ಈವರೆಗೆ 126 ಐಪಿಎಲ್ ಪಂದ್ಯಗಳಿಂದ ವಾರ್ನರ್ ಕಲೆ ಹಾಕಿರುವುದು ಬರೋಬ್ಬರಿ 4706 ರನ್. ಇದರಲ್ಲಿ ಎಡಗೈ ದಾಂಡಿಗನ ಬ್ಯಾಟ್ನಿಂದ 4 ಶತಕಗಳು ಮತ್ತು 44 ಅರ್ಧಶತಕಗಳು ಸಿಡಿದಿವೆ. ವಾರ್ನರ್ ಸಿಡಿಲಬ್ಬರದ ಬ್ಯಾಟಿಂಗ್ಗೆ ಈ ಅಂಕಿ ಅಂಶಗಳೇ ಸಾಕ್ಷಿ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಸಿಡಿಸುವ ಅಗ್ರ ಆಟಗಾರರ ಪಟ್ಟಿಯಲ್ಲಿ ಆಸೀಸ್ ದಾಂಡಿಗನ ಹೆಸರೂ ಕೂಡ ಮುಂಚೂಣಿಯಲ್ಲಿದೆ.
ಅದಕ್ಕಿಂತಲೂ ಹೆಚ್ಚಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯುತ್ತಮ ನಾಯಕ ಎಂದೆನಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವು ಯಶಸ್ಸಿನ ಪರಾಕಾಷ್ಠೆಯನ್ನು ತಲುಪುವ ವಿಶ್ವಾಸದಲ್ಲಿದ್ದಾರೆ ರೋಹಿತ್. ಹಾಗೆಯೇ ಕಳೆದ ಕೆಲ ತಿಂಗಳಿಂದ ಮೈದಾನದಿಂದ ದೂರ ಉಳಿದಿದ್ದ ರೋಹಿತ್ ಐಪಿಎಲ್ ಮೂಲಕ ಮತ್ತೆ ಬ್ಯಾಟ್ ಬೀಸಲು ಸಜ್ಜಾಗಿ ನಿಂತಿದ್ದಾರೆ. ಈ ಮೂವರು ಅನುಭವಿ ಆಟಗಾರರ ಹೊರತಾಗಿ ಮತ್ಯಾರೂ ಐಪಿಎಲ್-2020ಯಲ್ಲಿ ರನ್ ಮಳೆ ಹರಿಸಲಿದ್ದಾರೆ ಕಾದು ನೋಡಬೇಕಿದೆ.