IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆಗಿ ನಿರ್ಗಮಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯನ್ನು ತೆಗೆದುಕೊಂಡರೆ ಐವರು ಭಾರತೀಯ ಕ್ರಿಕೆಟಿಗರ ಹೆಸರುಗಳು ಮುಂಚೂಣಿಯಲ್ಲಿವೆ. ಅವರು ಯಾರೆಂದರೆ…

First published:

 • 18

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  ಇಂಡಿಯನ್ ಪ್ರೀಮಿಯರ್ ಲೀಗ್​ನ ಕಳೆದ 12 ಸೀಸನ್​ಗಳಲ್ಲಿ ಹಲವು ರೀತಿಯ ದಾಖಲೆಗಳು ನಿರ್ಮಾಣವಾಗಿದೆ. ಅದರಲ್ಲಿ ಕೆಲವು ಖ್ಯಾತ ದಾಖಲೆಯಾಗಿ ಉಳಿದರೆ, ಮತ್ತೆ ಕೆಲವು ಹೀನಾಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

  MORE
  GALLERIES

 • 28

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  ಸಾಮಾನ್ಯವಾಗಿ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳ ದಾಖಲೆಗಳನ್ನು ಗಮನಿಸಿದಾಗ ಸಿಕ್ಸರ್, ಬೌಂಡರಿ, ಸೆಂಚುರಿ, ಹಾಫ್ ಸೆಂಚುರಿಗಳು ಕಾಣ ಸಿಗುತ್ತವೆ. ಆದರೆ ಬ್ಯಾಟ್ಸ್​ಮನ್​ಗಳು ಕೆಲವೊಂದು ಬಾರಿ ಮಾಡುವ ಸಣ್ಣ ತಪ್ಪುಗಳು ಕೂಡ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡುತ್ತದೆ ಎಂಬುದಕ್ಕೆ ಇದುವೇ ನಿದರ್ಶನ.

  MORE
  GALLERIES

 • 38

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  ಹೌದು, ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆಗಿ ನಿರ್ಗಮಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯನ್ನು ತೆಗೆದುಕೊಂಡರೆ ಐವರು ಭಾರತೀಯ ಕ್ರಿಕೆಟಿಗರ ಹೆಸರುಗಳು ಮುಂಚೂಣಿಯಲ್ಲಿವೆ. ಅವರುಗಳು ಯಾರೆಂದರೆ…

  MORE
  GALLERIES

 • 48

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  5- ಮುರಳಿ ವಿಜಯ್: ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮುರುಳಿ ವಿಜಯ್ ಐಪಿಎಲ್‌ನಲ್ಲಿ ಈವರೆಗೆ ಒಟ್ಟು 103 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 12 ಬಾರಿ ರನೌಟ್ ಆಗುವ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.

  MORE
  GALLERIES

 • 58

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  4- ಅಂಬಾಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ರಾಯುಡು ಇಲ್ಲಿಯವರೆಗೆ 147 ಪಂದ್ಯಗಳಲ್ಲಿ ಐಪಿಎಲ್​ನಲ್ಲಿ 13 ಬಾರಿ ರನೌಟ್ ಆಗಿದ್ದಾರೆ.

  MORE
  GALLERIES

 • 68

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  3- ಸುರೇಶ್ ರೈನಾ: ಸಿಎಸ್​ಕೆ ತಂಡದ ಸ್ಟಾರ್ ಆಟಗಾರ ರೈನಾ ಐಪಿಎಲ್​ನಲ್ಲಿ 193 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 13 ಬಾರಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದಾರೆ.

  MORE
  GALLERIES

 • 78

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  2- ಶಿಖರ್ ಧವನ್: ಐಪಿಎಲ್‌ನಲ್ಲಿ ಹೆಚ್ಚು ಬೌಂಡರಿ ಗಳಿಸಿದ ದಾಖಲೆ ಹೊಂದಿರುವ ಆಟಗಾರ ಎಂಬ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಇದರ ಜೊತೆ 159 ಪಂದ್ಯಗಳಲ್ಲಿ 14 ಬಾರಿ ರನೌಟ್ ಆಗಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.

  MORE
  GALLERIES

 • 88

  IPLನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಬ್ಯಾಟ್ಸ್​ಮನ್ ಯಾರು ಗೊತ್ತಾ?

  1- ಗೌತಮ್ ಗಂಭೀರ್: ಐಪಿಎಲ್ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಗೌತಮ್ ಗಂಭೀರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 154 ಪಂದ್ಯಗಳನ್ನು ಆಡಿರುವ ಕೆಕೆಆರ್ ತಂಡದ ಮಾಜಿ ನಾಯಕ 16 ಬಾರಿ ರನೌಟ್ ಆಗಿ ವಿಕೆಟ್ ಒಪ್ಪಿಸಿದ್ದರು.

  MORE
  GALLERIES