ಐಪಿಎಲ್ 2021ಕ್ಕೆ ಬಿಸಿಸಿಐ ಸಿದ್ಧತೆ ಶುರು ಮಾಡಿದೆ. 14ನೇ ಆವೃತ್ತಿಯ ಐಪಿಎಲ್ ಬಗ್ಗೆ ಕೆಲವು ಮಾಹಿತಿಗಳು ಈಗಾಗಲೇ ಹೊರಬಿದ್ದಿವೆ.
2/ 9
ಐಪಿಎಲ್ 2020 ಆರಂಭವಾಗುವ ಹೊತ್ತಲ್ಲಿ 14ನೇ ಅವೃತ್ತಿಯ ಹರಾಜು ಪ್ರಕ್ರಿಯಡೆ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಯಾಕೆಂದರೆ ಐಪಿಎಲ್ 2020 ಮುಗಿಯುವುದೇ ನ. 10ಕ್ಕೆ ಅದಾದ ಒಂದು ತಿಂಗಳಲ್ಲಿ ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಸುವುದು ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ ಐಪಿಎಲ್ ನಡೆದರೂ ಬಾರತದಲ್ಲಿ ಆಯೋಜನೆ ಅನುಮಾನ ಎನ್ನಲಾಗಿತ್ತು.
3/ 9
ಆದರೆ, ಸದ್ಯದ ಮಾಹಿತಿ ಪ್ರಕಾರ ಭಾರತದಲ್ಲೇ ಐಪಿಎಲ್ 2021 ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆಯಂತೆ.
4/ 9
ಈ ಮೊದಲು ಮಾಡಿದಂತೆ ನಾಯಕ ಹಾಗೂ ಮತ್ತಿಬ್ಬರು ಆಟಗಾರರನ್ನು ಬಿಟ್ಟು ಉಳಿದವರನ್ನು ಕೈಬಿಡುವಂತೆ ಬಿಸಿಸಿಐ ಸೂಚನೆ ನೀಡಬಹುದು. ನಂತರ ಹರಾಜಿನ ಮೂಲಕ ಆಟಗಾರರನ್ನು ಕೊಂಡುಕೊಳ್ಳುವಂತೆ ಹೇಳಬಹುದು.
5/ 9
ಹೀಗಾದಾಗ, ತಂಡ ಬೇರೆ ಬೇರೆ ಆಗಿ ಬಿಡುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ಈ ಆಟಗಾರನನ್ನು ಖರೀದಿಸುವದೇ ನನ್ನ ಗುರಿ ಎಂದಿದ್ದಾರೆ ಸನ್ ರೈಸರ್ಸ್ ಹೈದರಬಾದ್ ನಾಯಕ ಡೇವಿಡ್ ವಾರ್ನರ್.
6/ 9
ಹಾಗಾದ್ರೆ ಯಾರವರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
7/ 9
ಟ್ವಿಟ್ಟರ್ನಲ್ಲಿ ಅಭಿಮಾನಿಯೋರ್ವ ಟ್ವೀಟ್ ಮಾಡುವ ಮೂಲಕ ವಾರ್ನರ್ಗೆ ಸಲಹೆಯೊಂದನ್ನು ನೀಡಿದ್ದ. ಐಪಿಎಲ್ ಹರಾಜಿನಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಮತ್ತೆ ಪಡೆದುಕೊಳ್ಳಿ. ನಿಮ್ಮ ನಂತರ ಎಸ್ಆರ್ಎಚ್ ತಂಡವನ್ನು ಮುನ್ನಡೆಸಬೇಕಾಗಿರುವುದು ಅವರೇ ಎಂದಿದ್ದಾನೆ ಅಭಿಮಾನಿ.
8/ 9
ಅದು ನಿಜ ಕೂಡ ಹೌದು. ಈ ಬಾರಿ ಸನ್ರೈಸರ್ಸ್ ಪರ ಆಡಿದ್ದ ಕೇನ್ ವಿಲಿಯಮ್ಸನ್ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.
9/ 9
ಅಭಿಮಾನಿಯ ಸಲಹೆಗೆ ಉತ್ತರಿಸಿರುವ ಡೇವಿಡ್ ವಾರ್ನರ್, ಚಿಂತಿಸಬೇಡಿ. ನನಗೆ ಅವರು ಬೇಕು. ಅವರನ್ನು ಮತ್ತೆ ತಂಡಕ್ಕೆ ಕರೆದುಕೊಳ್ಳುತ್ತೇವೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.