ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರು 2010 ರ ಐಪಿಎಲ್‌ನಲ್ಲಿ ಹೆಚ್ಚು ರನ್ ಗಳಿಸಿದ್ದರು. 15 ಪಂದ್ಯಗಳಿಂದ ಸಚಿನ್ ಸಿಡಿಸಿದ್ದು ಬರೋಬ್ಬರಿ 618 ರನ್ಗಳು. ಇದರಲ್ಲಿ ಐದು ಅರ್ಧಶತಕಗಳು ಮೂಡಿಬಂದಿದ್ದವು. ಸಚಿನ್ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲುಂಡಿತು. ಈ ಸೋಲಿನ ಹೊರತಾಗಿಯೂ ಸಚಿನ್ ಆರೆಂಜ್ ಕ್ಯಾಪ್ ಪ್ರಶಸ್ತಿಗೆ ಭಾಜನರಾಗಿದ್ದರು.
2018 ರಲ್ಲಿ ಡೇವಿಡ್ ವಾರ್ನರ್ ಬದಲಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಿಕೊಂಡ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮತ್ತು ಕಪ್ತಾನಗಿರಿ ಎರಡರಲ್ಲೂ ಉತ್ತಮ ಸಾಧನೆ ತೋರಿದರು. 17 ಪಂದ್ಯಗಳಲ್ಲಿ 8 ಅರ್ಧಶತಕಗಳೊಂದಿಗೆ ವಿಲಿಯಮ್ಸನ್ ಸಿಡಿಸಿದ್ದು 735 ರನ್ಗಳು. ಅದ್ಭುತ ಇನಿಂಗ್ಸ್ ಆಡಿದ ವಿಲಿಯಮ್ಸನ್ ಆರೆಂಜ್ ಕ್ಯಾಪ್ ತಮ್ಮದಾಗಿಸಿದ್ರೂ, ಫೈನಲ್ನಲ್ಲಿ ಚೆನ್ನೈ ವಿರುದ್ಧ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದರು.