IPL 2020: ಕ್ವಾರಂಟೈನ್ ಮುಗಿಸಿದ ಆರ್ಸಿಬಿ: ಇಂದಿನಿಂದ ಅಭ್ಯಾಸಕ್ಕಿಳಿಯಲಿದೆ ಕೊಹ್ಲಿ ಪಡೆ
RCB 2020: ಇಂದಿನಿಂದ ಮೂರು ವಾರಗಳ ಕಾಲ RCB ತಂಡದ ತರಬೇತಿ ಶಿಬಿರ ನಡೆಯಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಬಯೋ ಸೆಕ್ಯೂರ್ ವಾತಾವರಣದ ಅಡಿಯಲ್ಲಿ ಆಟಗಾರರು ಕಠಿಣ ಸಮರಾಭ್ಯಾಸ ನಡೆಸಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗಾಗಿ ಯುಎಇಗೆ ತಲುಪಿ ಆರು ದಿನಗಳು ಕಳೆದಿದ್ದು, ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದೆ.
2/ 9
ಹೀಗಾಗಿ ಇಂದಿನಿಂದ ಮೂರು ವಾರಗಳ ಕಾಲ ತಂಡದ ತರಬೇತಿ ಶಿಬಿರ ನಡೆಯಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಬಯೋ ಸೆಕ್ಯೂರ್ ವಾತಾವರಣದ ಅಡಿಯಲ್ಲಿ ಆಟಗಾರರು ಕಠಿಣ ಸಮರಾಭ್ಯಾಸ ನಡೆಸಲಿದ್ದಾರೆ.
3/ 9
ಆಟಗಾರರು ಕಳೆದ ಕೆಲವು ತಿಂಗಳುಗಳನ್ನು ವಿವಿಧ ಪರಿಸರದಲ್ಲಿ ಕಳೆದಿದ್ದಾರೆ ಮತ್ತು ಫಿಟ್ನೆಸ್ ಹಾಗೂ ತರಬೇತಿಯ ವಿವಿಧ ಹಂತಗಳಲ್ಲಿದ್ದಾರೆ. ಆದ್ದರಿಂದ ಮುಂಬರುವ ಟೂರ್ನಿಗೆ ಸಜ್ಜಾಗಲು ಈ ಏಕೈಕ ತರಬೇತಿ ವಿಧಾನ ಅತ್ಯುತ್ತಮ ಮಾರ್ಗ ಎಂದು ಆರ್ಸಿಬಿ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೇಸನ್ ಹೇಳಿದ್ದಾರೆ.
4/ 9
13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ 3 ವಾರಗಳ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಗುರುವಾರ(ಆಗಸ್ಟ್ 27)ದಿಂದ ಬೆಂಗಳೂರು ತಂಡದ ಅಭ್ಯಾಸ ಶುರುವಾಗಲಿದೆ.
5/ 9
ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಶಿಬಿರ ನಡೆಯಲಿದ್ದು, ಆಟಗಾರರು ಯುಎಇಯ ಬಿಸಿಲಿನ ವಾತಾವರಣದಲ್ಲಿ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಲಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಾತ್ಮಕವಾದ ತರಬೇತಿ ಇದಾಗಿರಲಿದೆ.
6/ 9
ಟೂರ್ನಿಗೆ ಮುನ್ನ ಅಭ್ಯಾಸ ಪಂದ್ಯಗಳನ್ನೂ ಆಡಲಾಗುವುದು ಎಂದು ತಂಡದ ಮುಖ್ಯ ಕೋಚ್ ಸೈಮನ್ ಕಾಟಿಚ್ ತಿಳಿಸಿದ್ದಾರೆ. ಈ ಅವಧಿಯಲ್ಲಿ ತಮ್ಮ ಸಾಮರ್ಥ್ಯ ಮತ್ತು ಫಿಟ್ನೆಸ್ ಕಡೆಗೆ ಕೆಲಸ ಮಾಡುವ ಮೂಲಕ ಯಾವುದೇ ರೀತಿಯ ಗಾಯದ ಸಮಸ್ಯೆಗಳು ಎದುರಾಗದಂತೆ ಆಟಗಾರರು ಎಚ್ಚರ ವಹಿಸಲಿದ್ದಾರೆ ಎಂದಿದ್ದಾರೆ.
7/ 9
ಇನ್ನೂ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಕ್ರಿಕೆಟಿಗರು 6 ದಿನಗಳ ಕ್ವಾರಂಟೈನ್ ಮುಗಿಸಿ ಈಗಾಗಲೇ ಮೊದಲ ಸುತ್ತಿನ ಅಭ್ಯಾಸ ನಡೆಸಿದರು.
8/ 9
ಇತ್ತಂಡಗಳ ಆಟಗಾರರು ಬುಧವಾರ ಸಂಜೆ ಐಸಿಸಿ ಗ್ರೌಂಡ್ನಲ್ಲಿ ದೈಹಿಕ ಕಸರತ್ತಿಗೆ ಸಂಬಂಧಿಸಿದ ವ್ಯಾಯಾಮ ನಡೆಸಿದರು ಎಂದು ಮೂಲಗಳು ತಿಳಿಸಿವೆ.
9/ 9
ಕ್ವಾರಂಟೈನ್ ಅವಧಿಯಲ್ಲಿ ಕ್ರಿಕೆಟಿಗರಿಗೆ, ತಂಡದ ಸಹಾಯಕ ಸಿಬಂದಿ ಮತ್ತು ಅಧಿಕಾರಿಗಳಿಗೆ 3 ಸುತ್ತಿನ ಕೋವಿಡ್-19 ಟೆಸ್ಟ್ ನಡೆಸಲಾಗಿತ್ತು. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಈ 6 ದಿನಗಳ ಕಾಲ ಯಾವ ಕ್ರಿಕೆಟಿಗರೂ ತಮ್ಮ ಕೊಠಡಿಯಿಂದ ಹೊರಗೆ ಕಾಲಿಟ್ಟಿರಲಿಲ್ಲ.