ರುತುರಾಜ್ ಗಾಯಕ್ವಾಡ್ಗೆ ಕೊರೋನಾ ಸೋಂಕು ದೃಢ ಪಟ್ಟಿದೆ.
7/ 9
ಹೀಗಾಗಿ ಇವರು ಕೂಡ ಈ ಬಾರಿಯ ಐಪಿಎಲ್ನಿಂದ ಹಿಂದೆ ಸರಿಯುವುದು ಖಚಿತವಾಗಿದೆ. ಇವರ ಬದಲು ಯಾವ ಆಟಗಾರನಿಗೆ ಸಿಎಸ್ಕೆ ಮಣೆ ಹಾಕುತ್ತೆ ಎಂಬುದು ಇನ್ನೂ ತಿಳಿದುಬಂದಿಲ್ಲ.
8/ 9
ಈಗಾಗಲೇ ಚೆನ್ನೈ ತಂಡದ ಕ್ವಾರಂಟೈನ್ ಅವಧಿ ಸೆಪ್ಟೆಂಬರ್ 1ರವರೆಗೆ ವಿಸ್ತರಣೆಯಾಗಿದೆ. ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಟೂರ್ನಿಗೆ ಈ ಬೆಳವಣಿಗೆ ಆತಂಕವನ್ನೂ ಹೆಚ್ಚಿಸಿದೆ.
9/ 9
ದೀಪಕ್ ಚಹಾರ್ಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ನಡೆಯಲಿದ್ದು ವರದಿಯಲ್ಲಿ ನೆಗೆಟಿವ್ ಬಂದರೆ 14 ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ.