ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. 51 ದಿನಗಳ ಕಾಲ ಯುಎಇನಲ್ಲಿ ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಹಬ್ಬ ಆಯೋಜನೆಯಾಗಿದೆ.
2/ 13
ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
3/ 13
2008 ರಿಂದ ಆರಂಭವಾದ ಐಪಿಎಲ್ನಲ್ಲಿ ಈವರೆಗೆ ಅನೇಕ ದಾಖಲೆಗಳು ಸೃಷ್ಟಿಯಾಗಿವೆ.
4/ 13
ಐಪಿಎಲ್ ದಾಖಲೆಗಳ ಪೈಕಿ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಸೃಷ್ಟಿಸಿದ ಇತಿಹಾಸ ಈವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
5/ 13
2013ರ ಐಪಿಎಲ್ನಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿದ್ದ ಗೇಲ್ ಕೇವಲ 66 ಎಸೆತಗಳಲ್ಲಿ 13 ಬೌಂಡರಿ, 17 ಸಿಕ್ಸರ್ ಸಿಡಿಸಿ ಅಜೇಯ 175 ರನ್ ಚಚ್ಚಿದರು.
6/ 13
ಅಲ್ಲದೆ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದು ಐಪಿಎಲ್ನಲ್ಲಿ ಈವರೆಗೆ ದಾಖಲಾದ ಅತಿ ವೇಗದ ಶತಕವಾಗಿದೆ.
7/ 13
ಈ ಶತಕದ ದಾಖಲೆಯನ್ನು ಐಪಿಎಲ್ನಲ್ಲಿ ಈವರೆಗೆ ಯಾರೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಹಾಗಾದ್ರೆ ಈ ಬಾರಿ ಈ ದಾಖಲೆ ಪುಡಿಮಾಡಿ ಇತಿಹಾಸ ಸೃಷ್ಟಿಸಬಹುದಾದ ಆಟಗಾರ ಯಾರು ಎಂಬುವುದನ್ನು ನೋಡುವುದಾದರೆ…
8/ 13
ರೋಹಿತ್ ಶರ್ಮಾ: ಟೀಂ ಇಂಡಿಯಾದ ಸಿಕ್ಸರ್ ಸರದಾರ ರೋಹಿತ್ ಶರ್ಮಾ ಈ ಬಾರಿ ಅತಿ ವೇಗವಾಗಿ ಶತಕ ಸಿಡಿಸಿ ಗೇಲ್ ದಾಖಲೆ ಮುರಿಯುತ್ತಾರೆ ಎಂಬವರಲ್ಲಿ ಮೊದಲನೆಯವರು.
9/ 13
ಈಗಾಗಲೇ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಹೀಗಾಗಿ ರೋಹಿತ್ ಈ ಬಾರಿಯ ಐಪಿಎಲ್ನಲ್ಲಿ ಗೇಲ್ ದಾಖಲೆ ಅಳಿಸಿ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
10/ 13
ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ಗೆ 30 ಎಸೆತಗಳ ಒಳಗೆ ಶತಕ ಸಿಡಿಸುವುದು ದೊಡ್ಡ ವಿಚಾರವೇನಲ್ಲ. ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಇವರು ಈ ಹಿಂದೆ 52 ಎಸೆತಗಳಲ್ಲಿ 129 ರನ್ ಚಚ್ಚಿದ್ದರು.
11/ 13
ಜಾನಿ ಬೈರ್ಸ್ಟೋ: ಸದ್ಯ ಟಿ-20 ಕ್ರಿಕೆಟ್ನ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ಇಂಗ್ಲೆಂಡ್ನ ಜಾನಿ ಬೈರ್ಸ್ಟೋ ಕಳೆದ ಬಾರಿ ಸನ್ರೈಸರ್ಸ್ ಪರ ಸ್ಪೋಟಕ ಬ್ಯಾಟ್ಸ್ಮನ್ ಆಗಿದ್ದರು. ಹೀಗಾಗಿಯೆ ಹೈದರಾಬಾದ್ ತಂಡವನ್ನು ಇವರನ್ನು ತನ್ನಲ್ಲೇ ಉಳಿಸಿಕೊಂಡಿದೆ.
12/ 13
ತಾನಾಡಿದ ಮೂರನೇ ಐಪಿಎಲ್ ಪಂದ್ಯದಲ್ಲೇ 56 ಎಸೆತಗಳಲ್ಲಿ 114 ರನ್ ಸಿಡಿಸಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ ಕಳೆದ ಸೀಸನ್ನಲ್ಲಿ ವಾರ್ನರ್ ಜೊತೆಗೂಡಿ ದಾಖಲೆಯ 185 ರನ್ಗಳ ಜೊತೆಯಾಟ ಆಡಿದ್ದರು.
13/ 13
ಆ್ಯಂಡ್ರೊ ರಸೆಲ್: ರಸೆಲ್ ಮೇನಿಯಾ ಈ ಬಾರಿಯ ಐಪಿಎಲ್ನಲ್ಲೂ ಅಭಿಮಾನಿಗಳಿಗೆ ರಂಜಿಸದಿರದು. ಕಳೆದ ಸೀಸನ್ನಲ್ಲಿ ರಸೆಲ್ ಆರ್ಭಟ ತುಸು ಜೋರಾಗಿಯೆಯಿತ್ತು. ಹೀಗಾಗಿ ಈ ಬಾರಿ ಇವರಿಂದ ಮತ್ತಷ್ಟು ನಿರೀಕ್ಷಿಸಲಾಗಿದ್ದು, ಗೇಲ್ ದಾಖಲೆಯ ಮುರಿದರೂ ಅಚ್ಚರಿಯಿಲ್ಲ.