IPL 2020: ಅಫ್ಘಾನ್ ಕ್ರಿಕೆಟಿಗನ ಪರ ಗೌತಮ್ ಗಂಭೀರ್ ಬ್ಯಾಟಿಂಗ್
ನೀವು ಪೊಲಾರ್ಡ್, ಎಬಿ ಡಿವಿಲಿಯರ್ಸ್, ರಶೀದ್ ಖಾನ್ ಮತ್ತು ಡೇವಿಡ್ ವಾರ್ನರ್ ಅವರ ಬಗ್ಗೆ ಮಾತನಾಡುತ್ತೀರಿ. ಆದರೆ ನೀವು ನಬಿಯ ಆಟದ ಬಗ್ಗೆ ಗಮನಿಸಿ, ಅವರು ಪ್ರತಿ ವಿಭಾಗದಲ್ಲೂ ಕೊಡುಗೆ ನೀಡಿರುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತೀಯರಿಗೆ ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರಿಗೂ ಉತ್ತಮ ವೇದಿಕೆ. ಐಪಿಎಲ್ ಅನ್ನೇ ವೇದಿಕೆಯನ್ನಾಗಿಸಿ ಅನೇಕ ಕ್ರಿಕೆಟಿಗರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
2/ 10
ಇನ್ನು ಕೆಲ ಕ್ರಿಕೆಟಿಗರು ಐಪಿಎಲ್ ಮೂಲಕ ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ. ಈ ಪಟ್ಟಿಯಲ್ಲಿರುವ ಆಟಗಾರರಲ್ಲಿ ಅಫ್ಘಾನಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನಬಿ ಕೂಡ ಒಬ್ಬರು.
3/ 10
ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಮೊಹಮ್ಮದ್ ನಬಿ ಕುರಿತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಮನಬಿಚ್ಚಿ ಮಾತನಾಡಿದ್ದಾರೆ.
4/ 10
ಸಂದರ್ಶನವೊಂದರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೊಹಮ್ಮದ್ ನಬಿ ಅವರ ಸಾಧನೆ ಬಗ್ಗೆ ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಗಂಭೀರ್, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚಿದ್ದ ನಬಿ ಅವರ ಹೆಸರು ಎಲ್ಲೂ ಪ್ರಸ್ತಾಪಿಸಲಾಗುತ್ತಿಲ್ಲ.
5/ 10
ವಿದೇಶಿ ಆಟಗಾರರಾದ ಕಿರೋನ್ ಪೊಲಾರ್ಡ್, ಎಬಿ ಡಿವಿಲಿಯರ್ಸ್, ರಶೀದ್ ಖಾನ್ ಮತ್ತು ಡೇವಿಡ್ ವಾರ್ನರ್ ಅವರ ಬಗ್ಗೆ ಚರ್ಚಿಸಿದಷ್ಟು ಮೊಹಮ್ಮದ್ ನಬಿ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಗಂಭೀರ್ ಹೇಳಿದರು.
6/ 10
ನನ್ನ ಪ್ರಕಾರ, ಮೊಹಮ್ಮದ್ ನಬಿ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಅಂಡರ್ರೇಟೆಡ್ ಆಟಗಾರ. ನೀವು ಪೊಲಾರ್ಡ್, ಎಬಿ ಡಿವಿಲಿಯರ್ಸ್, ರಶೀದ್ ಖಾನ್ ಮತ್ತು ಡೇವಿಡ್ ವಾರ್ನರ್ ಅವರ ಬಗ್ಗೆ ಮಾತನಾಡುತ್ತೀರಿ. ಆದರೆ ನೀವು ನಬಿಯ ಆಟದ ಬಗ್ಗೆ ಗಮನಿಸಿ, ಅವರು ಪ್ರತಿ ವಿಭಾಗದಲ್ಲೂ ಕೊಡುಗೆ ನೀಡಿರುತ್ತಾರೆ.
7/ 10
ಉತ್ತಮ ಫೀಲ್ಡರ್, 4 ಓವರ್ ಬೌಲಿಂಗ್ ಮತ್ತು 5 ಮತ್ತು 6 ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಾರೆ. ಪ್ರಭಾವದ ವಿಷಯದಲ್ಲಿ ಮೊಹಮ್ಮದ್ ನಬಿ ಆಂಡ್ರೆ ರಸ್ಸೆಲ್ಗಿಂತ ಹಿಂದುಳಿದಿಲ್ಲ. ಅಫ್ಘಾನಿಸ್ತಾನದಿಂದ ಬಂದಿರುವುದರಿಂದ ಅವರನ್ನು ಕಡಿಮೆ ಗುರುತಿಸಲಾಗಿದೆ ಎಂದು ಗಂಭೀರ್ ಹೇಳಿದರು.
8/ 10
ನಾವು ಆಂಡ್ರೆ ರಸೆಲ್ ಅನ್ನು ಅದ್ಭುತ ಆಲ್ರೌಂಡರ್ ಎಂದು ಹೆಸರಿಸುತ್ತೇವೆ, ಆದರೆ ಮೊಹಮ್ಮದ್ ನಬಿ ಕೂಡ ಅತ್ಯುತ್ತಮ ಆಲ್ರೌಂಡರ್. ಅವರು ಅಫ್ಘಾನಿಸ್ತಾನದಿಂದ ಬಂದಿರುವುದರಿಂದ ಹೆಚ್ಚು ಕ್ರಿಕೆಟ್ ಆಡುವುದಿಲ್ಲ. ಜನರು ಕೂಡ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಗೌತಿ ತಿಳಿಸಿದರು.
9/ 10
ಸನ್ರೈಸರ್ಸ್ ಹೈದರಾಬಾದ್ ತಂಡ ಉತ್ತಮ ವಿದೇಶಿ ಆಟಗಾರರಿಂದ ತುಂಬಿದೆ. ಹೀಗಾಗಿ ಅವರಿಗೆ ಪ್ರತಿ ಪಂದ್ಯದಲ್ಲೂ ಆಡುವ ಅವಕಾಶ ಸಿಗುವುದಿಲ್ಲ. ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋ, ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್ ತಂಡದ ಭಾಗವಾಗಿದ್ದಾರೆ.
10/ 10
ಇದೇ ಕಾರಣದಿಂದ ನಬಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿಲ್ಲ. ಅವರು ಎಸ್ಆರ್ಹೆಚ್ ತಂಡದ ಹೊರತಾಗಿ ಬೇರೊಂದು ಟೀಮ್ನಲ್ಲಿದಿದ್ರೆ ಬಹುಶಃ ಸೀಸನ್ನ ಎಲ್ಲಾ 14 ಪಂದ್ಯಗಳನ್ನು ಆಡುತ್ತಿದ್ದರು. ಇಡೀ ಟೂರ್ನಿಯಲ್ಲಿ ಆಡಲು ಅವರಿಗೆ ಅವಕಾಶ ಸಿಕ್ಕರೆ ಅವರ ಪ್ರಾಮುಖ್ಯತೆ ಏನು ಎಂದು ಅವರಿಗೆ ತಿಳಿಯಲಿದೆ ಎಂದು ಗಂಭೀರ್ ಹೇಳಿದರು.