50ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಅನಿಲ್ ಕುಂಬ್ಳೆ; ಜಂಬೋ ಫೋಟೋಗ್ರಾಫಿಯ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ!
Anil Kumble: ಕುಂಬ್ಳೆ ಫೋಟೋಗ್ರಾಫಿಯಲ್ಲೂ ಎತ್ತಿದ ಕೈ. ಹೆಚ್ಚಿನ ಸಮಯ ಕ್ಯಾಮೆರಾ ಹೊತ್ತು ವನ್ಯಜೀವಿ ಛಾಯಾಗ್ರಹಣ ಮಾಡುತ್ತಿರುತ್ತಾರೆ. ಇವರ ಫೋಟೋಗ್ರಾಫಿ ಬಗೆಗಿನ ಅಪಾರ ಆಸಕ್ತಿ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್, ಕೋಚ್ ಆಗಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಇಂದು (ಅ. 17) 50ನೇ ಹುಟ್ಟುಹಬ್ಬದ ಸಂಭ್ರಮ. ಅಕ್ಟೋಬರ್ 17, 1970 ರಂದು ಜನಿಸಿದ ಕುಂಬ್ಳೆ ಅವರನ್ನು ಎಲ್ಲರು ಪ್ರೀತಿಯಿಂದ ಜಂಬೋ ಎಂದು ಕರೆಯುತ್ತಾರೆ.
2/ 14
ಎಪ್ರಿಲ್ 25, 1990 ರಂದು ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಕುಂಬ್ಳೆ ಸುಮಾರು 18 ವರ್ಷಗಳ ಕಾಲ ಟೀಂ ಇಂಡಿಯಾಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
3/ 14
ಕುಂಬ್ಳೆ ಫೆ. 7, 1999 ರಂದು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 26.3 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅಲ್ಲದೆ ಭಾರತ 212 ರನ್ಗಳ ಬೃಹತ್ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
4/ 14
ಕುಂಬ್ಳೆ ಫೋಟೋಗ್ರಾಫಿಯಲ್ಲೂ ಎತ್ತಿದ ಕೈ. ಹೆಚ್ಚಿನ ಸಮಯ ಕ್ಯಾಮೆರಾ ಹೊತ್ತು ವನ್ಯಜೀವಿ ಛಾಯಾಗ್ರಹಣ ಮಾಡುತ್ತಿರುತ್ತಾರೆ. ಇವರ ಫೋಟೋಗ್ರಾಫಿ ಬಗೆಗಿನ ಅಪಾರ ಆಸಕ್ತಿ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
5/ 14
ಅನಿಲ್ ಕುಂಬ್ಳೆ ಅವರ ಫೋಟೋಗ್ರಾಫಿಯ ಕೆಲವು ಅದ್ಭುತ ಚಿತ್ರಗಳು ಇಲ್ಲಿವೆ… (ಫೋಟೋ ಕೃಪೆ: Anil Kumble FaceBook Page)