2010 ರ ವೇಳೆಗೆ ಅವರು ದೆಹಲಿ ತಂಡದ ಭಾಗವಾದರು. ಇದರ ನಂತರ, 2011 ರಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿದಿದ್ದರು. ಮರು ವರ್ಷವೇ ಅಂದರೆ 2012 ಮತ್ತು 2013 ಐಪಿಎಲ್ ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2014 ರಲ್ಲಿ ಮತ್ತೆ ದೆಹಲಿ ಡೇರ್ಡೆವಿಲ್ಸ್ ತಂಡಕ್ಕೆ ಮರಳಿದ ಕಾರ್ತಿಕ್ 2015 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದರು. ಗುಜರಾತ್ ಲಯನ್ಸ್ ಪರ 2016 ಮತ್ತು 2017 ಸೀಸನ್ಗಳಲ್ಲಿ ಗುಜರಾತ್ ಲಯನ್ಸ್ ತಂಡ ಆಟಗಾರರಾಗಿದ್ದರು. 2018 ರಿಂದ ಕೆಕೆಆರ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
2014 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟ್ರಿ ಕೊಟ್ಟ ಸಿಕ್ಸರ್ ಸಿಂಗ್, 2015 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಮರುವರ್ಷವೇ ಸನ್ರೈಸರ್ಸ್ ಹೈದಾರಾಬಾದ್ನೊಂದಿಗೆ ಸಹಿ ಹಾಕಿದ ಯುವಿ 2016-17 ರಲ್ಲಿ ಎಸ್ಆರ್ಹೆಚ್ ತಂಡವನ್ನು ಪ್ರತಿನಿಧಿಸಿದ್ದರು. 2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮರಳಿದ ಯವಿ, 2019 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ್ದರು.