ಹೌದು, ರಾಜಸ್ಥಾನ್ ರಾಯಲ್ಸ್ ವಿರುದ್ದ ಪಂದ್ಯದ 8ನೇ ಓವರ್ನಲ್ಲಿ ಕ್ರಿಸ್ ಗೇಲ್ ಡೀಪ್ ಲೆಗ್‌ಸ್ಕ್ವೇರ್‌ನತ್ತ ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಸಿಕ್ಸ್ನೊಂದಿಗೆ ಐಪಿಎಲ್ ಇತಿಹಾಸದಲ್ಲಿ 350 ಸಿಕ್ಸ್ ಬಾರಿಸಿದ ಮೊದಲ ಬ್ಯಾಟ್ಸ್ಮನ್, ಹಾಗೂ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಗೇಲ್ ತಮ್ಮದಾಗಿಸಿಕೊಂಡರು. ಹಾಗೆಯೇ ಈ ಎರಡು ಸಿಕ್ಸ್ನೊಂದಿಗೆ ಟಿ20 ಕ್ರಿಕೆಟ್ನ ಸಿಕ್ಸ್ಗಳ ಸಂಖ್ಯೆಯನ್ನು 1009ಕ್ಕೇರಿಸಿದ್ದಾರೆ ಯುನಿವರ್ಸ್ ಬಾಸ್.