IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

ಸ್ಟೋಕ್ಸ್ ಅವರ ಸ್ಥಾನವನ್ನು ತುಂಬಬಲ್ಲ ಪರಿಪೂರ್ಣ ಆಲ್​ರೌಂಡರ್ ಕೊರತೆ ಆರ್​ಆರ್​ ತಂಡವನ್ನು ಕಾಡಲಿದೆ. ಇದಾಗ್ಯೂ ಮುಂದಿನ ಪಂದ್ಯದಿಂದ ಸ್ಟೋಕ್ಸ್​​ ಸ್ಥಾನದಲ್ಲಿ ಡೇವಿಡ್ ಮಿಲ್ಲರ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

First published:

  • 16

    IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

    ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 14ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್​ರೌಂಡರ್ ಹೊರಗುಳಿದಿದ್ದಾರೆ. ಟೂರ್ನಿ ಆರಂಭಕಕ್ಕೂ ಮುನ್ನ ಗಾಯಗೊಂಡಿದ್ದ ಆರ್​ಆರ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ತಮ್ಮ ಅಲಭ್ಯತೆಯನ್ನು ತಿಳಿಸಿದ್ದರು.

    MORE
    GALLERIES

  • 26

    IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

    ಇದೀಗ ರಾಯಲ್ಸ್​ನ ಪ್ರಮುಖ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಕೂಡ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಂಜಾಬ್ ವಿರುದ್ದದ ಪಂದ್ಯದ ಫೀಲ್ಡಿಂಗ್ ವೇಳೆ ಸ್ಟೋಕ್ಸ್​ ಗಾಯಗೊಂಡಿದ್ದರು.

    MORE
    GALLERIES

  • 36

    IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

    ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಹಿಡಿಯುವ ಪ್ರಯತ್ನದ ವೇಳೆ ಸ್ಟೋಕ್ಸ್​ ಅವರ ಎಡಗೈ ತೋರು ಬೆರಳಿಗೆ ಗಾಯವಾಗಿತ್ತು. ವೈದ್ಯಕೀಯ ಪರಿಶೀಲನೆ ವೇಳೆ ಸ್ಟೋಕ್ಸ್ ಅವರ ಬೆರಳು ಮುರಿತಗೊಳಗಾಗಿರುವುದು ಕಂಡು ಬಂದಿದ್ದು, ಹೀಗಾಗಿ ಸಾಕಷ್ಟು ದಿನಗಳ ಕಾಲ ಆಡದಂತೆ ಸೂಚಿಸಲಾಗಿದೆ.

    MORE
    GALLERIES

  • 46

    IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

    ಅದರಂತೆ ಬೆನ್​ ಸ್ಟೋಕ್ಸ್ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಇದಾಗ್ಯೂ ಬೆನ್​ ಸ್ಟೋಕ್ಸ್​ ಅವರನ್ನು ತಂಡದ ಜೊತೆಯಲ್ಲಿಯೇ ಇರುವಂತೆ ರಾಜಸ್ಥಾನ್ ಫ್ರಾಂಚೈಸಿ ಮನವಿ ಮಾಡಿದೆ.

    MORE
    GALLERIES

  • 56

    IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

    ತಂಡದ ಜೊತೆಯಿದ್ದು, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವಂತೆ ಸ್ಟೋಕ್ಸ್ ಅವರಲ್ಲಿ ಕೇಳಿಕೊಳ್ಳಲಾಗಿದೆ. ಅದರಂತೆ ಆರ್​ಆರ್​ ತಂಡದ ಜೊತೆಯೇ ಸ್ಟೋಕ್ಸ್ ಇರಲಿದ್ದು, ಯುವ ಆಟಗಾರರನ್ನು ಸಜ್ಜುಗೊಳಿಸಲಿದ್ದಾರೆ.

    MORE
    GALLERIES

  • 66

    IPL 2021: ರಾಜಸ್ಥಾನ್ ರಾಯಲ್ಸ್​ಗೆ​ ಮತ್ತೆ ಆಘಾತ: ತಂಡದ ಸ್ಟಾರ್ ಆಲ್​ರೌಂಡರ್​ ಔಟ್..!

    ಇತ್ತ ಜೋಫ್ರಾ ಆರ್ಚರ್, ಸ್ಟೋಕ್ಸ್ ಅಲಭ್ಯತೆಯು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ರಾಜಸ್ಥಾನ್ ಪರ ಈ ಇಬ್ಬರು ಬೌಲಿಂಗ್​ವನ್ನು ಮುನ್ನಡೆಸುತ್ತಿದ್ದರು. ಇದೀಗ ಸ್ಟೋಕ್ಸ್ ಅವರ ಸ್ಥಾನವನ್ನು ತುಂಬಬಲ್ಲ ಪರಿಪೂರ್ಣ ಆಲ್​ರೌಂಡರ್ ಕೊರತೆ ಆರ್​ಆರ್​ ತಂಡವನ್ನು ಕಾಡಲಿದೆ. ಇದಾಗ್ಯೂ ಮುಂದಿನ ಪಂದ್ಯದಿಂದ ಸ್ಟೋಕ್ಸ್​​ ಸ್ಥಾನದಲ್ಲಿ ಡೇವಿಡ್ ಮಿಲ್ಲರ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

    MORE
    GALLERIES