ಸೆಪ್ಟೆಂಬರ್ 19 ರಂದು ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿವೆ.
2/ 13
ಇದಾಗಿ ಎರಡು ದಿನಗಳಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
3/ 13
ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಈ ಕ್ರೀಡಾಂಗಣದ ಕುರಿತು ಕೆಲವು ಮಾಹಿತಿ ಇಲ್ಲಿದೆ.
4/ 13
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2014 ರಲ್ಲಿ ಆಯೋಜನೆಯಾಗಿತ್ತು.
5/ 13
ಆಗ ಇಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಕೂಡ ಆಡಿತ್ತು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಕೊಹ್ಲಿ ಪಡೆ 5 ವಿಕೆಟ್ಗಳಿಂದ ಸೋಲು ಕಂಡಿತ್ತು.
6/ 13
ಡೆಲ್ಲಿ ತಂಡ ಕೂಡ ಇದೇ ಕ್ರೀಡಾಂಗಣದಲ್ಲಿ ಎರಡು ಪಂದ್ಯವನ್ನು ಆಡಿದೆ. ಒಂದು ಗೆದ್ದರೆ ಮತ್ತೊಂದು ಪಂದ್ಯದಲ್ಲಿ ಸೋಲುಕಂಡಿದೆ.
7/ 13
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈವರೆಗೆ ಒಟ್ಟು 62 ಅಂತರಾಷ್ಟ್ರೀಯ ಟಿ-20 ಪಂದ್ಯಗಳು ನಡೆದಿವೆ. ಈ ಕ್ರೀಡಾಂಗಣ ಪ್ರಮುಖವಾಗಿ ಸ್ಪಿನ್ನರ್ಗಳಿಗೆ ಹಾಗೂ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಉಪಯುಕ್ತವಾಗಿದೆ.
8/ 13
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಬಾರಿ ಒಟ್ಟು 24 ಐಪಿಎಲ್ ಪಂದ್ಯಗಳು ನಡೆಯಲಿದೆ. ಈ ಪೈಕಿ ನಾಲ್ಕು ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
9/ 13
ಇನ್ನೂ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಹಲವು ಬಾರಿ ಇನ್ನೂರಕ್ಕೂ ಅಧಿಕ ರನ್ ಕಲೆ ಹಾಕಿದ ನಿದರ್ಶನಗಳಿವೆ.
10/ 13
ಸ್ಟೇಡಿಯಂನಲ್ಲಿ ಒಟ್ಟು 25 ಸಾವಿರ ಮಂದಿ ಕೂತ ಪಂದ್ಯ ವೀಕ್ಷಣೆ ಮಾಡಬಹುದು. ಆದರೆ, ಕೊರೋನಾ ಕಾರಣ ಆರಂಭದ ಕೆಲವು ದಿನಗಳು ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
11/ 13
ಈ ಬಾರಿಯ ಐಪಿಎಲ್ನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ರಾಯಲ್ ಚಾಜೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಕೂಡ ಪ್ರಮುಖವಾದೂದು. ಸದ್ಯ ಕೊಹ್ಲಿ ಹುಡುಗರು ಈ ಬಾರಿ ಅಬ್ಬರಿಸಲು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
12/ 13
ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ 10 ದಿನಗಳಲ್ಲಿ ತಲಾ 2 ಪಂದ್ಯಗಳು (ಡಬಲ್ ಹೆಡರ್) ನಡೆಯಲಿವೆ. ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಲೀಗ್ ಪಂದ್ಯಗಳು ನಡೆಯಲಿವೆ.
13/ 13
ಈ ಬಾರಿಯ ಐಪಿಎಲ್ನಲ್ಲಿ ರಾತ್ರಿಯ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಂಜೆ ನಡೆಯಲಿರುವ ಪಂದ್ಯಗಳು 3.30ರಿಂದ ನಡೆಯಲಿವೆ.
First published:
113
IPL 2020: RCB ತಂಡ SRH ವಿರುದ್ಧ ಆಡಲಿರುವ ದುಬೈ ಸ್ಟೇಡಿಯಂ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು