ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ತಂಡವಾಗಿದ್ದು, ಇದುವರೆಗೆ 4 ಬಾರಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ನಡೆದ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ಗಳ ರೋಚಕ ಜಯ ಸಾಧಿಸಿ ರೋಹಿತ್ ಪಡೆ ವಿಜಯದ ಕೇಕೆ ಹಾಕಿತು. ಈ ಸೋಲಿನ ಸೇಡನ್ನು ಸಿಎಸ್ಕೆ ಮೊದಲ ಪಂದ್ಯದಲ್ಲೇ ತೀರಿಸಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.