IPL 2020: CSK ಗೆ ಸೆಕೆಂಡ್ ಶಾಕ್, ತಂಡದಿಂದ ಹರ್ಭಜನ್ ಸಿಂಗ್ ಔಟ್..!
ಹರ್ಭಜನ್ ಸಿಂಗ್ ಗುರುವಾರ ಸಿಎಸ್ಕೆ ತಂಡವನ್ನು ಕೂಡಿಕೊಳ್ಳಬೇಕಿತ್ತು. ಆದರೆ ಭಜ್ಜಿ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಅಲ್ಲದೆ ಐಪಿಎಲ್ 2020 ಯಿಂದ ಸಂಪೂರ್ಣ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
IPL ಶುರುವಾಗಲು ದಿನಗಳು ಮಾತ್ರ ಉಳಿದಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮತ್ತೋರ್ವ ಆಟಗಾರ ಹೊರಗುಳಿದಿದ್ದಾರೆ. ಈಗಾಗಲೇ ವೈಯುಕ್ತಿಕ ಕಾರಣಗಳಿಂದ ಸುರೇಶ್ ರೈನಾ ಭಾರತಕ್ಕೆ ಮರಳಿದ್ದಾರೆ.
2/ 6
ಇದರ ಬೆನ್ನಲ್ಲೇ ಇದೀಗ ಟೂರ್ನಿಯಿಂದ ಹಿಂದೆ ಸರಿಯಲು ಹರ್ಭಜನ್ ಸಿಂಗ್ ನಿರ್ಧರಿಸಿದ್ದಾರೆ. ಈ ಬಗ್ಗೆ ಸಿಎಸ್ಕೆ ಆಡಳಿತ ಮಂಡಳಿಗೆ ಭಜ್ಜಿ ಶುಕ್ರವಾರ ತಿಳಿಸಿದ್ದು, ಬದಲಿ ಆಟಗಾರನ ಆಯ್ಕೆಗಾಗಿ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
3/ 6
ಆಗಸ್ಟ್ 21 ರಂದು ಸಿಎಸ್ಕೆ ತಂಡವು ದುಬೈಗೆ ಬಂದಿಳಿದಿತ್ತು. ಆದರೆ ತಾಯಿಯ ಅನಾರೋಗ್ಯ ಕಾರಣ ಹರ್ಭಜನ್ ಸಿಂಗ್ ತಂಡದ ಜೊತೆ ಪ್ರಯಾಣ ಬೆಳೆಸಿರಲಿಲ್ಲ.
4/ 6
ಅದರಂತೆ ಗುರುವಾರ ಸಿಎಸ್ಕೆ ತಂಡವನ್ನು ಕೂಡಿಕೊಳ್ಳಬೇಕಿತ್ತು. ಆದರೆ ಭಜ್ಜಿ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಅಲ್ಲದೆ ಐಪಿಎಲ್ 2020 ಯಿಂದ ಸಂಪೂರ್ಣ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
5/ 6
ಸದ್ಯ ಧೋನಿ ಪಡೆಯ ಇಬ್ಬರು ಸ್ಟಾರ್ ಆಟಗಾರರು ಟೂರ್ನಿಯಿಂದ ಹೊರಗುಳಿದಿರುವುದು ಸಿಎಸ್ಕೆ ಫ್ರಾಂಚೈಸಿಗೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಇವರ ಸ್ಥಾನದಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಕುತೂಹಲ ಸಿಎಸ್ಕೆ ಅಭಿಮಾನಿಗಳಲ್ಲಿ ಮೂಡಿದೆ.
6/ 6
ಐಪಿಎಲ್ನಲ್ಲಿ 160 ಪಂದ್ಯಗಳನ್ನಾಡಿರುವ ಹರ್ಭಜನ್ ಸಿಂಗ್ 150 ವಿಕೆಟ್ಗಳನ್ನು ಪಡೆದಿದ್ದಾರೆ.