IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಭಾರತೀಯ ಸ್ಪಿನ್ನರ್ ಪ್ರಗ್ಯಾನ್ ಓಜಾ. 2010 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಓಜಾ ಸಹ ಪರ್ಪಲ್ 16 ಪಂದ್ಯಗಳನ್ನು ಆಡಿದ್ದು 21 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

First published:

  • 18

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಐಪಿಎಲ್ 13ನೇ ಸೀಸನ್ ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಯುಎಇ ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದು, ಕೊರೋನಾ ನಡುವೆ ತಂಡಗಳ ಸವಾಲನ್ನು ಸ್ವೀಕರಿಸುವ ಸಿದ್ಧತೆಯಲ್ಲಿದ್ದಾರೆ.

    MORE
    GALLERIES

  • 28

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ಅತ್ತ ಬ್ಯಾಟ್ಸ್​ಮನ್​ಗಳು ಆರೆಂಜ್ ಕ್ಯಾಪ್ ಗುರಿಯೊಂದಿಗೆ ಕಣಕ್ಕಿಳಿಯಲು ತಯಾರಿಯಲ್ಲಿದ್ರೆ, ಇತ್ತ ಬೌಲರ್​ಗಳು ಅಧಿಕ ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ಗುರಿ ಇಟ್ಟುಕೊಂಡಿದ್ದಾರೆ.

    MORE
    GALLERIES

  • 38

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ಇನ್ನು ಕಳೆದ 12 ಸೀಸನ್​ಗಳಲ್ಲಿ 8 ಬಾರಿ ವಿದೇಶಿ ಬೌಲರುಗಳು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಅಂದರೆ ಕೇವಲ 4 ಭಾರತೀಯ ಬೌಲರುಗಳು ಮಾತ್ರ ನೇರಳೆ ಬಣ್ಣದ ಕ್ಯಾಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರಲ್ಲಿ ಮೂವರು ವೇಗದ ಬೌಲರುಗಳು ಎಂಬುದು ವಿಶೇಷ. ಹಾಗೆಯೇ ಏಕೈಕ ಸ್ಪಿನ್ನರ್ ಒಳಗೊಂಡಿರುವ ಭಾರತ ಪರ್ಪಲ್ ಕ್ಯಾಪ್ ವಿನ್ನರ್ ಬೌಲರ್​ಗಳ ಪರಿಚಯ ಇಲ್ಲಿದೆ ನೋಡಿ..

    MORE
    GALLERIES

  • 48

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ಆರ್.ಪಿ.ಸಿಂಗ್: ಪರ್ಪಲ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಬೌಲರ್ ಆರ್.ಪಿ.ಸಿಂಗ್. 2009 ರ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕಣಕ್ಕಿಳಿದಿದ್ದ ಆರ್.ಪಿ ಸಿಂಗ್ 16 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದರು. ಅದು ಕೂಡ ಸರಾಸರಿ 7 ಕ್ಕಿಂತ ಕಡಿಮೆ ರನ್​ಗಳನ್ನು ನೀಡಿ ಎಂಬುದು ವಿಶೇಷ.

    MORE
    GALLERIES

  • 58

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ಪ್ರಗ್ಯಾನ್ ಓಜಾ: ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಭಾರತೀಯ ಸ್ಪಿನ್ನರ್ ಪ್ರಗ್ಯಾನ್ ಓಜಾ. 2010 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಓಜಾ ಸಹ ಪರ್ಪಲ್ 16 ಪಂದ್ಯಗಳನ್ನು ಆಡಿದ್ದು 21 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

    MORE
    GALLERIES

  • 68

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ಮೋಹಿತ್ ಶರ್ಮಾ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಮೋಹಿತ್ ಶರ್ಮಾ 2014 ರ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿದ್ದರು. ಒಟ್ಟು 16 ಪಂದ್ಯಗಳಿಂದ 23 ವಿಕೆಟ್‌ಗಳನ್ನು ಉರುಳಿಸಿದ ಮೋಹಿತ್ ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾಗಿದ್ದರು.

    MORE
    GALLERIES

  • 78

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    ಭುವನೇಶ್ವರ್ ಕುಮಾರ್: ಸತತ ಎರಡು ವರ್ಷಗಳ ಕಾಲ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಹಿಡಿದ ಏಕೈಕ ಬೌಲರ್ ಭುವನೇಶ್ವರ್ ಕುಮಾರ್. ಡ್ವೇನ್ ಬ್ರಾವೋ ಸಹ ಎರಡು ಬಾರಿ ಪರ್ಪಲ್ ಕ್ಯಾಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಭುವಿ ಈ ಸಾಧನೆಯನ್ನು ಸತತವಾಗಿ ಮಾಡಿರುವುದು ವಿಶೇಷ.

    MORE
    GALLERIES

  • 88

    IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!

    2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 17 ಪಂದ್ಯಗಳಲ್ಲಿ 23 ವಿಕೆಟ್ ಉರುಳಿಸಿ ಮೊದಲ ಬಾರಿಗೆ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದರು. 2017ರ ಸೀಸನ್​ನಲ್ಲೂ ಮಾರಕ ಬೌಲಿಂಗ್ ಮಾಡಿದ್ದ ಭುವಿ, 14 ಪಂದ್ಯಗಳಿಂದ ಆಡಿ 26 ವಿಕೆಟ್ ಪಡೆದು ಎರಡನೇ ಬಾರಿ ಐಪಿಎಲ್​ನ ಅತ್ಯುತ್ತಮ ಬೌಲರ್ ಎನಿಸಿಕೊಂಡರು.

    MORE
    GALLERIES